Blog

ಜೆಡಿಎಸ್ ನಿಂದ ಹಲವಾರು ಮಂದಿ ಕಾಂಗ್ರೆಸ್ ಗೆ ಸೇರ್ಪಡೆ

ಸಕಲೇಶಪುರ ವಿಧಾನಸಭಾ ಕ್ಷೇತ್ರ ಸಕಲೇಶಪುರ ತಾಲ್ಲೂಕಿನ ವಳಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರಿಯೂರು ಗ್ರಾಮದ ಜೆಡಿಎಸ್ ಮುಖಂಡರಾದಂತಹ ಉಮೇಶ್ ರವರ ನೇತೃತ್ವದಲ್ಲಿ ಹಲವಾರು ಮಂದಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.

ಜೆಡಿಎಸ್ ಪಕ್ಷದ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಮಲ್ಲೇಶ್ ಮತ್ತು ಜೆಡಿಎಸ್ ಪಕ್ಷದ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದಂತಹ ಹೇಮಲತಾ ಚಂದ್ರಶೇಖರ್ ರವರು ಮತ್ತು ಜೆಡಿಎಸ್ ಮುಖಂಡರುಗಳಾದಂತಹ ಯಶವಂತರವರು ಕುಶಾಲ್ ರವರು ದುಶ್ಯಾಂತ್ ರವರು ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕಾರ್ಯಗಳು ನಾಯಕತ್ವವ ಬದ್ಧತೆಯನ್ನು ಮೆಚ್ಚಿ ವಳಲಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಮತ್ತು ಮಾಜಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾದಂತಹ ಕರಡಿಗಾಲ ಕೃಷ್ಣೇಗೌಡರು ಮತ್ತು ಮಾಜಿ ತಾಲೂಕು ಪಂಚಾಯತಿ ಸದಸ್ಯರಾದಂತಹ ಬೆಳಿತಾಳು ಕಿರಣ್ ರವರ ಮುಂದಾಳತ್ವದಲ್ಲಿ ಸಕಲೇಶಪುರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದಂತಹ ಬೈರಮುಡಿ ಚಂದ್ರಣ್ಣನವರು ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದಂತಹ ಶ್ರೀ ಮುರಳಿ ಮೋಹನ್ ರವರ ನಾಯಕತ್ವ ಬದ್ಧತೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು  ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಸಕಲೇಶಪುರ ಪುರಸಭಾ ಮಾಜಿ ಅಧ್ಯಕ್ಷರು ಮತ್ತು ಕಾಂಗ್ರೆಸ್ ಮುಖಂಡರಾದಂತಹ ಸೈಯದ್ ಮುಫೀಜ್ ರವರು ಉಪಸ್ಥಿತರಿದ್ದರು ಇವರಿಗೆ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು ವಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಬೇಕಾದಂತಹ ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆದುಕೊಳ್ಳುತ್ತದೆ ಎಂದು ಸೇರ್ಪಡೆಗೊಂಡವರಲ್ಲಿ ತಿಳಿಸಲಾಯಿತು

Related posts

ಜೆಡಿಎಸ್ ಬಲವರ್ಧನೆ – ಸೋಮವಾರ ಪೂರ್ವ ಭಾವಿ ಸಭೆ

Bimba Prakashana

ಮಳಲಿಯಲ್ಲಿ ಚಿತ್ರ ಕಲಾ ಸ್ಪರ್ಧೆ

Bimba Prakashana

ಬೆಳಗೋಡುನಲ್ಲಿ ಡಕಾಯಿತಿಗೆ ಇಳಿದಿದ್ದ ಕಳ್ಳರ ಬಂಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More