Blog

ಕಾರಗೋಡು ಗ್ರಾಮದಲ್ಲಿ ನಾಲ್ಕು ಕಡೆ ಕಳ್ಳತನ

ಕಾರಗೋಡು ಗ್ರಾಮದಲ್ಲಿ ಕಳ್ಳರ ಕರಾಮತ್ತು •
ಆಲೂರು ತಾಲೂಕು  ಕೆ ಹೊಸಕೋಟೆ ಹೋಬಳಿಯ ಕಾರಗೋಡು ಗ್ರಾಮದಲ್ಲಿ ಕಳ್ಳರು ತಮ್ಮ ಕೈ ಚಳಕವನ್ನು ತೋರಿಸಿದ್ದಾರೆ, ಕಳೆದ ವಾರದಂದು ರಾತ್ರಿಯ ಸಮಯದಲ್ಲಿ ನಡೆದಿರುವ ಕಳ್ಳತನ ತಡವಾಗಿ ಬೆಳಕಿಗೆಬಂದಿದೆ


ಕಳೆದವಾರ ಅತಿಯಾದ ಮಳೆ ಇದ್ದ ಕಾರಣ ತಮ್ಮ ತಮ್ಮ ತೋಟಗಳಿಗೆ ಯಾರು ಸಹ ಭೇಟಿ ನೀಡದಿರುವುದು ಈ ಕಳ್ಳತನ ತಡವಾಗಿ ಬೆಳಕಿಗೆ ಬರಲು ಕಾರಣವಾಗಿದೆ.


• 🔴ಕಾರಗೋಡು ಗ್ರಾಮದಲ್ಲಿ ಒಂದೇ ರಾತ್ರಿಯಲ್ಲಿ ಒಟ್ಟು ನಾಲ್ಕು ಕಡೆ ಕಳ್ಳತನ


•ಕಾರಗೋಡು ಗ್ರಾಮದ ವಿನೋದ್, ಚಂದ್ರೇಗೌಡ, ನೀಲಕಂಠ ಮತ್ತು ಗ್ರಾಮಕ್ಕೆ ನೀರಿನ ಅನುಕೂಲ ಮಾಡುತ್ತಿದ್ದ ಮೋಟರ್ ಪಂಪ್ ನ ಕೇಬಲ್ ಗಳನ್ನು ಕಳ್ಳರು ಒಂದೇ ರಾತ್ರಿಯಲ್ಲಿ ಸುಮಾರು 380 ಮೀಟರ್ ಕೇಬಲ್ ಕಳ್ಳತನಮಾಡಿ ಮುಗಿಸಿದ್ದಾರೆ , ಮೋಟರ್ ಪಂಪ್ ಗಳಿಗೆ (ಸಬ್ ಮರ್ಸಿಬಲ್ ) ಕೇಬಲ್ ಗಳನ್ನು ಬಳಸುವುದು ಈ ಕೇಬಲ್ ಗಳಿಗೆ ಹೆಚ್ಚಿನ ಮೊತ್ತವಿರುತ್ತದೆ ಆದ ಕಾರಣ ಕಳ್ಳರು ಈ ಕೇಬಲ್ ಗಳನ್ನು ಕಳ್ಳತನ ಮಾಡುವುದು ಅತಿಹೆಚ್ಚಾಗಿದೆ,


• ⁠ ಕಾರಗೋಡು ಗ್ರಾಮದಿಂದ ಕೆ ಹೊಸಕೋಟೆಯಲ್ಲಿರುವ ಉಪ ಆರಕ್ಷಕ ಠಾಣೆಗೆ ಸುಮಾರು 12 ಕಿಮೀ ಅಂತರವಿರುವುದು ಇಲ್ಲಿನ ಕಳ್ಳರಿಗೆ ಕಳ್ಳತನಕ್ಕೆ ತುಂಬಾ ಅನುಕೂಲವೆಂದು ಏಳಬಹುದು
• ⁠ಕಳ್ಳತನದ ಬಗ್ಗೆ ಗ್ರಾಮಸ್ಥರಾದ ನವೀನ್ ರವರು – ಯಾರೋ ಸುತ್ತಮುತ್ತಲು ತುಂಬಾ ಅರಿತವರೇ ಈ ಕಳ್ಳತನ ಮಾಡಿರಲು ಸಾದ್ಯ ಯಾಕೆಂದರೆ ಅವರುಗಳು ಬೆಳಗಿನ ಸಮಯದಲ್ಲಿ ಯಾವ ತೋಟಗಳಲ್ಲಿ ಮೋಟರ್ ಪಂಪ್ ಇರುವುದು ಎಂದು ಕಚಿತ ಪಡಿಸಿಕೊಂಡೆ ಈ ಕಳ್ಳತನ ಮಾಡಿದ್ದಾರೆ ಅದರಲ್ಲು ಒಂದೇ ದಿನ ನಾಲ್ಕು ಕಡೆ ಕಳ್ಳತನ ಹೊಸದಾಗಿ ಬಂದಂತಹ ಕಳ್ಳರಿಂದ ಅಸಾಧ್ಯ ಮತ್ತು ಮಗ್ಗೆ ಗ್ರಾಮದಲ್ಲಿ ಒಂದು ಉಪ ಆರಕ್ಷಕ ಠಾಣೆ ಇಲ್ಲದಿರುವುದು ಈ ಕಳ್ಳತನಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದರು

Related posts

ಶಾಲೆಯ ಸಿಂಟೆಕ್ಸ್ ಕಳವು

Bimba Prakashana

ದೊಡ್ಡ ಕಣಗಾಲು ಚನ್ನ ಕೇಶವ ದೇವಾಲಯದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ ಶಾಸಕರು

Bimba Prakashana

ಆಲೂರು ಅಭಿವೃದ್ಧಿಗೆ ಮೀಸಲಿಟ್ಟ ಜಾಗ ಕಬಳಿಕೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More