ಆಲೂರು : ಎರಡು ಬೈಕ್‌ಗಳ ನಡುವೆ ಮುಖಾಮುಖಿ
ಡಿಕ್ಕಿಯಾಗಿ ಡಿಕ್ಕಿಯ ರಭಸಕ್ಕೆ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಡೀಪ್ ಕಟ್ಟಿಂಗ್ ಗ್ರಾಮದ ಬಳಿ ನಡೆದಿದೆ
ತಾಲೂಕಿನ ಚಿಕ್ಕಕಣಗಾಲು ಹೊಸಹಳ್ಳಿ ಗ್ರಾಮದ ಯೋಗೇಶ್ (28) ಮೃತ ದುರ್ದೈವಿ. ಮತ್ತೋರ್ವ ಬೈಕ್ ಸವಾರ ತುಮಕೂರಿನ ದಿನೇಶ್ (35) ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಬೈಕ್‌ಗಳು ಜಖಂಗೊಂಡಿವೆ.
ಯೋಗೇಶ್ ಹಾಸನದಿಂದ ಮನೆಗೆ ಹಿಂದಿರುಗಿ ತೆರಳುತ್ತಿದ್ದ ವೇಳೆ ಅತಿವೇಗದಲ್ಲಿ ಕುಪ್ಪೆ ಹೊಸಳ್ಳಿಯಿಂದ ತುಮಕೂರಿಗೆ ತೆರಳುತ್ತಿದ್ದ ದಿನೇಶ್ ಬಂದು ಮುಖಾಮುಖಿ ಡಿಕ್ಕಿಯಾಗಿ ಯೋಗೇಶ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ,
ಆಲೂರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
previous post
