Blog

ನಾಳೆ ಶನಿವಾರ ರಾಧಮ್ಮ ಜನ ಸ್ಪಂದನೆಯಿಂದ ಪ್ರತಿಭಾ ಪುರಸ್ಕಾರ

ರಾಧಮ್ಮ ಜನಸ್ಪಂದನ ಸಂಸ್ಥೆ ವತಿಯಿಂದ ಐದನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ವೆಂಕಟೇಶ್ವರ ಕಲ್ಯಾಣ ಮಂಟಪ ಕೊನೆಪೇಟೆ ಬಿಎಮ್ ರಸ್ತೆ ಆಲೂರು ದಿನಾಂಕ 27 ಶನಿವಾರ 20 25 ರಂದು ಬೆಳಗ್ಗೆ 11 ರಿಂದ ಪ್ರಾರಂಭವಾಗಿ ಮಧ್ಯಾಹ್ನ 1 ಗಂಟೆ ಒಳಗೆ ನಡೆಸಲಾಗುವುದೆಂದು ಸಂಸ್ಥೆಯ ಅಧ್ಯಕ್ಷರಾದ ಹೇಮಂತ್ ಕುಮಾರ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈಗಿನ ಸಮಾಜದಲ್ಲಿ ಮಕ್ಕಳಿಗೆ ಪ್ರತಿಭೆಯ ಮುಖಾಂತರ ಗೌರವಿಸಬೇಕೆ ಹೊರತು ಸಮುದಾಯದ ಮುಖಾಂತರ ಮಹನೀಯರ ಜಯಂತಿ ಸಂದರ್ಭದಲ್ಲಿ ಸಮುದಾಯದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಿದ್ದಾರೆ.

ಆದರೆ ನಮ್ಮ ಸಂಸ್ಥೆಯಿಂದ ಎಲ್ಲಾ ಸಮುದಾಯದ ಮಕ್ಕಳನ್ನ ಪ್ರತಿಭೆ ಆಧಾರದ ಮೇಲೆ ಗುರುತಿಸಿ ಸಮಾನವಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮೇಲು ಮತ್ತು ಕೀಳು ಎಂಬ ಭಾವನೆ ಬರದೆ ಸಮಾಜವು ಒಗ್ಗಟ್ಟಾಗಿ ಬಾಳಬೇಕೆಂದು ಆಗ ಮಾತ್ರ ಮಹಾನಿಯರ ಕನಸು ನನಸಾಗುತ್ತದೆ ಎಂದು ನಿರಂತರವಾಗಿ ಐದು ವರ್ಷಗಳಿಂದ ತಾಲೂಕಿನ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳನ್ನು ಪ್ರಥಮ ಮತ್ತು ದ್ವಿತೀಯ ಸ್ಥಾನ ಆಧಾರದ ಮೇಲೆ ಆಯ್ಕೆ ಮಾಡಿ ಪ್ರತಿಭಾ ಪುರಸ್ಕಾರ ಮಾಡುತ್ತಿದ್ದೇವೆ ಇಂತಹ ಕಾರ್ಯಕ್ರಮಕ್ಕೆ ಸ್ಥಳೀಯ ಮುಖಂಡರು ಸ್ಥಳೀಯ ಅಧಿಕಾರಿಗಳು ಸ್ಥಳೀಯ ಶಾಸಕರು ಎಲ್ಲರೂ ಸಹಕಾರ ಕೊಡುತ್ತಿದ್ದು ಮಾಧ್ಯಮದರ ಸಹಕಾರ ಕೂಡ ಇದ್ದು ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು ಹೇಳುತ್ತಾ ವಿದ್ಯಾರ್ಥಿಗಳು ನಾಳೆ ಸರಿಯಾದ ಸಮಯಕ್ಕೆ ಬಂದು ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕೆಂದು ವಿನಂತಿಸಿದ್ದಾರೆ…

Related posts

ಬೀದಿ ನಾಯಿಗಳ ಸಂತಾನ ಹರಣ ಕೇಂದ್ರ ನಿರ್ಮಾಣ ಮಾಡದಂತೆ ಆಗ್ರಹ

Bimba Prakashana

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್

Bimba Prakashana

ಕೆರೆ ಒತ್ತುವರಿ ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರ ಭೇಟಿ – ತನಿಖೆಗೆ ಆಗ್ರಹ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More