ರಾಜ್ಯ ಸಭೆ ಸದಸ್ಯರಾದ ಶ್ರೀಮತಿ ಸುಧಾ ಮೂರ್ತಿಯವರು ರಾಧಮ್ಮ ಜನಸ್ಪಂದನ ಹೇಮಂತ್ ಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಅವರ ಕಾರ್ಯಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಎಚ್ ಪಿ ವಿ ಲಸಿಕೆ ಬಗ್ಗೆ ಸುಧಾ ಮೂರ್ತಿಯವರು ರಾಜ್ಯಸಭೆಯಲ್ಲಿ ಪ್ರಥಮ ಬಾರಿಗೆ ಧ್ವನಿ ಎತ್ತಿ ದೇಶಕ್ಕೆ ಸರ್ಕಾರವೇ ಸಂಪೂರ್ಣವಾಗಿ ಉಚಿತವಾಗಿ ಕೊಡಬೇಕು. ಮಹಿಳೆಯರ ಆರೋಗ್ಯದ ಭವಿಷ್ಯಕ್ಕಾಗಿ ಏಳು ನಿಮಿಷಕ್ಕೆ ಒಬ್ಬರಿಗೆ ದೇಶದ ಮಹಿಳೆಗೆ ಕ್ಯಾನ್ಸರ್ ಬರುತ್ತಿದೆ ಮತ್ತು ಭಾರತ ಈಗ ಕ್ಯಾನ್ಸರ್ ನಲ್ಲಿ ರೇಡ್ ಜೋನ್ ನಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ ಎಂದು ಸಂಸತ್ ಸದನದಲ್ಲಿ ಸರ್ಕಾರದ ಗಮನ ಸೆಳೆದಿದ್ದರು.
ಇದನ್ನು ಅರಿತು ರಾಧಮ್ಮ ಜನಸ್ಪಂದನ ಹೇಮಂತ್ ಕುಮಾರ್ ಅವರು ವೈಯಕ್ತಿಕವಾಗಿ ತಮ್ಮ ದುಡಿಮೆಯ ಹಣವನ್ನು ಮೀಸಲಿಟ್ಟು ಆಲೂರು ತಾಲೂಕು ವಿದ್ಯಾರ್ಥಿಗಳಿಗೆ ಲಸಿಕೆ ಅಭಿಯಾನವನ್ನ ಮಾಡುತ್ತಿರುವುದು ಗಮನಿಸಿ ರಾಜ್ಯಸಭಾ ಸದಸ್ಯರಾಗಿರುವ ಸುಧಾ ಮೂರ್ತಿಯವರು ಹೇಮಂತ್ ಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ.
ಇಂತಹ ಸೇವಾ ಕಾರ್ಯವನ್ನ ಮುಂದಿನ ದಿನಗಳಲ್ಲಿ ನಿಮ್ಮ ಸಂಸ್ಥೆಯ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಹೇಮಂತ್ ಅವರ ಉದ್ದೇಶ ಒಳ್ಳೆದಾಗಿದ್ದು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ನಾನು ನಿಮ್ಮ ಜೊತೆಗೆ ಕೈ ಜೋಡಿಸುತ್ತೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಲೆನಾಡು ಶಾಡೋ ಗೆ ಪ್ರತಿಕ್ರಿಸಿದ ರಾಧಮ್ಮ ಜನಸ್ಪಂದನ ಹೇಮಂತ್ ರವರು ಸುಧಾ ಮೂರ್ತಿಅವರನ್ನು ಬಹಳ ದಿನಗಳಿಂದ ಸಂಪರ್ಕಿಸಲು ಪ್ರಯತ್ನ ಮಾಡುತ್ತಿದೆ ಆದರೆ ಅವರಿಗೆ ನಮ್ಮ ಸಂಸ್ಥೆ ಬಗ್ಗೆ ಐ ಎಂ ಎ ಅವರಿಂದ ಮಾಹಿತಿ ಹೋಗಿ ನನ್ನ ಬಗ್ಗೆ ನಾನು ಮಾಡುತ್ತಿರುವ ಸೇವ ಕಾರ್ಯವನ್ನ ಗಮನಿಸಿ ನನ್ನ ಮೊಬೈಲ್ ನಂಬರ್ ಗೆ ಕರೆ ಮಾಡಿರುವುದು ನನಗೆ ಅತಿ ಹೆಚ್ಚು ಸ್ಪೂರ್ತಿ ಸಿಕ್ಕಿದಂತಾಗಿದೆ.
