Blog

ಬೇಲೂರುನಲ್ಲಿ ರಾಜ್ಯೋತ್ಸವದ ಪ್ರಶಸ್ತಿಯಲ್ಲಿ ತಾರತಮ್ಯ – ಮಾಧ್ಯಮ ಸದಸ್ಯರ ಆಕ್ರೋಶ

🔴ಜೀತ ಮಾಡುವವರಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿ: ಅರ್ಹ ಪತ್ರಕರ್ತರಿಗಿಲ್ಲ ಮನ್ನಣೆ: ಶಾಸಕರ ವಿರುದ್ದ ಕೆಎಂಜೆಯು ಅದ್ಯಕ್ಷ  ಬಸವರಾಜ್ ಆರೋಪ.

ಬೇಲೂರು: ಶಾಸಕರ ಮನೆಯಲ್ಲಿ ಜೀತ ಮಾಡುವವರಿಗೆ  ಮಾತ್ರ ಪತ್ರಿಕೋದ್ಯಮ ಹಾಗೂ ಇತರೆ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಮಾಡುವ ಚಾಳಿ ರೂಡಿಸಿಕೊಂಡಿದ್ದಾರೆ ಎಂದು ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ತಾಲ್ಲೂಕು ಅದ್ಯಕ್ಷ ಬಸವರಾಜ್ ಶಾಸಕ ಸುರೇಶ್ ವಿರುದ್ದ ಆರೋಪ ಮಾಡಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಅದ್ಯಕ್ಷರಾದ ಶಾಸಕ ಸುರೇಶ್ರವರು , ಒಬ್ಬ ಪತ್ರಕರ್ತನ  ಏಜೆಂಟರಾಗಿ  ಅವನು ಹೇಳಿದಂತೆ ಅವರ ಹಿಂಬಾಲಕರಾಗಿ ಜೀತ ಮಾಡುವವಂತಹವರಿಗೆ ಪ್ರಶಸ್ತಿ ನೀಡಿದ್ದಾರೆ.ಹಾಗೂ ಕೃಷಿ,ಸಂಘಟನೆ,ಕಲಾ,ಕ್ಷೇತ್ರದಲ್ಲೂ ತಾರತಮ್ಯ ಮಾಡಿದ್ದಾರೆ.ಪ್ರಶಸ್ತಿ ಯಾರ ಅಪ್ಪನ ಸ್ವತ್ತಲ್ಲ.ಸರ್ಕಾರದಿಂದ ನೀಡುವ ಪ್ರಶಸ್ತಿಯನ್ನು ನೀಡುವಲ್ಲಿ ಅರ್ಹತೆ ಇರುವ ಪತ್ರಕರ್ತರಿಗೆ ಹಾಗೂ ಕೆಲ ಕ್ಷೇತ್ರದಲ್ಲಿ ಗಣನಿಯ ಸೇವೆ ಸಲ್ಲಿಸಿದವರನ್ನು ಬಿಟ್ಟು ಅವರ ಮನೆ ಬಾಗಿಲು ಕಾಯೋ ,ಚಿಲ್ಲರೆ ಕಾಸಿಗೆ ಹಿಂದೆ ಮುಂದೆ ತಿರುಗೋ ಪತ್ರಕರ್ತರಿಗೆ ಪ್ರಶಸ್ತಿ ಕೊಡುವಂತಹ ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.


  ಕಳೆದ ಇಪ್ಪತ್ತು ವರ್ಷದಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪ್ರಶಸ್ತಿ ನೀಡಿದವರ ಪೈಕಿ ಕೆಲ ಪತ್ರಕರ್ತರೆಂದು ವರ್ಷಕ್ಕೊಮ್ಮೆ ಕಾಣಿಸಿಕೊಳ್ಳುವ ಮತ್ತು  ಎರಡಕ್ಷರವಿಲ್ಲದೆ ಶಾಸಕರ ಕಾರ್ಯವೈಕರಿ ಬಗ್ಗೆ ಶಾಸಕರನ್ನು ಹೊಗಳಿ ಪತ್ರಿಕೆಯಲ್ಲಿ ಬರೆಯಿಸಿ ಪ್ರಶಸ್ತಿ ಪಡೆದುಕೊಳ್ಳುವ ನೈಪುಣ್ಯತೆ ಹೊಂದಿದ್ದಾರೆ. ಇನ್ನೂ ಆಯ್ಕೆ ಸಮಿತಿಯಲ್ಲಿ ಇರುವ ಅಧಿಕಾರಿಗಳನ್ನೆ ಬೆದರಿಸಿ ಆಯ್ಕೆ ಸಮಿತಿಯಲ್ಲಿ ಏಕಾಪಕ್ಷೀಯ ನಿರ್ಧಾರ ತೆಗೆದುಕೊಂಡು ತಮಗೆ ಬೇಕಾದವರಿಗೆ ಪ್ರಶಸ್ತಿ ಆಯ್ಕೆ ಮಾಡುವುದು ಸರಿಯಲ್ಲ ಎಂದರು.

