Blog

ಅಕ್ರಮ ಗೋ ಸಾಗಾಣಿಕೆ ಗೋ ಹತ್ಯೆ ಕಡಿವಾಣ ಮಾಡಿ ಅಝಾನ್ ಶಬ್ದ ಕಡಿಮೆ ಮಾಡಿ

ರಂಜಾನ್ ನಿಮಿತ್ತ ಅಕ್ರಮ ಗೋಸಾಗಾಣಿಕೆ ಗೋಹತ್ಯೆ ಕಡಿವಾಣಕ್ಕೆ ಚೆಕ್ ಪೋಸ್ಟ್ ಹಾಕಿ ನಿಯಂತ್ರಣ ಮಾಡಬೇಕು ಎಂದು ಆಗ್ರಹಿಸಿದ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು
     ತಾಲ್ಲೂಕಿನಾದ್ಯಂತ ಮಸೀದಿಗಳಲ್ಲಿ ಅಝನ್ ಶಬ್ದ ಹೆಚ್ಚಾಗಿದ್ದು ವಿದ್ಯಾರ್ಥಿಗಳಿಗೆ ರೋಗಿಗಳಿಗೆ ತೊಂದರೆ ಆಗುತ್ತಿದೆ ಡಿಸಬೆಲ್ ಪರಿಶೀಲಿಸಬೇಕು ಮತ್ತು ಶಬ್ದ ಕಡಿಮೆ ಮಾಡಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ

       ಸಕಲೇಶಪುರ
ಸಕಲೇಶಪುರದಲ್ಲಿ 21.03.26 ರಂದು ಮುಸ್ಲಿಮರ ರಂಜಾನ್ ಹಬ್ಬವಿದ್ದು ಈ ಸಂದರ್ಭದಲ್ಲಿ ಅಕ್ರಮವಾಗಿ ಗೋವುಗಳ ಸಾಗಾಣಿಕೆ ನಡಿಯುವ ಸಾಧ್ಯತೆ ಇದ್ದು ಸಕಲೇಶಪುರ ಕುಶಾಲನಗರ ಬಡಾವಣೆಯಲ್ಲಿ ಕಸಾಯಿಖಾನೆಯಲ್ಲಿ ಹಾಗೂ ಸಾರ್ವಜನಿಕವಾಗಿ ಗೋಹತ್ಯೆ ಮಾಡಿ ಗಲಭೆ ಸೃಷ್ಟಿಸಲು ವ್ಯವಸ್ಥಿತ ಸಂಚು ನಡಿಯುತಿದ್ದು ಈ ಬಗ್ಗೆ ಇಲಾಖೆ ಎಚ್ಚರ ವಹಿಸಿ ಅಕ್ರಮ ಎಸಗುವ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣು ಇಟ್ಟು ಕಾನೂನು ವಿರುದ್ಧದ ಚಟುವಟಿಕೆ ಮಡುವ ಕಸಾಯಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿಗಾರರು ಆಗ್ರಹಿಸಿದ್ದಾರೆ.
     ಸಕಲೇಶಪುರದ ಆಯಕಟ್ಟಿನ ಜಾಗದಲ್ಲಿ ಚೆಕ್-ಪೋಸ್ಟ್ ನಿರ್ಮಾಣ ಮಾಡಿ ಅಕ್ರಮ ಗೋಸಾಗಾಟ ಹಾಗೂ ಗೋಮಾಂಸ ಸಾಗಾಣಿಕೆ ಮಾಡುವ ವ್ಯಕ್ತಿಗಳು ಮತ್ತು ವಾಹನದ ಮೇಲೆ ಹದ್ದಿನ ಕಣ್ಣು ಇಡಬೇಕು ಎಂದು ಒತ್ತಾಯಿಸಿದ್ದಾರೆ.
      ಸಕಲೇಶಪುರ ಸುತ್ತ ಇರುವ ಮಸೀದಿಗಳಲ್ಲಿ ಅಝನ್ ಶಬ್ದ ಮಿತಿಮೀರಿದ್ದು ವಿಸ್ಯಾರ್ಥಿಗಳು ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಆಗದೆ ಮುಂದಿನ ಭವಿಷ್ಯ ಹೇಗೆ ಎಂಬುದರ ಚಿಂತೆಯಲ್ಲಿ ನೊಂದುಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಹಾಗೂ ಮನೆಯಲ್ಲಿ ಇರುವ ರೋಗಿಗಳು ವಿಶ್ರಾಂತಿ ಸಮಯದಲ್ಲಿ ಅಝನ್ ಶಬ್ದದಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿದ್ದು ಹಲವು ರೋಗಿಗಳು ಸಾವನಪ್ಪವು ಸಾಧ್ಯತೆ ಇದ್ದು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸರ್ವೋಚ್ಚನಾಯಲಯ ಆದೇಶಿಸಿರುವ ಪ್ರಕಾರ ಡಿಸೇಬಲ್ ಬಗ್ಗೆ ಮಸೀದಿ ಮೌಲಿಗಳಿಗೆ ತಿಳಿಸಿ ಹೆಚ್ಚು ಹಾಗು ಕರ್ಕಶ ಶಬ್ದ ಮಾಡಬಾರದು ಎಂದು ಆದೇಶಿಸಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದ್ದಾರೆ.

    ಈ ಸಂದರ್ಭದಲ್ಲಿ ಶಿವೂ ಜಿಪ್ಪಿ, ಹಾನಬಾಳು ಹೋಬಳಿ ಹಿಂದೂ ಮುಖಂಡ ಬಾಬಿ, ದೀಪಕ್ ಕೆರೋಡಿ ದೀಲಿಪ  ಇತರರು ಉಪಸ್ಥಿತಿ ಇದ್ದರು

Related posts

ಜಾತಿ ನಿಂದನೆ – ಕೊಲೆ ಬೆದರಿಕೆ

Bimba Prakashana

ಆಲೂರು ರಕ್ಷಿತ್ ಹೃದಯಾಘಾತದಿಂದ ನಿಧನ

Bimba Prakashana

ಹಾನ್ ಬಾಳ್ ಚಿಕ್ಕಿಯ ಲಿಟ್ಲ್ ಆರ್ಟಿಸ್ಟ್ ತೀರ್ಪುಗಾರರಾಗಿ ಡಿ ಎಸ್. ಶ್ರೀಪತಿ ರಾವ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More