ಹೆಬ್ಬಸಾಲೆಯಲ್ಲಿ ‘ಸಂಸ್ಕೃತಿ ಇಂಟರ್‌ನ್ಯಾಷನಲ್ ಶಾಲೆ’ ನಿರ್ಮಾಣಕ್ಕೆ ಭೂಮಿಪೂಜೆ.
ಸಕಲೇಶಪುರ: ತಾಲ್ಲೂಕಿನ ಹೆಬ್ಬಸಾಲೆಯಲ್ಲಿ ನಿರ್ಮಾಣವಾಗಲಿರುವ ‘ಸಂಸ್ಕೃತಿ ಇಂಟರ್‌ನ್ಯಾಷನಲ್ ಶಾಲೆ’ ಯ ಕಟ್ಟಡ ಕಾಮಗಾರಿಗೆ ಶಾಸಕರಾದ ಸಿಮೆಂಟ್ ಮಂಜುನಾಥ್ ರವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಹೆಚ್ ಎಸ್ ಸಂತೋಷ್, ಪ್ರತಿಮಾ ಸಂತೋಷ್ , ಎಲ್ಲಾ ಶಿಕ್ಷಕಿಯರು, ಪೋಷಕರು ಹಾಗೂ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ನೂತನ ಶಾಲೆಯ ನಿರ್ಮಾಣ ಕಾರ್ಯಕ್ಕೆ ಶುಭ ಹಾರೈಸಿದರು.



