ಸಕಲೇಶಪುರದ ಯಸಳೂರು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಸಾಮಾನ್ಯ ಸ್ಥಾನಕ್ಕೆ ಪುನೀತ್ ಬನ್ನ ಹಳ್ಳಿಯವರು ಪ್ರಬಲ ಆಕಾಂಕ್ಷಿ ಎನ್ನಲಾಗುತ್ತಿದೆ.
ಈ ಕ್ಷೇತ್ರದಲ್ಲಿ ಹಲವಾರು ಮಂದಿ ಅಭ್ಯರ್ಥಿ ಆಗಲು ಇಚ್ಛೆ ಹೊಂದಿದ್ದು ಮುಂಚೂಣಿಯಲ್ಲಿ ಪುನೀತ್ ಹೆಸರು ಕೇಳಿ ಬರುತ್ತಿದೆ.
ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಸಹಕಾರ ಮನೋಭಾವನೆ ಮೂಲಕ ಜನ ಮಾನಸದಲ್ಲಿ ನೆಲೆಸಿರುವ ಇವರ ವ್ಯಕ್ತಿತ್ವ ಬಹಳ ಅಪರೂಪದ್ದು.
ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕವಾಗಿ ಸಹಕಾರ ನೀಡುವ ಇವರ ಮನೋಭಾವನೆ ಮೆಚ್ಚುಗೆ ಪಡೆದಿದೆ.
ಬದುಕು ಏನು, ಬದುಕು ಹೇಗೆ ಎಂಬ ಹಲವಾರು ಪ್ರಶ್ನೆಗಳು ಪ್ರತಿ ವ್ಯಕ್ತಿಯಲ್ಲೂ ಅಡಕವಾಗಿರುತ್ತದೆ. ಕೆಲವರಿಗೆ ಹಣವೇ ಶ್ರೇಷ್ಠ. ಹಣವನ್ನು ಕೂಡಿಟ್ಟು ಯಾವುದಕ್ಕೂ ನೀಡದೆ ಹಗಲು ರಾತ್ರಿ ಎನ್ನದೆ ಬರೇ ತನ್ನ ಬ್ಯಾಂಕ್ ವ್ಯವಹಾರ ನೋಡುವ ಸಾವಿರಾರು ಮಂದಿ ಇದ್ದಾರೆ.
ಆದರೆ ಇವರೆಲ್ಲರನ್ನು ಮೀರಿಸುವ ಶ್ರೇಷ್ಠ ಮಾನವೀಯ ಗುಣವುಳ್ಳ, ಅಶಕ್ತರ, ದುರ್ಬಲರ ಕಣ್ಣೀರು ಒರೆಸುವ ಮೂಲಕ ಸದ್ದಿಲ್ಲದೇ ಇರುವ ಪುನೀತ್ ರಂತಹವರು ಸಮಾಜದಲ್ಲಿ ಅಪರೂಪದ ವ್ಯಕ್ತಿಗಳಾಗುತ್ತಾರೆ. ಸಮಾಜಕ್ಕೆ ಒಂದು ವಿಶೇಷ ಸಂದೇಶ ನೀಡುತ್ತಾರೆ
ಈ ಬಾರಿ ಚುನಾವಣೆ ಆದರೆ ಪುನೀತ್ ಬನ್ನ ಹಳ್ಳಿಯವರು ಸಾವಿರಾರು ಮತಗಳ ಅಂತರದಿಂದ ವಿಜಯ ಕಾಣಲಿದ್ದಾರೆ ಎಂಬ ಮಾತನ್ನು ಮತದಾರರು ಹೇಳುತ್ತಾರೆ
previous post