ತಾಲ್ಲೂಕು ಪತ್ರಕರ್ತರ ಸಂಘದಲ್ಲಿ ಕೆಲಸ ಮಾಡುವಂತಹ ಪತ್ರಕರ್ತರಿಗೆ ಪ್ರಶಸ್ತಿ ನೀಡುವಂತೆ ಸಂವಿಧಾನದಲ್ಲಿ ಬರೆದಿದ್ದಾರಂತೆ.ರಾಜ್ಯದಲ್ಲಿ ಒಂದೆ ಸಂಘ ಮಾತ್ರ ಇದೆಯಂತೆ,ವಿಧಾನ ಸೌಧದಿಂದ  ಶಿವಾನಂದ ತಗಡೂರು ಗೆ ಆಹ್ವಾನ ಮಾತ್ರ ನೀಡುತ್ತಾರಂತೆ ಎಂದು ಹಿತ್ತಾಳೆ ಕಿವಿ ಶಾಸಕ  ಎಂಬುದನ್ನ ಸಾಭೀತು ಮಾಡಿಕೊಂಡಿದ್ದಾರೆ

ಪಾ…ಪ ..ಶಾಸಕರಿಗೆ ರಿಯಲ್ ಎಸ್ಟೇಟ್ ಮಾಡೋದು,ಕಳಪೆ ಕಾಮಗಾರಿ ಮಾಡೋದು ತಮ್ಮ ಆಪ್ತ  ಪತ್ರಕರ್ತರಿಗೆ ಒಂದಿಷ್ಟುಚಿಲ್ಲರೆ ಕೊಟ್ಟು ಸುದ್ದಿ ಬರೆಸೋದು ಬಿಟ್ಟರೆ ಪತ್ರಿಕೋದ್ಯಮದ  ಅರಿವು ಶಾಸಕರಿಗಿಲ್ಲ  ಅನ್ನಿಸುತ್ತೆ, ಸಂವಿಧಾನದ 4ನೆ ಅಂಗವಾದ ಪತ್ರಿಕಾರಂಗದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಬಸವರಾಜು ಹೇಳಿದರು. 


  ಬಾಯಿ ಬಿಟ್ಟರೆ ಸಂವಿಧಾನದ ಗುಣಗಾನ.ಜಾತಿ,ಧರ್ಮ,ನೋಡಲ್ಲ ಎಲ್ಲರೂ ಒಂದೆ ಎನ್ನುವ ಶಾಸಕ ಪ್ರಶಸ್ತಿ ವಿಚಾರದಲ್ಲಿ ಏಕೆ ತಾರತಮ್ಯ.ಒಬ್ಬ ಪತ್ರಕರ್ತನ ಕಂಡರೆ ಯಾಕಿಷ್ಟು ಭಯ.ತಾಲ್ಲೂಕಿನಲ್ಲಿ ನಿಮ್ಮ ಅಧಿಕಾರದ ಅವ್ಯವಸ್ಥೆಯನ್ನು ಮರೆಮಾಚುವ ಸಲುವಾಗಿ ಪತ್ರಕರ್ತನ ಏಜೆಂಟಾಗಿ ಕೆಲಸ ಮಾಡಿ ಪಾರದರ್ಶಕ ವಾಗಿ ಕೆಲಸ ಮಾಡುವ ಪತ್ರಕರ್ತರನ್ನು ಮತ್ತು ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನ ಕಡೆಗಣಿಸುತ್ತಿದ್ದಿರಾ..ಇಂತಹ ಒಳ್ಳೆ ಯ ಜನಪ್ರಿಯ ಶಾಸಕ ನಮ್ಮ ಬೇಲೂರಿಗೆ ಅಗತ್ಯವಿದೆ. ಎಂದರು.

