Blog

ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಅವ್ಯವಹಾರ : ವರ್ತಕರ ಸಂಘ ಆಕ್ರೋಶ

ಗ್ಯಾಸ್ ಸಿಲಿಂಡರ್  ವಿತರಣೆಯಲ್ಲಿ ಅವ್ಯವಹಾರ ಗ್ಯಾಸ್ ಏಜೆನ್ಸಿಗಳ ವಿರುದ್ಧ ಆಕ್ರೋಶ


ವರದಿ :
ನಾಗೇಶ್ ಎಂ ಎಚ್ ಮಾಗೇರಿ.


ಸಕಲೇಶಪುರ : ಸಣ್ಣಪ್ರಮಾಣದ  ಹೋಟೆಲ್ ಉದ್ಯಮಿಗಳಿಗೆ ಹಾಗೂ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್  ಸಮರ್ಪಕವಾಗಿ ತಲುಪುತ್ತಿಲ್ಲ  ಎಂದು ವರ್ತಕರ ಸಂಘದ ಅಧ್ಯಕ್ಷ ಮಧುಕುಮಾರ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.


ಸಣ್ಣ ಪುಟ್ಟ ಹೋಟೆಲ್ ಗ್ರಾಹಕರಿಗೆ ಹಾಗೂ ಉದ್ಯಮಕ್ಕೆಸರಿಯಾಗಿ ಗ್ಯಾಸ್ ಪೂರೈಕೆ ಮಾಡುತ್ತಿಲ್ಲ ಇದರಿಂದಾಗಿ ಹೋಟೆಲ್ ಉದ್ಯಮಿಗಳು ಮುಚ್ಚುವ ಸ್ಥಿತಿಯಲ್ಲಿ ಇದ್ದಾರೆ  ಹಾಗೂ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿರುವ ಗ್ರಾಹಕರಿಗೂ ಕೂಡ ಸಮರ್ಪಕವಾಗಿ ಗ್ಯಾಸ್ ಸಿಲಿಂಡರ್ ದೊರೆಯುತ್ತಿಲ್ಲ ಹಾಗೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟು ಮಾರಾಟವಾಗುತ್ತಿರುವುದರಿಂದ  ಹೋರಾಟ ಅನಿವಾರ್ಯ ಎಂದು ವರ್ತಕರ ಸಂಘದ ಅಧ್ಯಕ್ಷ ಬಿಎಂ . ಮಧುಕುಮಾರ್  ಮಾತನಾಡಿದ ಅವರು ಕಳೆದ ಎರಡು ತಿಂಗಳಿನಿಂದ ಜಾಗತಿಕ ಯುದ್ಧದ ಪರಿಣಾಮವಾಗಿ ಗ್ಯಾಸ್ ಪೂರ್ಕೆಕೆಯಲ್ಲಿ ವ್ಯತ್ಯಾಸ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಆದರೆ ಇದೇ ಗ್ಯಾಸ್ ಅಭಾವ ಕಾರಣ ಹಿಡಿದುಕೊಂಡು ಸಕಲೇಶಪುರ ನಗರದಲ್ಲಿ ಕಳೆದ ಎರೆಡು ತಿಂಗಳಿಂದ ನಿರಂತರವಾಗಿ ಜನಸಾಮಾನ್ಯರನ್ನು ಕ್ಯೂನಲ್ಲಿ ನಿಲ್ಲಿಸಿ. ಏಜನ್ಸಿಗಳಿಂದ ಜನರಿಗೆ ಸರಿಯಾಗಿ ಮಾಹಿತಿ ನೀಡದೆ ಫೋನ್ ಎತ್ತದೆ . ಸತಾಯಿಸುತ್ತಿರುವ ಏಜನ್ಸಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ವರ್ತಕರ ಸಂಘ ಒತ್ತಾಯಿಸಿದೆ.
ಕಳೆದ ಎರೆಡು ತಿಂಗಳಿಂದ ನಿರಂತರವಾಗಿ ಸಾಮಾನ್ಯ ಜನ ಹಾಗು ಸಣ್ಣ ಪುಟ್ಟ ಕ್ಯಾಂಟೀನ್ ನಡೆಸುವವರು ಹೋಟೆಲ್ ನಡೆಸಲಾಗದೆ ಗ್ಯಾಸ್ ಸಮಸ್ಯೆಯಿಂದ ಸಂಕಷ್ಠ ಪಡುತ್ತಿದ್ದಾರೆ. ಸಮರ್ಪಕವಾಗಿ ಹೋಟೆಲ್ ನಡೆಸಲಾಗದೆ 8ರಿಂದ 10 ದಿನ ಬಾಗಿಲ ಬಂದ್ ಮಾಡುವ ಸಮಸ್ಯೆ ಎದುರಾಗಿದ್ದು ಸಂಕಷ್ಠ ಪಡುತ್ತಿದ್ದಾರೆ.


