Blog

ಹಿಂದೂ ಮಹಾಗಣಪತಿ ಸಮಿತಿಯಿಂದ ಕಾರ್ಯಕ್ರಮ

ಸಕಲೇಶಪುರ, ಆ. 6:

ಸಾರ್ವಜನಿಕ ಕೃಷ್ಣಜನ್ಮಾಷ್ಟಮಿ ಆಚರಣಾ ಸಮಿತಿ ಹಾಗೂ ರಾಮದೂತ ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ಆಯೋಜಿಸಲಾಗಿರುವ ಕಾರ್ಯಕ್ರಮಗಳ ಅಂಗವಾಗಿ ಕರಪತ್ರ ಬಿಡುಗಡೆ ಕಾರ್ಯಕ್ರಮವು ಇಂದು ಬೆಳಿಗ್ಗೆ 9 ಗಂಟೆಗೆ ಸಕಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅರ್ಚನೆಯೊಂದಿಗೆ ನೆರವೇರಿತು.

ಕಾರ್ಯಕ್ರಮದಲ್ಲಿ ಎರಡೂ ಸಮಿತಿಗಳ ಪ್ರಮುಖರು, ಪದಾಧಿಕಾರಿಗಳು ಹಾಗೂ ಮಾತೆಯರು ಭಾಗವಹಿಸಿ, ಮುಂಬರುವ ಎಲ್ಲ ಕಾರ್ಯಕ್ರಮಗಳು ಯಾವುದೇ ವಿಘ್ನ-ವಿಳoಬಗಳಿಲ್ಲದೆ ಯಶಸ್ವಿಯಾಗಿ ನೆರವೇರಲೆಂದು ದೇವರಲ್ಲಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಸಕಲೇಶಪುರ-ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಿಮೆಂಟ್ ಮಂಜು ಅವರು ಸಹ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಎರಡೂ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲೆಂದು ಶುಭ ಹಾರೈಸಿದರು.

ಬರುವ ಸೆಪ್ಟೆಂಬರ್ 6, 2026 (ಭಾನುವಾರ) ರಂದು ಶ್ರೀನಿವಾಸ ಕಲ್ಯಾಣ ಮಂಟಪ, ಸಕಲೇಶಪುರದಲ್ಲಿ ಸಾರ್ವಜನಿಕ ಕೃಷ್ಣಜನ್ಮಾಷ್ಟಮಿ ಅಂಗವಾಗಿ ರಾಧೆ-ಕೃಷ್ಣ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿದೆ. ಒಂಬತ್ತು ವರ್ಷದೊಳಗಿನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ರಾಧೆ ಹಾಗೂ ಕೃಷ್ಣ ವೇಷಧಾರಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಮಿತಿಯವರು ಮನವಿ ಮಾಡಿದ್ದಾರೆ.

ಅದೇ ರೀತಿ ಸೆಪ್ಟೆಂಬರ್ 14, 2026 ರಂದು ಶ್ರೀ ಗುರುವೇಗೌಡ ಕಲ್ಯಾಣ ಮಂಟಪದ ಆವರಣದಲ್ಲಿ ರಾಮದೂತ ಹಿಂದೂ ಮಹಾಗಣಪತಿ ಸಮಿತಿಯ ವತಿಯಿಂದ 10ನೇ ವರ್ಷದ ಗಣೇಶೋತ್ಸವ ಹಾಗೂ ಶ್ರೀ ಗಣಪತಿ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನಡೆಯಲಿದೆ. ಈ ಬಾರಿ ಹತ್ತನೇ ವರ್ಷದ ವಿಶೇಷ ಅಂಗವಾಗಿ 10 ಗಣಪತಿಗಳ ಪ್ರತಿಷ್ಠಾಪನೆ ಮಾಡುವ ಸಂಕಲ್ಪವನ್ನು ಸಮಿತಿಯು ಕೈಗೊಂಡಿದೆ.

ಈ ಎರಡೂ ಕಾರ್ಯಕ್ರಮಗಳಿಗೆ ಸಕಲೇಶಪುರದ ಸಮಸ್ತ ಸಾರ್ವಜನಿಕರು, ಹಿಂದೂ ಬಾಂಧವರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ಸಮಿತಿಯ ಪ್ರಮುಖರಾದ ಮಂಜುನಾಥ್ ಕಬ್ಬಿನಗದ್ದೆ ಹಾಗೂ ಪ್ರದೀಪ್ ಪೂಜಾರಿ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಜಿಲ್ಲಾ ಸಂಚಾಲಕರಾದ ಕೌಶಿಕ್, ದುಷ್ಯಂತ್ ಗೌಡ , ಶೇಖರ್ ಕಬ್ಬಿನಗದ್ದೆ, ಬಿಜೆಪಿ ಮುಖಂಡರಾದ ಚೈಪ್ರಕಾಶ್ ಬಾಗೆ ಆನಂದ್ ಬಾಗೆ ಪರಮೇಶ್ ಹಾಗೂ ಏಲಕ್ಕಿ ಮೆಣಸು  ವ್ಯಾಪಾರಿಗಳಾದ ಚಂದ್ರಶೇಖರ, ಟಿಎಪಿಸಿಎಂಎಸ್ ಅಧ್ಯಕ್ಷರಾದ ಶಶಿಧರ್, ವಿಜಿತ್, ಶ್ರೀಜಿತ್ , ದಿಲೀಪ್, ಗಿರೀಶ್ ಮಾರನಹಳ್ಳಿ , ಬಾಬಣ್ಣ, ಮಾಜಿ ಪುರಸಭಾ ಸದಸ್ಯೆ ವನಜಾಕ್ಷಿ, ಚೇತನ, ಮಂಜುಶ್ರೀಪ್ರದೀಪ್ ಬಾಲು ಕುಟ್ಟಿ , ಮನು ಸೇರಿದಂತೆ ಹಲವಾರು ಗಣ್ಯರು ಹಾಗೂ ಕಾರ್ಯಕರ್ತರು ಪೂಜೆ ಮತ್ತು ಪ್ರಾರ್ಥನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು.

Related posts

ನಿಧನ – ನಿಂಜೂರು ಸದಾಶಿವ ಆಚಾರ್ಯ

Bimba Prakashana

ವೈಚಾರಿಕ ಪತ್ರಿಕೆ ಹಾಗೂ ವಿವಿಧ ಸಂಘಟನೆಗಳಿಂದ ಉಚಿತ ಆರೋಗ್ಯ ಶಿಬಿರ

Bimba Prakashana

ಸಾಲು ಮರದ ತಿಮ್ಮಕ್ಕ ಸ್ಮಾರಕ ನಿರ್ಮಾಣಕ್ಕೆ ಆದ್ಯತೆ – ಈಶ್ವರ ಖಂಡ್ರೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More