Blog

ಹೆತ್ತೂರು ಆಸ್ಪತ್ರೆಗೆ ಸೌಲಭ್ಯ ನೀಡುವಂತೆ ಆಗ್ರಹ

ನಾಗೇಶ್ ಎಂ ಎಚ್ ಮಾಗೇರಿ.

🔴ತಾಲ್ಲೂಕು ಅರೋಗ್ಯಧಿಕಾರಿ
ಗೈರು.
ಬದಲಿಗೆ ಬಂದ ಇನ್ ಚಾರ್ಜ್  ಇದ್ದ ರಮೇಶ್ ಭೇಟಿ.

🔴ಜಿಲ್ಲಾ ಆರೋಗ್ಯಧಿಕಾರಿ ಬರುವಂತೆ ಪಟ್ಟು ,

🔴ಯೂತ್ ಲಯನ್ಸ್ ಪೇಡೆರೇಷನ್ ಸಕಲೇಶಪುರ. ಮತ್ತು
ಗ್ರಾಮಸ್ಥರಿಂದ ಜಿಲ್ಲಾ ಅರೋಗ್ಯಧಿಕಾರಿ ಯವರಿಗೆ ತರಾಟೆ.

🔴ಜಿಲ್ಲಾ ಅರೋಗ್ಯಧಿಕಾರಿ ಬಂದ ತಕ್ಷಣ ಪ್ರತ್ಯಕ್ಷವಾದ  ಆಂಬುಲೆನ್ಸ್.


🔴ಸಾವುಗಳಿಗೆ ಕಾರಣಕರ್ತರಾದ ಶುಶ್ರೂಕಿಯಾದ ಮಂಜುಳಾರವರನ್ನು ಕೆಲಸದಿಂದ  ಕೂಡಲೇ ವಜಾಗೊಳಿಸುವಂತೆ ಪಟ್ಟು*.



ಸಕಲೇಶಪುರ :
ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿಯ ಬಡ ಹಾಗೂ ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಒದಗಿಸಬೇಕಾದ ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ, ರಾತ್ರಿ ವೇಳೆ ವೈದ್ಯರ ಲಭ್ಯತೆಯ ಸಮಸ್ಯೆ, ತುರ್ತು ಹೆರಿಗೆ ಸೇವೆಗಳ ಕೊರತೆ ಹಾಗೂ ಆ್ಯಂಬುಲೆನ್ಸ್ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಹೆತ್ತೂರು ಗ್ರಾಮದ ಷಣ್ಮುಖ ಅವರ ಮಗಳು ಅಂಬಿಕಾ  ಹೆತ್ತೂರು ಹೋಬಳಿಯ
A ಬ್ಲಾಕ್ ನಿವಾಸಿಯಾಗಿದ್ದು,
ಅಂಬಿಕಾರವರಿಗೆ  ಹೆರಿಗೆ ನೋವು ಕಾಣಿಸಿಕೊಂಡು  ಹೆತ್ತೂರು ಆಸ್ಪತ್ರೆಗೆ  ದಾಖಲು ಮಾಡಿರುತ್ತಾರೆ.

ಇಲ್ಲಿ ಸುಮಾರು ಮೂರು ಗಂಟೆಗಳ ಚಿಕಿತ್ಸೆಯ
ನಂತರ  ಮಗು ಅಡ್ಡಲಾಗಿದೆ ಇಲ್ಲಿ ಆಗಲ್ಲ ನೀವು ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಇಲ್ಲಿನ ಸಿಬ್ಬಂದಿಯಾದ ಮಂಜುಳಾ ತಿಳಿಸಿರುತ್ತಾರೆ.