ಕಳೆದ ಭಾರಿಯೂ ಪ್ರಶಸ್ತಿ ನೀಡುವಲ್ಲಿ ತಾರತಮ್ಯ ಮಾಡಿದ್ದ ಶಾಸಕರು ಈ ಭಾರಿಯೂ  ತನ್ನ ಬುದ್ದಿ ಬದಲಾಯಿಸಿಲ್ಲವಾದರೂ ಕೆಲವೇ ದಿನಗಳಲ್ಲಿ ನಿಮ್ಮ ರಾಜಕೀಯ ಭವಿಷ್ಯದ ನಿರ್ಣಯವನ್ನು ಬೇಲೂರಿನ ಜನ ನಿರ್ಧಾರ ತೆಗೆದುಕೊಳ್ಳುವ ದಿನ ದೂರವಿಲ್ಲ ಎಂದು ಶಾಸಕರ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು

ಕಳೆದ 20 ವರ್ಷದಿಂದ ಪತ್ರಿಕೋದ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದು,ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ತಾಲ್ಲೂಕು ಅದ್ಯಕ್ಷನಾಗಿ,ಸಾಮಾಜಿಕವಾಗಿ ಪತ್ರಿಕಾ ಧರ್ಮಕ್ಕೆ ಯಾವುದೆ ಕಳಂಕವಿಲ್ಲದಂತೆ,ಸ್ಥಳಿಯ ಶಾಸಕರ ಜೀತದಾಳಾಗಿ ಕೆಲಸ ಮಾಡದೆ ನಿಷ್ಪಕ್ಷಪಾತ ವಾಗಿ ತಾಲ್ಲೂಕಿನಾದ್ಯಂತ ಶಾಸಕರ ಕಳಪೆ ಗುಣಮಟ್ಟದ ಕೆಲಸಗಳ ವಿರುದ್ದ ಸುದ್ದಿ ಮಾಡುತ್ತಿರುವ ನಮ್ಮ ಸಂಘದ ಸದಸ್ಯರಿಗೆ ಪ್ರಶಸ್ತಿ ನೀಡಬಾರದು ಎಂಬ ಉದ್ದೇಶದಿಂದ ಕಳೆದ ಬಾರಿಯಿಂದಲೂ ಪ್ರಶಸ್ತಿಗೆ ನೀಡಿದ ಅರ್ಜಿಯನ್ನು ತಿರಸ್ಕರಿಸಲಾಗಿದೆ.ನಮ್ಮ ಸಂಘದಲ್ಲಿ ಸದಸ್ಯರಾಗಿರುವ ಪತ್ರಕರ್ತರಿಗೆ ಅಧಿಕಾರಿಗಳಿಂದಲೂ ವಸೂಲಿ ಮಾಡುವ ಅಥವಾ ಶಾಸಕರು ನೀಡುವ ಚಿಲ್ಲರೆ ಕಾಸಿಗೆ ಗುಲಾಮಗಿರಿ ಮಾಡುವ ಅಭ್ಯಾಸ ವಿಲ್ಲ.ನೈಜ ಪತ್ರಕರ್ತರಿಗೆ ಪ್ರಶಸ್ತಿ ನೀಡದಿದ್ದರೂ ಪರವಾಗಿಲ್ಲ ನಾವು ಯಾರ ಪರವೂ ಇಲ್ಲ ಅನ್ಯಾಯದ ವಿರುದ್ದ ಹೋರಾಟ  ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ .

Related posts

ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಹಲ್ಲೆ ಪ್ರಕರಣ – ಜೈಲಿನಲ್ಲಿರುವ ಕಾರ್ಯಕರ್ತರ ಭೇಟಿ ಮಾಡಿದ ಉಪ ಸಭಾಪತಿ ಹಾಗೂ ಶಾಸಕರು

Bimba Prakashana

ಆಲೂರು ಬಳಿ ಅಪಘಾತ

Bimba Prakashana

ಸಕಲೇಶಪುರದಲ್ಲಿ ನಾಡ ಪ್ರಭು ಕೆಂಪೇಗೌಡ ರ ಜಯಂತಿ ಬಗ್ಗೆ ಸಭೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More