Blog

ಹೊಸೂರು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಸ್ಥಳೀಯರಿಗೆ ಅವಕಾಶ ಕಲ್ಪಿಸಿ


ನಾಗೇಶ್ ಎಂ ಎಚ್ ಮಾಗೇರಿ



🔴ಹೊಸೂರು ಅಂಗನವಾಡಿ ಕೇಂದ್ರದ ಖಾಲಿ  ಇರುವ ಕಾರ್ಯಕರ್ತೆ ಹುದ್ದೆಗೆ ಸ್ಥಳೀಯರಿಗೆ ಅವಕಾಶ ಕಲ್ಪಿಸಿ.

ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿ ವ್ಯಾಪ್ತಿಯ ಹೊಸೂರು ಅಂಗನವಾಡಿ ಕೇಂದ್ರ ಮತ್ತು  ತಡಕಲು ಗ್ರಾಮದ ಮಳ್ಳೀದೀಣೆ ಅಂಗನವಾಡಿ ಕೇಂದ್ರಗಳೆರೆಡರಲ್ಲೂ ಅಂಗನವಾಡಿ ಕಾರ್ಯಕರ್ತೆಯು ಒಬ್ಬರೇ ಕಾರ್ಯ ನಿರ್ವಹಿಸುತ್ತಿದ್ದು, ಇವರು ತಡಕಲು ಗ್ರಾಮದ ಮಳ್ಳೀದೀಣೆ ಅಂಗನವಾಡಿಯ ಖಾಯಂ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸೂರು ಗ್ರಾಮದ ಅಂಗನವಾಡಿ ಕೆಂದ್ರದಲ್ಲಿ ಕಾರ್ಯಕರ್ತೆ ಹುದ್ದೆಯು ಖಾಲಿಯಿದ್ದು, ಇವರು ತಾತ್ಕಾಲಿಕವಾಗಿ ಕಾರ್ಯನಿವರ್ಹಿಸುತ್ತಿದ್ದಾರೆ.

ಹೊಸೂರು ಗ್ರಾಮದಲ್ಲಿಯೇ ಅನೇಕ ಶಿಕ್ಷಣದ ಅರ್ಹತೆ,ಅನುಭವ ಮತ್ತು ಸೇವಾಭಾವ ಹೊಂದಿರುವ ಅರ್ಹ ಮಹಿಳೆಯರು ಹಲವರಿದ್ದು, ಹೊಸೂರು ಅಂಗನವಾಡಿ ಕೇಂದ್ರದಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ  ಸ್ವಗ್ರಾಮದ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿ ನೇಮಕಾತಿ ಮಾಡಿಸಬೇಕೆಂದು ಗ್ರಾಮಸ್ಥರ ಪರವಾಗಿ ಇಂದು ಯುವಮುಖಂಡರಾದ ವಸಂತ್ ಹೊಸೂರು ರವರು ತಾಲ್ಲೂಕು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಿದರು.

Related posts

ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಹಲ್ಲೆ ಪ್ರಕರಣ – ಜೈಲಿನಲ್ಲಿರುವ ಕಾರ್ಯಕರ್ತರ ಭೇಟಿ ಮಾಡಿದ ಉಪ ಸಭಾಪತಿ ಹಾಗೂ ಶಾಸಕರು

Bimba Prakashana

ಕಾರಗೋಡು ಗ್ರಾಮದಲ್ಲಿ ನಾಲ್ಕು ಕಡೆ ಕಳ್ಳತನ

Bimba Prakashana

ಸೆಪ್ಟೆಂಬರ್ 19 ಸಕಲೇಶಪುರದಲ್ಲಿ ಪ್ರಜಾ ಸೇವಾ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More