ಇಲ್ಲಿ ಆಂಬುಲೆನ್ಸ್  ವ್ಯವಸ್ಥೆ ಸರಿಯಾಗಿ ಸಿಗದಿದ್ದಾಗ
ತಡವಾಗಿ ಸಕಲೇಶಪುರಕ್ಕೆ
ಕರೆದುಕೊಂಡು ಬಂದಿದ್ದು,
ಇಲ್ಲೂ ಕೂಡ  ಡಾಕ್ಟರ್ ಗರ್ಭಿಣಿಯನ್ನೂ ನೋಡಿ ನೀವು ಹಾಸನ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು
ಸಂಬಂಧಿಕರಿಗೆ ತಿಳಿಸಿದ್ದಾರೆ.
ಕೂಡಲೆ ಹಾಸನ ಜಿಲ್ಲಾಸ್ಪತ್ರೆಗೆ  ಕರೆದುಕೊಂಡು ಬಂದು ಡಾಕ್ಟರ್  ಚಿಕಿತ್ಸೆ ನೀಡಿ
ನಾರ್ಮಲ್ ಡೆಲಿವರಿ ಆಗುವುದಿಲ್ಲ. ಸಿಜೇರಿಯನ್ ಆಗ್ಬೇಕು ಎಂದು ತಿಳಿಸಿರುತ್ತಾರೆ.
ಈ  ಸಂದರ್ಭದಲ್ಲಿ ಮಗು ಹೊಟ್ಟೆಯಲ್ಲಿ  ಮರಣ ಹೊಂದಿದೆ ಎಂದು ವೈದ್ಯರು ತಿಳಿಸಿ ಮಗುವಿನ ದೇಹವನ್ನು
ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಹಾಗೂ  ಅಂಬಿಕಾ ರವರ ಸ್ಥಿತಿಯು ಗಂಭೀರವಾಗಿದ್ದು ಇವರನ್ನು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ಕರೆದುಕೊಂಡು ಹೋಗಲು ರೆಫರ್ ಮಾಡಿರುತ್ತಾರೆ. 
ಆ್ಯಂಬುಲೆನ್ಸ್ ನಲ್ಲಿ ಬೆಂಗಳೂರಿಗೆ ಹೋಗುವ ದಾರಿ ಮಧ್ಯದಲ್ಲಿ ಅಂಬಿಕಾ ರವರು ಮರಣ ಹೊಂದಿದ್ದು, ಅಂಬಿಕಾರವರ ದೇಹವನ್ನು  ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.

ಇದೇ ರೀತಿಯ ಸಮಸ್ಯೆ ಈ ಹಿಂದೆಯೂ ಘಟಿಸಿದ್ದು, ದೊಡ್ಡಕಲ್ಲೂರು ಗ್ರಾಮದ ಬಾಲಕ ಹಾವು ಕಚ್ಚಿ ಸಾವನ್ನಪ್ಪಿದ ಘಟನೆ ವೇಳೆಯೂ ಇಲ್ಲಿನ ಆಡಳಿತ ವೈಫಲ್ಯವೇ ಕಾರಣವಾಗಿತ್ತು.

ಹೆತ್ತೂರು ಗ್ರಾಮದ ಮಹಿಳೆಯೂಬ್ಬರು ಸಾವನ್ನಪ್ಪಲು ಕೂಡ ಇಲ್ಲಿನ ಆಡಳಿತ ನಿರ್ಲಕ್ಷವೇ ಕಾರಣವಾಗಿ ಹೆತ್ತೂರು ಗ್ರಾಮಸ್ಥರು ಮತ್ತು ಸಾರ್ವಜನಿಕ ಬಂಧುಗಳು ಇಲ್ಲಿನ ಸಿಬ್ಬಂದಿ ಮಂಜುಳಾ ರವರನ್ನು ಕೆಲಸದಿಂದ ವಜಾಗೊಳಿಸುವಂತೆ ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಹಾಗೂ ಇದಕ್ಕೆ ಪೂರಕವಾಗಿ ತನಿಖೆಗೆ ಹಾಜರು ಪಡಿಸಲು ಕ್ರಮ ತೆಗೆದುಕೊಂಡಿರುತ್ತಾರೆ

