Blog

ಬೆಳಗೋಡುನಲ್ಲಿ ಡಕಾಯಿತಿಗೆ ಇಳಿದಿದ್ದ ಕಳ್ಳರ ಬಂಧನ



ಸಕಲೇಶಪುರದ ಬೆಳಗೋಡು ಹೋಬಳಿಯ ಕಿರೆಹಳ್ಳಿ ಗ್ರಾಮದಲ್ಲಿ  ಡಕಾಯಿತಿ ನಡೆಸಲು ಯತ್ನಿಸಿ ವಿಫಲರಾಗಿ ಪರಾರಿ ಆಗಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ಟೋಬರ್. 7ರ ತಡ ರಾತ್ರಿ ಸುಮಾರು ಐದು ಮಂದಿಯ ಕಳ್ಳರ ಗುಂಪು ಕಿರೆಹಳ್ಳಿ ಗ್ರಾಮದ ಸೋಹನ್ ಎಂಬುವವರ ಮನೆಯಲ್ಲಿ  ಡಕಾಯಿತಿ ನಡೆಸಲು ಯತ್ನಿಸಿದೆ.  ಈ ಸಂದರ್ಭದಲ್ಲಿ ಮನೆಯೊಳಗೆ ಜನರು ಇದ್ದುದನ್ನು ಗಮನಿಸಿದ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ದೃಶ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಕೈಗೊಂಡ ಸಕಲೇಶಪುರ ಪೊಲೀಸರು, ಸಕಲೇಶಪುರದ ಮುಜೀಬ್, ಹಾಸನದ ಮುಬಾರಕ್ ಹಾಗೂ ಮೈಸೂರಿನ ಇರ್ಫಾನ್ ಅಕ್ಕಲ್ ಶಹಬಾಜ್ ಸೇರಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.

ಕಾರ್ಯಾಚರಣೆಯಲ್ಲಿ ನಗರ ಠಾಣೆಯ ಸಬ್ ಇನ್ಸೆಕ್ಟರ್ ಮಹೇಶ್, ಕ್ರೈಂ ಸಬ್ ಇನ್ಸೆಕ್ಟರ್ ಕೃಷ್ಣಪ್ಪ ಹಾಗೂ ಸಿಬ್ಬಂದಿಗಳಾದ ರೇವಣ್ಣ, ಶ್ರೀಧರ್, ಸೋಮು ಮತ್ತು ಚಂದ್ರಕಾಂತ ಭಾಗವಹಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Related posts

ಹೆನ್ನಲಿ ಗ್ರಾಮದ ಯುವಕ ನಾಪತ್ತೆ – ಮಾಹಿತಿ ನೀಡಿ

Bimba Prakashana

ಮುಖ್ಯ ಮಂತ್ರಿಗಳ ಆಗಮನ -ಪೂರ್ವ ಭಾವಿ ಸಭೆ

Bimba Prakashana

ಸಕಲೇಶಪುರ ಬಾಗೆ ಬಳಿ ಕೆರೆಯ ಜಾಗ ಒತ್ತುವರಿ – ಕಂದಾಯ ಇಲಾಖೆಯ ಗಮನಕ್ಕೆ ಬಂದಿಲ್ಲವೇ?

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More