Blog

ಶುಕ್ರವಾರ ಸಂತೆ ಶಾಲೆಯ ಕ್ರೀಡಾ ಕೂಟದಲ್ಲಿ ಮಕ್ಕಳಿಗೆ ಅವ್ಯವಸ್ಥೆ

ಸಕಲೇಶಪುರ ಹೆತ್ತೂರು 
ಮಕ್ಕಳ ಕ್ರೀಡಾಕೂಟದಲ್ಲಿ ಮೂಲಸೌಕರ್ಯ ಕೊರತೆ ಗ್ರಾಮಸ್ಥರ ಆಕ್ರೋಶ.

ಶುಕ್ರವಾರಸಂತೆ ಗ್ರಾಮದ ಶ್ರೀ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲೆಯಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಮಕ್ಕಳಿಗೆ ತೀವ್ರ ತೊಂದರೆ ಎದುರಾಗಿದೆ.

ಕ್ರೀಡಾಕೂಟದ ವೇಳೆ ವಿದ್ಯಾರ್ಥಿಗಳಿಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸದೆ, ಯಾವುದೇ ರೀತಿಯ ಸರಿಯಾದ ವ್ಯವಸ್ಥೆ ಮಾಡದಿರುವುದು ಬೆಳಕಿಗೆ ಬಂದಿದೆ. ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲದೆ, ಇದ್ದ ಶೌಚಾಲಯ ಬಳಕೆ ಮಾಡಲಾಗದ ಸ್ಥಿತಿಯಲ್ಲಿ ದುರ್ವಾಸನೆಯಿಂದ ಕೂಡಿತ್ತು. ಶೌಚಾಲಯಗಳಿಗೆ ನೀರಿನ ಸರಬರಾಜು ಇಲ್ಲದ ಕಾರಣ ಮಕ್ಕಳು ಪರದಾಡುವಂತ ಪರಿಸ್ಥಿತಿ. ಮಧ್ಯಾಹ್ನದ ಊಟವೂ ಅತ್ಯಂತ ಅಸಮರ್ಪಕವಾಗಿ ಇದ್ದು, ಮಕ್ಕಳ ಹೊಟ್ಟೆ ತುಂಬುವಂತಿರಲಿಲ್ಲವೆಂದು ಪೋಷಕರು, ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಆಟದ ಮೈದಾನ ಇದ್ದರೂ ಸುತ್ತಮುತ್ತ ಗಿಡಗಂಟೆಗಳು ಬೆಳೆದು ಮಕ್ಕಳ ಸುರಕ್ಷತೆಗೆ ಅಡ್ಡಿಯಾದರೂ ಕೂಡ ಆ ಸ್ಥಳದಲ್ಲಿ. ಪ್ರತೀ ವರ್ಷ ಕೇವಲ ಪ್ರತಿಷ್ಠೆಗಾಗಿ ಕ್ರೀಡಾಕೂಟ ನಡೆಸುವ ಪದ್ಧತಿ ಮುಂದುವರಿದಿದೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.

ಗ್ರಾಮಸ್ಥರು ಶಿಕ್ಷಕರ ಗಮನಕ್ಕೆ ಈ ಅಸಮಾಧಾನಗಳನ್ನು ತಂದಾಗ, ಶಾಲೆಯ ಶಿಕ್ಷಕರೋರ್ವರು ದರ್ಪದಿಂದ ಬೇಜವಾಬ್ದಾರಿ ಉತ್ತರ ನೀಡಿದ್ದರೆಂದು ಗ್ರಾಮಸ್ಥರು ದೂರಿದರು.

ಈ ಕುರಿತು ಶಿಕ್ಷಣಾಧಿಕಾರಿಗಳು ತುರ್ತು ಕ್ರಮ ಕೈಗೊಂಡು ಇಂತಹ ಶಿಕ್ಷಕರ ನಡವಳಿಕೆಗೆ ಪಾಠ ಹೇಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Related posts

ರಾಯರ ಕೊಪ್ಪಲು ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ

Bimba Prakashana

ಸಕಲೇಶಪುರದಲ್ಲಿ ಜೆಡಿಎಸ್ ಸಭೆ

Bimba Prakashana

ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಫೋಟೋ ಶೂಟ್ ನಿಷೇಧ ಮಾಡಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More