*ನಮ್ಮೂರ ಶಾಲೆ ನಮ್ಮೂರ ಹೆಮ್ಮೆಯ ಶಿಕ್ಷಕಿ*
(ಪ್ರಾಥಮಿಕ ಪಾಠ ಶಾಲೆ ಯಡೇಹಳ್ಳಿ)
*ಮೌಲ್ಯಯುತ ಶಿಕ್ಷಕಿ ಶೀಲಾ ಡಿ ಸಿ*
ಮಮತಾ ಮಯಿ ವಿಶಾಲ ಹೃದಯಿ ಶ್ರೀಮತಿ ಶೀಲಾ ಡಿ ಸಿ
ರವರು ಅರಕಲಗೂಡಿನಲ್ಲಿ ಚಂದ್ರೇಗೌಡ ಶ್ರೀಮತಿ ಮಂಜುಳಾ ದಂಪತಿಗಳ ಪುತ್ರಿಯಾಗಿ ಜನಿಸಿ, ಪ್ರಾಥಮಿಕ ಶಿಕ್ಷಣ , ಪ್ರೌಢ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಹಾಸನ ಜಿಲ್ಲೆ ಮೊಸಳೆ ಹೊಸಹಳ್ಳಿ ಪೂರ್ಣಗೊಳಿಸಿದರು,
ಡಿ.ಎಡ್., ಹಳ್ಳಿ ಮೈಸೂರು ಹೊಳೇನರಸೀಪುರದಲ್ಲೂ,
ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಮೈಸೂರು ನಲ್ಲಿ ಪೂರ್ಣಗೊಳಿಸಿದರು. 2008ರಲ್ಲಿ ಶಿಕ್ಷಕರಾಗಿ ನೇಮಕಗೊಂಡು, ರಾಯಚೂರಿನಲ್ಲಿ ಒಂಬತ್ತು ವರ್ಷ ಶಿಕ್ಷಕಿಯಾಗಿ ಸೇವೆಸಲ್ಲಿಸಿ ನಂತರ ಅರಕಲಗೂಡಿನಲ್ಲಿ ಮೂರು ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ನಮ್ಮ ಊರಿನ ಯಡೇಹಳ್ಳಿ ಶಾಲೆಗೆ 2018 ಶಿಕ್ಷಕಿಯಾಗಿ ನೇಮಕಗೊಂಡು, 2022ರಿಂದ ಮುಖ್ಯ ಶಿಕ್ಷಕಿಯಾಗಿ ಮಕ್ಕಳ ಹಾಗೂ ಶಾಲೆಯ ಬೆಳವಣಿಗೆಗೆ ಸರ್ವವಿಧದಲ್ಲೂ ಪ್ರಯತ್ನಿಸಿ ಸಫಲರಾಗಿದ್ದಾರೆ.
ಸಹೋದ್ಯೋಗಿಗಳೊಂದಿಗೆ ಮತ್ತು ಪೋಷಕರೊಂದಿಗೆ ಒಳ್ಳೆಯ ಭಾಂದವ್ಯ ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ಉತ್ತೀರ್ಣರಾಗಲು ತಮ್ಮ ಪಾಠ ಪ್ರವಚನಗಳಲ್ಲಿ ವಿನೂತನ ಮಾದರಿಯನ್ನು ಅಳವಡಿಸಿಕೊಂಡು, ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿ ಮನನ ಮಾಡಿಸುವ ವಿಶೇಷ ಗುರು ಇವರು. ಗ್ರಾಮದವರ ಜೊತೆ ಪೋಷಕರ ಜೊತೆ ನಿಕಟ ಸಂಪರ್ಕ ಸಾಧಿಸಿ ಗಣ್ಯರುಗಳಿಂದ ದೇಣಿಗೆ ಸಂಗ್ರಹಿಸಿ ಮಕ್ಕಳಿಗೆ ಟ್ರ್ಯಾಕ್ ಸೂಟ್ ಸಮವಸ್ತ್ರ, ಶಾಲೆಗೆ ಟೆಲಿವಿಷನ್, ಬ್ಯಾಂಡ್ ಸೆಟ್, ಮತ್ತು ಶಾಲಾ ಕಟ್ಟಡಕ್ಕೆ ಉತ್ತಮವಾದ ಶುಭ್ರವಾದ ಬಣ್ಣದ ಲೇಪನ ಮಾಡಿಸಿ, ಕಲಿಕೆಯ ಚಿತ್ತಾರಗಳ ಕಲೆ ರೂಪಿಸಿ ಶಾಲೆಯ ಅಭಿವೃದ್ಧಿಗೆ ಯಶಸ್ವಿ ಪಾತ್ರ ವಹಿಸಿದ್ದಾರೆ.