ಈ ಎಲ್ಲವನ್ನೂ ಪರಿಶೀಲಿಸಿ ಅಂಬಿಕಾ ಕುಟುಂಬಸ್ಥರ ಹೇಳಿಕೆಯನ್ನು ಪರಿಗಣಿಸಿ ಸಂಬಂಧಿಸಿದ ಇಲಾಖೆಯ ಎಲ್ಲಾ ಸಿಬ್ಬಂದಿಗಳನ್ನು ಸೂಕ್ತ ತನಿಖೆಗೆ ಒಳಪಡಿಸಿ ಈ ಸಾವುಗಳಿಗೆ ಕಾರಣಕರ್ತರಾದ ಶುಶ್ರೂಷಕಿಯಾದ ಮಂಜುಳಾರವರನ್ನು ಕೆಲಸದಿಂದ  ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿದರು
ಹಾಗೂ ಸಾವನ್ನಪ್ಪಿರುವ ಅಂಬಿಕಾ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು

ಹಾಗೂ ಇಲ್ಲಿನ ಆಸ್ಪತ್ರೆಗೆ ಅಗತ್ಯವಾಗಿರುವ ಅವಶ್ಯಕತೆಗಳಾದ

1. 24×7 ಲಭ್ಯವಿರುವಂತೆ ಮಹಿಳಾ ವೈದ್ಯ ಸೇರಿದಂತೆ ಎರಡು ಜನ ವೈದ್ಯರು,

2. ಅಗತ್ಯವಾಗಿರುವ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವಂತೆ,

3.  ಹೆತ್ತೂರು ಹೋಬಳಿ ಕೇಂದ್ರವಾಗಿದ್ದು, ಅಗತ್ಯವಾಗಿರುವ ಸಿಬ್ಬಂದಿಗಳು ಮತ್ತು ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿದರು

ಈ ಎಲ್ಲವನ್ನೂ ಪರಿಶೀಲಿಸಿ ಕ್ರಮ ಜರುಗಿಸುವ ಮೂಲಕ ಹೆತ್ತೂರು  ಹಾಗೂ ಸುತ್ತಮುತ್ತಲಿನ ಸಾರ್ವಜನಿಕ ಬಂಧುಗಳಿಗೆ ಅನುಕೂಲ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯೂತ್ ಲಯನ್ಸ್ ಫೆಡರೇಷನ್ ಅಧ್ಯಕ್ಷರಾದ  ಸ್ಟಿವನ್ ಪ್ರಕಾಶ್,  ಉಪಾಧ್ಯಕ್ಷರಾದ ನಾಗೇಶ್ ಎಂ ಎಚ್ ಮಾಗೇರಿ, ಪ್ರಧಾನ ಕಾರ್ಯದರ್ಶಿಯಾದ ಯೋಗೇಶ್ ದೊಡ್ಡಕಲ್ಲೂರು, ಕಾರ್ಯದರ್ಶಿ ವಿಕ್ರಮ್ ಹೆತ್ತೂರು,  ದಲಿತ    ಹಿರಿಯ ಮುಖಂಡರಾದ
ನಿವೃತ್ತ ಪಿ ಡಿ ಓ ಕೋಮರಯ್ಯ, ಹೆತ್ತೂರು ಅಣ್ಣಯ್ಯ ಹೆತ್ತೂರು, ವಿರೇಶ್ ವಳಲಹಳ್ಳಿ, ಹೆತ್ತೂರು ಕಾಫಿ ಬೆಲೆಗಾರರ ಸಂಘದ ಪದಾಧಿಕಾರಿಗಳು
ಎಲ್ಲಾ ಸಾರ್ವಜನಿಕರು ಉಪಸ್ಥಿತರಿದ್ದರು.

Related posts

ಲಿಟಲ್ ಚಾಂಪ್ಸ್ – ಸಕಲೇಶಪುರದ ಅನುಷ್ಕಾ ಮುನ್ನಡೆ

Bimba Prakashana

ಆಧುನಿಕ ಕಾಲದಲ್ಲಿ ಕೂಡಾ ಬಹಿಷ್ಕಾರ ಪದ್ಧತಿ ಜೀವಂತ

Bimba Prakashana

ಮಾದಕ ವಸ್ತು ಮಾರಾಟ – ಓರ್ವ ಬಂಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More