ಗ್ಯಾಸ್ ಸಮಸ್ಯೆ ಉದ್ಬವಿಸದಾಗ ನಾವೇ ಖುದ್ದು ಹೋಟೆಲ್ ಉದ್ಯಮಿಗಳಿಗೆ ಸಹಕರಿಸಲು ಕೇಳಿಕೊಂಡಿದ್ದೆವು. ಆದರೆ ಡೊಮೆಸ್ಟಿಕ್ ಗ್ಯಾಸ್ ಕಾಳಸಂತೆಯಲ್ಲಿ  2000 ಸಾವಿರ ರೂನಿಂದ 2500 ರೂಗೆ ಮಾರಾಟಆಗುತ್ತಿದೆ. ಏಜನ್ಸಿಯವರ ಗಮನಕ್ಕೆ ತಂದರೆ ಉಡಾಫೆ ಉತ್ತರ ನೀಡುತ್ತಾರೆ.


ಗೃಹ ಬಳಕೆಗೆ ನೀಡುವಂತಹಾ ಗ್ಯಾಸ್ ಕಾಳಸಂತೆಯಲ್ಲಿ ಮಾರಾಟ ಆಗುತ್ತಿವೆ. ಬುಕ್ ಮಾಡಿ ಗ್ಯಾಸ್ ಅಫೀಸಿಗೆ 25 ದಿನ ಕಳೆದು ಹೋಗಿ ಕೇಳಿದರೆ ಮನೆಗೆ 2-3 ದಿನಗಳಲ್ಲಿ ಕೊಡುತ್ತೇವೆ ಎಂದು ಹೇಳುತ್ತಾರೆ. ವಾರ ಕಳೆದರೂ ಗ್ಯಾಸ್ ಬರೋದಿಲ್ಲ. ಫೋನ್ ಮಾಡಿದರೆ ಫೋನ್ ತೆಗೆಯುವುದಿಲ್ಲ ಇದರಿಂದ ಜನಸಾಮಾನ್ಯರು ದಿನವಿಡಿ  ಕ್ಯೂನಲ್ಲಿ ನಿಂತು ಉರಿಬಿಸಿಲಿನಲ್ಲಿ ಸಂಕಷ್ಠ ಪಡುವಂತಾಗಿದೆ ಯಾವುದೇ ಗ್ಯಾಸ್ ಏಜೆನ್ಸಿ ಯವರು ಸಮರ್ಪಕವಾಗಿ ಗ್ಯಾಸ್ ಪುರಕ್ಕೆ ಮಾಡದಿದ್ದಲ್ಲಿ ಇಲಾಖೆ ಮುಂದೆ ಪ್ರತಿಭಟಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ  ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್ಆರ್ ಮಂಜುನಾಥ್,ಖೋಸಾಧಿಕಾರಿ ಎಸ್ ಪಿ ಸತ್ಯನಾರಾಯಣ್, ಕಾರ್ಯದರ್ಶಿ ಬಿಜಿ ಲೋಹಿತ್, ಉಪಾಧ್ಯಕ್ಷ ಟಿ ರಾಜಕುಮಾರ್, ಉದ್ಯಮಿ ನಾರಾಯಣ್ ಆಳ್ವಾ ಹಾಜರಿದ್ದರು.

Related posts

ಆಲೂರು ಕೊಪ್ಪಲು ಕಿರು ಹಳ್ಳ ಸೇತುವೆಗೆ ಭೂಮಿ ಪೂಜೆ

Bimba Prakashana

ಮೀಸಲು ಕ್ಷೇತ್ರದಲ್ಲಿ ದಲಿತರಿಗೆ ರಕ್ಷಣೆ ಇಲ್ಲವೇ

Bimba Prakashana

ಏಪ್ರಿಲ್ 9 ಗುರುವಾರ ಸಕಲೇಶಪುರದಲ್ಲಿ ವಿಶೇಷ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More