ಸರಳ ಸಜ್ಜನಿಕೆಯಿಂದ ಗ್ರಾಮದ ಕೂಲಿ ಕಾರ್ಮಿಕರ ಬಡ ಮಕ್ಕಳ ಶ್ರೀಯಸ್ಸಿಗೆ, ಅಭಿವೃದ್ಧಿಗೆ, ಮಕ್ಕಳಲ್ಲಿ ಶಿಸ್ತು ಕಲಿಸುವಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ಶಾಲೆಯಲ್ಲಿ ಬರುವ ಖರ್ಚು ವೆಚ್ಚಗಳನ್ನು ಸಹ ಶಿಕ್ಷಕರ ಒಡಗೂಡಿ ಸ್ವತಃ ತಾವೇ ಬರಿಸಿ ಶಾಲೆಯ ಪ್ರಗತಿಗೆ ಸ್ಮರಣೀಯ ಕೊಡುಗೆ ನೀಡುತ್ತಿದ್ದಾರೆ.
ಮಹಿಳಾ ಶಿಕ್ಷಕಿಯರು ಮನೆ ಕುಟುಂಬ ಮಕ್ಕಳು ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿ ಸರಿಯಾದ ಸಮಯಕ್ಕೆ ಸರ್ಕಾರಿ ಶಾಲೆಯಲ್ಲಿ ಸ್ಥಿತಪ್ರಜ್ಞ ಮನಸ್ಥಿತಿಯಿಂದ ಪಾಠ ಮಾಡುವುದು ನಮ್ಮೆಲ್ಲರಿಗೂ ಸರಳ ಅನ್ನಿಸಬಹುದು, ಆದರೆ ಅನುಭವಿಸುವವರಿಗೆ ಮಾತ್ರ ಗೊತ್ತಿರುತ್ತದೆ ಅದರ ಕಷ್ಟ ನಷ್ಟ ನೋವು, ಸುಖ ಸುಮ್ಮನೆ ಆರೋಪ ಮಾಡುವ ಜನಸಾಮಾನ್ಯರು, ಗ್ರಾಮ ಪಂಚಾಯಿತಿಯಿಂದ ಸೂಚಿಸುವ ಆಜ್ಞೆಗಳ ಪಾಲನೆ, ಆ ಗ್ರಾಮದ ರಾಜಕಾರಣಿಗಳ ಆಜ್ಞೆ ಆರೋಪಗಳನ್ನು ಸರಿದೂಗಿಸಿಕೊಂಡು ಹೋಗುವುದು ಸವಾಲಿನ ಕೆಲಸವೇ ಆಗಿರುತ್ತದೆ.
ಶಿಕ್ಷಕರ ಪ್ರಗತಿ ಉನ್ನತಿಗೆ ಶಿಕ್ಷಕರ ಪಾತ್ರ ಅಮೂಲ್ಯ, ಶಿಕ್ಷಕರು ಪಾಠ ಪ್ರವಚನ ಮಾಡಬೇಕಾದರೆ, ಅವರ ಮನಸ್ಸು ನಿರಾಳವಾಗಿರಬೇಕು ಎಂಬುದನ್ನ ನಾವುಗಳು ಅರಿತುಕೊಳ್ಳಬೇಕಿದೆ, ಎಲ್ ಹೆಚ್ ಮಂಜುನಾಥ್ ರವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟು, ವಿಶಿಷ್ಟ ಎಂ ಎಂಬ ಮಗಳು, ಚರಣ್ ಪ್ರಸಾದ್ ಎಂ ಎಂಬ ಪುತ್ರನನ್ನು ಪಡೆದಿದ್ದಾರೆ.
ಶಿಕ್ಷಕರ ದಿನಾಚರಣೆಯ ಸಂದರ್ಭ ಗೌರಿ ಗಣೇಶ ಹಬ್ಬದ ಶುಭದಂದು ತಮಗೆ ತಮ್ಮ ಕುಟುಂಬ ವರ್ಗಕ್ಕೆ ಶಾಂತಿ ನೆಮ್ಮದಿ ಪ್ರೀತಿ ಆರೋಗ್ಯ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುವ.
ಯಡೇಹಳ್ಳಿ ಆರ್ ಮಂಜುನಾಥ್
previous post
next post
