Blog

ಸಕಲೇಶಪುರ ಸರಕಾರಿ ಆಸ್ಪತ್ರೆಗೆ ದೊಡ್ಡ ರೋಗ – ಸ್ಕ್ಯಾನಿಂಗ್ ಯಂತ್ರ ಇಲ್ಲದೆ ಹೈರಾಣ

ನಾಗೇಶ್ ಎಂ ಎಚ್ ಮಾಗೇರಿ..

🔴9 ವರ್ಷವಾದ್ರೂ ಸ್ಕ್ಯಾನಿಂಗ್ ಯಂತ್ರ ದುರಸ್ತಿ ಇಲ್ಲ

🔴ಕ್ರಾಫರ್ಡ್ ಆಸ್ಪತ್ರೆ ಮುಂಭಾಗ ಸಾಮಾಜಿಕ ಕಾರಕರ್ತರಿಂದ ಪ್ರತಿಭಟನೆ | ಹೊಸ ಯಂತ್ರ ಅಳವಡಿಸಲು ಮನವಿ


ಸಕಲೇಶಪುರ: ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ

9 ವರ್ಷದಿಂದ ಸ್ಥಗಿತಗೊಂಡಿರುವ ಸ್ಕ್ಯಾನಿಂಗ್ ಯಂತ್ರ ವನ್ನು ತಕ್ಷಣ ದುರಸ್ತಿಪಡಿಸಬೇಕೆಂದು ಆಗ್ರಹಿಸಿ ಗುರು ವಾರ ಆಸ್ಪತ್ರೆ ಆವರಣದಲ್ಲಿ ಸಾಮಾಜಿಕ ಕಾರ್ಯಕರ್ತರು ಪ್ರತಿಭಟಿಸಿದರು. 

ತಾಲೂಕಿನ ಸಾಮಾಜಿಕ ಹೋರಾಟಗಾರರು, ವಿವಿಧ ಸಂಘಟನೆಗಳ ಪ್ರಮುಖರು ಗುರುವಾರ ಆಸ್ಪತ್ರೆ ಸಮೀಪದ ಉದ್ಯಾನದ ಬಳಿ ವಿನೂತನವಾಗಿ ಹಾಡು ಗಳನ್ನು ಹೇಳುವುದರ ಮೂಲಕ ಪ್ರತಿಭಟನೆ ನಡೆಸಿ ಸಾರ್ವಜನಿಕರ ಗಮನ ಸೆಳೆದರು.

ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟಗಾರರು, ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೌಲಭ್ಯ ಇಲ್ಲದ ಪರಿಣಾಮ ಬಡವರು, ಗ್ರಾಮೀಣ ಜನರು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಿದೆ. ಅಧಿಕಾರಿಗಳು ಯಂತ್ರ ದುರಸ್ತಿ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ತಾಲೂಕು ಆಸ್ಪತ್ರೆಯನ್ನು ಲಕ್ಷಾಂತರ ಜನರು ಅವಲಂಬಿ ಸಿದ್ದು ಕೇವಲ 4 ರಿಂದ 5 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಪಡಿಸಬಹುದಾದ ಅಥವಾ ಬದಲಾಯಿಸಬಹುದಾದ ಸ್ಯಾನಿಂಗ್‌ ಯಂತ್ರವನ್ನು 9 ವರ್ಷಗಳಿಂದ ಮೂಲೆಯಲ್ಲಿ ಟ್ಟಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ

