ಸಕಲೇಶಪುರ:- ಅನೇಕ ವರ್ಷಗಳಿಂದ ಕುಡಿಯುಲು ಯೋಗ್ಯವಿಲ್ಲದ ಬಾವಿಯನ್ನು ಶಾಸಕರು ತಮ್ಮ ಅನುದಾನದಲ್ಲಿ ಸ್ವಚ್ಛ ಮಾಡಿಸಿ ಯೋಗ್ಯವಾದ ಕುಡಿಯುವ ನೀರನ್ನು ಗ್ರಾಮಸ್ಥರಿಗೆ ವ್ಯವಸ್ಥೆ ಮಾಡಿದ್ದಾರೆ.
ತಾಲೂಕಿನ ಚಂಗಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹೇರೂರಿನ ಚವಳ್ಳಿ ಗ್ರಾಮದಲ್ಲಿ ಸುಮಾರು ವರ್ಷದಿಂದ ಕುಡಿಯುವ ನೀರಿನ ಬಾವಿಯೊಳಗೆ ಗಿಡಗಳು ಬೆಳೆದು ಕೆಸರು ಮಿಶ್ರಿತವಾಗಿ ಕುಲಶಿತ ನೀರಾಗಿತ್ತು.ಇದರ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇನಹಳ್ಳಿ ಮಧು ಹಾಗೂ ಸತೀಶ್ ಹೇರೂರು ಅವರು ಯಸಳೂರು ಹೋಬಳಿಯ ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಸವಿನ್ ಗೌಡರ ಗಮನಕ್ಕೆ ತಂದು ಶಾಸಕರ ಅನುದಾನದಲ್ಲಿ ಬಾವಿಯನ್ನು ಸ್ವಚ್ಛ ಮಾಡಿಸುವಂತೆ ಮನವಿ ಮಾಡಿದ್ದರು.
ಶಾಸಕರಾದ ಸಿಮೆಂಟ್ ಮಂಜು ಅವರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕುಡಿಯಲು ಯೋಗ್ಯವಾದ ನೀರು ಅತಿ ಅವಶ್ಯಕ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವ ಮೂಲಕ ತಮ್ಮ ಅನುದಾನದಲ್ಲಿ 50,000 ಬಿಡುಗಡೆ ಮಾಡಿ ಬಾವಿಯನ್ನು ಸ್ವಚ್ಛ ಮಾಡಿಸಿ ಕುಡಿಯಲು ಉತ್ತಮವಾದ ನೀರನ್ನು ದೊರಕುವಂತೆ ಮಾಡಿಕೊಟ್ಟರು. ಇದರ ಉದ್ಘಾಟನೆಯನ್ನು ಶುಕ್ರವಾರ ಚಂಗಡಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಚವಳ್ಳಿ ಗ್ರಾಮಸ್ಥರು ನೆರವೇರಿಸಿ ಶಾಸಕರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಚಂಗಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲೋಕೇಶ್ ಗೌಡ ಬಿ.ಎ, ಚಾವಳ್ಳಿ ಗ್ರಾಮದ ಅಧ್ಯಕ್ಷರಾದ ಸುಬ್ಬೆಗೌಡರು ಹಾಗೂ ಗ್ರಾಮಸ್ಥರಾದ
ಮುಕ್ತಿ ಗೌಡ,ಕಾರ್ಯಪ್ಪ,ಕೋಮಾರಿ ಗೌಡ, ಪುಟ್ಟಸ್ವಾಮಿ ಗೌಡ, ಮಧು ಚಾವಳ್ಳಿ, ಗುತ್ತಿಗೆದಾರರದ ಚಂಗಡಹಳ್ಳಿಯ ಕಾರ್ತಿಕ್, ಗಗನ್, ವಾಟರ್ ಮ್ಯಾನ್ ಸಚಿನ್ ಇದ್ದರು.