ಸುಧಾ ಮೂರ್ತಿ ಯವರ ಬಳಿ ಮನವಿ ಮಾಡಿದ್ದೇನೆ. ನನಗೆ ಏನೂ ಬೇಡ ತಾವುಗಳು ನಮ್ಮ ಆಲೂರು ಬರಬೇಕು ಮತ್ತು ಮುಂದಿನ ನಮ್ಮ ಸಂಸ್ಥೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ತಾವುಗಳೇ ಬರಬೇಕೆಂದು ಮನವಿ ಸಲ್ಲಿಸಿದ್ದೇನೆ.
ಮನವಿಗೆ ಸ್ಪಂದಿಸಿದ ಸುಧಾ ಮೂರ್ತಿ ಯವರು ಡಿಸೆಂಬರ್ ನಲ್ಲಿ ದಿನಾಂಕವನ್ನು ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇವರ ಒಂದು ಕರೆ ನನಗೆ ಅತಿ ಹೆಚ್ಚು ಸ್ಪೂರ್ತಿ ನೀಡಿದಂತಾಗಿದೆ ಮುಂದಿನ ದಿನಗಳಲ್ಲಿ ಸುಧಾ ಮೂರ್ತಿಯವರ ಸಹಾಯವನ್ನು ಪಡೆದು ಆಲೂರು ತಾಲೂಕಿನ 50 ಮಕ್ಕಳಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಸಿಕ್ಕಬೇಕೆಂಬುದು ಮನವಿ ಸಲ್ಲಿಸುತ್ತೇನೆ.
ಉದ್ಯೋಗ ಮೇಳವನ್ನು ಮಾಡಲು ಸಹ ಸುಧಾ ಮೂರ್ತಿ ಅವರ ಆಶೀರ್ವಾದ ಇರಬೇಕೆಂಬುದು ಮನವಿ ಸಲ್ಲಿಸಿದ್ದೇನೆ ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ.
ಈಗಾಗಲೇ ಅತಿ ಹೆಚ್ಚು ಜನ ಕರೆಯನ್ನು ಮಾಡಿ ರಿಜಿಸ್ಟರ್ ಮಾಡಿದ್ದರಿಂದ ಆಲೂರು ತಾಲೂಕಿನ 14 ಪಂಚಾಯಿತಿಗಳಿಗೂ ಎಚ್ ಪಿ ವಿ ಲಸಿಕೆ ಶಿಬಿರವನ್ನ ಕಾರ್ಯಕ್ರಮ ಮಾಡಲು ವೈದ್ಯರ ಸಹಕಾರವನ್ನು ಕೇಳಿದ್ದೇನೆ ಮುಂದಿನ ದಿನಗಳಲ್ಲಿ ಎಲ್ಲಾ ಪಂಚಾಯ್ತಿಗಳಲ್ಲೂ ಎಚ್ ಪಿ ವಿ ಲಸಿಕೆ ಶಿಬಿರವೆನ ಆಯೋಜಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಆಲೂರು ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಯ ಮಕ್ಕಳಿಗೂ ಸಹ ಉಚಿತವಾಗಿ ಎಚ್ ಪಿ ವಿ ಲಸಿಕೆ ಆಯೋಜಿಸಿದ್ದು ಇದರ ಸದ್ಬಳಕೆಯನ್ನು ಪಡೆದುಕೊಳ್ಳಿ ಎಂದು ಈಗಾಗಲೇ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದೇನೆ ಮತ್ತು ಜಿಲ್ಲಾಧಿಕಾರಿ ಹಾಸನ ರವರಿಗೂ ಸಹ ಗಮನಕ್ಕೆ ತರಲಾಗಿದೆ ಅವರು ಸಹ ಎಲ್ಲಾ ಸಹಕಾರವನ್ನು ಕೊಡುದಾಗಿ ನಮ್ಮ ಸಂಸ್ಥೆಗೆ ತಿಳಿಸಿದ್ದಾರೆ, ಎಲ್ಲರ ಸಹಕಾರದಿಂದ ಮಾತ್ರ ಯಶಸ್ಸು ಸಾಧ್ಯ ಎಲ್ಲರ ಸಹಕಾರ ಸದಾ ನಮ್ಮ ಸಂಸ್ಥೆಗೆ ಇರಲಿ ಎಂದು ಮನವಿ ಸಲ್ಲಿಸಿದ್ದಾರೆ…
previous post
