ಸಕರೇಶಪುರ: ರಾಮಾಯಣದಂತಹ ಕೃತಿ ಪಡೆದ ನಮ್ಮ ದೇಶದ ಆದರ್ಶ ದ ಪ್ರತೀಕ. ಭಾರತೀಯ ಸಂಸ್ಕೃತಿ ಎತ್ತಿಹಿಡಿದ ಮಹಾನ್ ಲೇಖಕ ವಾಲ್ಮಿಕಿ ಮಹರ್ಶಿ ಎಂದು ಉಪ ವಿಭಾಗಾಧಿಕಾರಿ ಹುಲ್ಲು ಮನಿ ತಿಮ್ಮಣ್ಣ ಹೇಳಿದರು.
ಸಕಲೇಶಪುರ ತಾಲೋಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ವಾರ್ಷಿಕೆ ಜಯಂತಿ ಕಾರ್ಯಕ್ರಮ ಉದ್ದಾನಿಸಿ ಮಾತನಾಡಿ ಹಿಂದಿನ ಕಾಲದಲ್ಲಿ ಮಕ್ಕಳಿಗೆ ರಾಮಾಯಣ ಓದಿಸುವಂತಹಾ ಸಂಸ್ಕೃತಿ ನಮ್ಮಲ್ಲಿತ್ತು ಅಂತಹಾ ಮಹನ್ ಗ್ರಂಥ ಬರೆದೆ ವಾಲ್ಮೀಕಿ ಅವರಿಗೆ ಗೌರವಿಸಿದ ಹುಲ್ಲು ಮನಿ ತಿಮ್ಮಣ್ಣ ಮನುಷ್ಯ ಸೈಕಾಲಜಿಕಲ್ಲಾಗಿ ಸದೃಡ ಹೇಗೆ ಮಾಡಬೇಕು. ಮನುಷ್ಯ ಕುಗ್ಗಿದಾಗ ಹೇಗೆ ಇನ್ಸ್ಪೈರ್ ಮಾಡಿ ಆತ್ಮ ಸ್ಥೈರ್ಯ ಹೆಚ್ಚಿಸಬೇಕು.
ಹನುಮಂತ ಸಾಗರ ಉಲ್ಲಂಗನೆ ಮಾಡಲು ಯೋಚಿಸುತ್ತಿದ್ದಾಗ ಜಾಂಬುವಂತ ಮತ್ತು ಇತರರು ಬಂದು ಹಮಂತ ನೀನು ವಾಯು ದೇವನ ಮಗ ನಿನ್ನಲ್ಲಿ ಆಗದಂತ ಕೆಲಸ ಯಾವುದೂ ಇಲ್ಲ. ಎಂದೆಲ್ಲ ಆತ್ಮಸ್ಥೈರ್ಯ ತುಂಬಿ ಸಮುದ್ರೋಲ್ಲಂಗನೆ ಮಾಡಲು ಅಣಿಗೊಳಿಸುತ್ತಾರಲ್ಲಾ. ಅಂತಹಾ ಸನ್ನಿವೇಶ ಅಂದಿನಿಂದ ಇಂದಿನವರೆಗೂ ಪ್ರಭಾವವನ್ನು ಬೀರುತ್ತಾ ಗ್ರಂಥ ಇಂದಿಗೂ ಜಾಗೃತವಾಗಿದೆ. ಹಾಸನದಲ್ಲಿ ಯಶ್ ಅವರು 2 ಸಾವಿರ ಕೋಟಿ ರಾಮಾಯಣ ಕಥೆಗೆ ವಿಚ್ಚ ಮಾಡಲಿಚ್ಚಿಸಿದ್ದಾರೆ. ಓದಿದಷ್ಟು ಹೊಸ ಹೊಸ ರೂಪದಲ್ಲಿ ರಾಮಾಯಣಸಿಗುತ್ತದೆ. ಇದನ್ನು ರಾಮಾಯಣ ದರ್ಶನಂ ಎಂದು ಕುವೆಂಪುಬರೆಯುತ್ತಾರೆ.
