ಸಕಲೇಶಪುರದ ಯಸಳೂರು ಹೋಬಳಿಯ ಚಿಕ್ಕಲ್ಲೂರು ಗ್ರಾಮದಲ್ಲಿ ಆನೆಗಳ ಸಂಚಾರ ಜೋರಾಗಿದೆ.
ಅವುಗಳ ಓಡಾಟದ ವೇಗಕ್ಕೆ ಕೃಷಿ ಗದ್ದೆಗಳು ಹಾಳಾಗ ತೊಡಗಿದೆ.
ನಿನ್ನೆ ರಾತ್ರಿ ಪುಟ್ಟ ಸ್ವಾಮಿ ಹಾಗೂ ರಜೀತ್ ಎಂಬವರ ಸುಮಾರು 3 ಎಕ್ರೆ ಗದ್ದೆಗೆ ಆನೆಗಳು ದಾಳಿ ಮಾಡಿ ಕೃಷಿ ಸಂಪೂರ್ಣ ಹಾಳಾಗಿದೆ.
ಸಾಲ ಮಾಡಿ ಕೃಷಿ ನಂಬಿದವರಿಗೆ ಈಗ ಕೃಷಿಯೇ ಕೈ ಕೊಟ್ರೆ ತಮ್ಮ ಬದುಕು ಹೇಗೆ ಎಂದು ಚಿಂತೆಯಲ್ಲಿರುವ ಅವರು ಅರಣ್ಯ ಇಲಾಖೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
previous post