ಎಂದು ದೂರಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೌಲಭ್ಯ ಇಲ್ಲದ ಕಾರಣ ರೋಗಿಗಳು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿದೆ. ಯಂತ್ರದ ಜತೆಗೆ ರೇಡಿಯಾ ಲಜಿಸ್ಟ್ ಸೇರಿದಂತೆ ಅಗತ್ಯ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಬೇಕು. ಸೂಕ್ತ ಹವಾನಿಯಂತ್ರಿತ ಕೊಠಡಿ, ನಿರ್ವ ಹಣಾ ವ್ಯವಸ್ಥೆಯನ್ನೂ ಕಲ್ಪಿಸಬೇಕು ಎಂದು ಒತ್ತಾಯಿಸಿ ದರು. ಈ ವೇಳೆ ಹೋರಾಟಗಾರ ಯಡೆಹಳ್ಳಿ ಮಂಜುನಾಥ್ ಮಾತನಾಡಿ, ಕಳೆದ 20 ದಿನಗಳ ಹಿಂದೆ ಸ್ಕ್ಯಾನಿಂಗ್ ಯಂತ್ರ ದುರಸ್ತಿ, ಅಗತ್ಯ ವೈದ್ಯರ ನೇಮಕ ಮಾಡುವಂತೆ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಉಪವಿಭಾಗಾಧಿಕಾರಿ, ಡಿಎಚ್‌ಒ 15 ದಿನಗಳ ಕಾಲಾ ವಕಾಶ ಕೋರಿದ್ದರು. ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಗಿತ್ತು. ಇದೀಗ ಗಡುವು


ಪೂರ್ಣಗೊಂಡರೂ ಶಾಶ್ವತ ಪರಿಹಾರ ದೊರೆತಿಲ್ಲ. ಆದ್ದರಿಂದ ಈ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.

ಸಂಜೆ 6 ಗಂಟೆಗೆ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಅರುಣ ಕುಮಾರ ಪ್ರತಿಭಟನಾಕಾರರೊಂದಿಗೆ ಮಾತನಾಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಸ್ಕ್ಯಾನಿಂಗ್ ಯಂತ್ರ ಆರಂಭವಾಗುವವರೆಗೂ ಪ್ರತಿಭಟನೆ ನಡೆಸುವುದಾಗಿ ಹಾಗೂ ಸ್ಥಳಕ್ಕೆ ಡಿಎಚ್ ಒ ಉನ್ನತ ಮಟ್ಟದ ಅಧಿಕಾರಿಗಳು ಬರುವರೆಗೂ ವಾಪಸ್ ತೆರಳುವುದಿಲ್ಲ ಶುಕ್ರವಾರ ಸಹ ಪ್ರತಿಭಟನೆ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಅಗತ್ಯವಿದ್ದರೆ ಸರ್ಕಾರದ ಗಮನ ಸೆಳೆಯಲು ಸಾಂಕೇತಿಕವಾಗಿ ‘ಸ್ಕ್ಯಾನಿಂಗ್ ‘ಸ್ಕ್ಯಾ ಯಂತ್ರಕ್ಕಾಗಿ ಭಿಕ್ಷಾಟನೆ’ ನಡೆಸುವುದಾಗಿಯೂ ತಿಳಿಸಿದರು. ಸಾಮಾಜಿಕ ಕಾರ್ಯಕರ್ತರಾದ ಯೂನುಸ್ ಅರ್ಚನ ಜಯಂತ್, ವೆಂಕಟೇಶ್, ಧರಣಿ, ನೌಫಲ್, ಹೆನ್ರಿ ಉಪಸ್ಥಿತರಿದ್ದರು.

ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಕಳೆದ 9 ವರ್ಷ ಗಳಿಂದ ಕೆಟ್ಟು ನಿಂತಿರುವ ಸ್ಕ್ಯಾನಿಂಗ್ ಯಂತ್ರ ದುರಸ್ತಿಗೆ ಸಾಮಾಜಿಕ ಕಾಠ್ಯಕರ್ತರು ಪ್ರತಿಭಟಿಸಿದರು.

Related posts

ಬೇಲೂರು ಶಾಸಕರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

Bimba Prakashana

ಯಸಳೂರು : ದೇವರಾಜ್ ಮೇಲೆ ಕೇಸು ದಾಖಲು

Bimba Prakashana

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More