ಪ್ರತಿಯೊಬ್ಬ ಪಾಪಿಗೂ ಕೂಡ ಉದ್ದಾರ ಇದೆ ರಾವಣ ಪಾಪಿ ಆದರೂ ಕೂಡ ಆತನಿಗೂ ಉದ್ದಾರ ಇದೆ. ಸೀತಾಮಾತೆ ಮಗನಾಗಿ ತೊಡೆಯ ಮೇಲೆ ಕೂರಿಸಿಕೊಳ್ಳುವ ಸಂಧರ್ಭ ಕೃತಿಯಲ್ಲಿದೆ. ಜನರ ಅಪೇಕ್ಷೆಯಂತೆ ರಾಮಾಯಣ ಇದೆ ಎಂದು ದಶರತ ಮಹಾರಾಜರೇ ಹೇಳಿದ್ದಾರೆ. ಕಂಬ ರಾಮಾಯಣ. ಕೊರಡಿ ರಾಮಾಯಣ ಹೀಗೆ ಹಲವಾರು ರಾಮಾಯಣಗಳಿವೆ ಅಷ್ಟು ರಾಮಾಯಣಗಳಲ್ಲಿ ಇಡೀ ಭೂಮಿಯನ್ನು ನಾಗರಹಾವು ತನ್ನ ಮೂತಿಯಿಂದ ಎತ್ತಿಹಿಡಿದಿದೆ.ಅಂದರೆ ಅಷ್ಟೂ ರಾಮಾಯಣ ಭಾರತೀಯ ಧರ್ಮಗ್ರಂಥಗಳನ್ನು ಕಟ್ಟಿಕೊಂಡಂತಹ ಮೂಲಗ್ರಂಥ ರಾಮಾಯಣ. ಭಾರತೀಯರ ನರನಾಡಿಗಳಲ್ಲಿ ಜೀವಿಸತಕ್ಕಂತಹದ್ದು. ರಾಮಾಯಣ. ಆದರ್ಶ ಅಣ್ಣ ತಮ್ಮ ಹೇಗಿರಬೇಕೆಂದರೆ ರಾಮ ಲಕ್ಷ್ಮಣರಂತಿರಬೇಕೆಂಬುದು ಹೇಳಿದ್ದೆ ರಾಮಾಯಣ ತಂದೆ ಮಾತನ್ನು ನೆಡಿಸಿಕೊಟ್ಟದ್ದೂ ರಾಮಾಯಣವೇ. ಇದು ಭಾರತ ಒಂದೇ ಅಲ್ಲ ಸೆರೆಯ ಶ್ರೀಲಂಕಾ, ಇಂಡೋನೇಷಿಯಾ ರಾಷ್ಟ್ರಗಳಲ್ಲೂ ಭಾರತೀಯ ಸಂಸ್ಕೃತಿಯನ್ನು ನೋಡಿದ್ದೇವೆ. ರಾಮಾಯಣ ನಮ್ಮ ದೇಶದ ಆದರ್ಶದ ಪ್ರತೀಕ. ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿದ ಮಹಾನ್ ಲೇಖಕ ವಾಲ್ಮಿಕಿ ಮಹರ್ಶಿಎಂದರು.
ಈ ಕಾರ್ಯಕ್ರಮದಲ್ಲಿ ಪ್ರೊ.ಅಶೋಕ್ ಎಸ್ ಕೆ. ವಿಚಾರಧಾರೆ ಮಂದಿ ಸಿದರು
ಪುಷ್ಪ ಕ್ಷೇತ್ರ ಶಿಕ್ಷಣಾಧಿಕಾರಿಗಳು. ಸಿಎಂ ಮೋಹನ್ ಕುಮಾರ್ ಸಮಾಜ ಕಲ್ಯಾಣ್ ಅಧಿಕಾರಿ. ಮಹೇಶ್ವರಪ್ಪ ಪುರಸಭೆ ಮುಖ್ಯಾಧಿಕಾರಿ. ತಾಪಂ ಆದಿತ್ಯ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದು. ನಾಗರೀಕರು. ಅಧಿಕಾರಿಗಳು. ಹಾಗು ಮುಖಂಡರು ಹಾಜರಿದ್ದರು.
ಬೈರಪ್ಪ ಸಕಲೈಶ್ವರ್
