Blog

ಆಲೂರು ತಾಲೂಕು ಪತ್ರಕರ್ತರ ಸಂಘ

ಆಲೂರು: ತಾಲ್ಲೂಕು ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆದಿಲ್‌ಪಾಷ ಅವಿರೋಧವಾಗಿ ಆಯ್ಕೆಯಾದರು.

ಆಲೂರುವಿನ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ, ಉಪಾಧ್ಯಕ್ಷರಾಗಿ ಬಿ. ಎನ್. ನವೀನ್‌ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ  ರುದ್ರಕುಮಾರ್, ಕಾರ್ಯದರ್ಶಿಯಾಗಿ ಸತೀಶ್ ಚಿಕ್ಕಕಣಗಾಲು, ಖಜಾಂಚಿಯಾಗಿ ಹೆಚ್. ವಿ. ಚೇತನ್ ಆಯ್ಕೆ ಆದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಬೀರ್ ಅಹಮದ್, ಹೆಚ್. ವೈ. ವಿಶ್ವನಾಥ್, ಎಂ. ಪಿ. ಚಿದಾನಂದ, ಪ್ರದೀಪ, ವೀರಭದ್ರಸ್ವಾಮಿ, ಸಲೀಪಾಷ, ಹೆಚ್. ಡಿ. ಪ್ರದೀಪ್‌ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು, ಚುನಾವಣಾಧಿಕಾರಿಗಳಾದ ಜಿ. ಪ್ರಕಾಶ್ ಮತ್ತು ಚಲಂ ಹಾಡ್ಲಹಳ್ಳಿ ರವರು ಘೋಷಿಸಿದರು.

ಈ ಸಂದರ್ಭದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಪೃಥ್ವಿಜಯರಾಮ್, ಮಾಜಿ ಅಧ್ಯಕ್ಷರಾದ ಎಂ. ಪಿ. ಹರೀಶ್, ಹೆಚ್ ವಿ ರಾಘವೇಂದ್ರ, ನಟರಾಜ್ ನಾಕಲಗೂಡು, ಉಪಸ್ಥಿತರಿದ್ದರು.

ಪತ್ರಕರ್ತರ ನೂತನ ತಂಡಕ್ಕೆ ಮಲ್ನಾಡ್ ಶಾಡೋ ಬಳಗದ ಅಭಿನಂದನೆಗಳು

Related posts

ವರ್ಧಮಾನ ಇಲೆಕ್ಟ್ರಾನಿಕ್ ಸಕಲೇಶಪುರ

Bimba Prakashana

ಜೆಡಿಎಸ್ ಬಲವರ್ಧನೆ – ಸೋಮವಾರ ಪೂರ್ವ ಭಾವಿ ಸಭೆ

Bimba Prakashana

ಬೇಲೂರುನಲ್ಲಿ ಗೋವುಗಳನ್ನ ರಕ್ಷಣೆ ಮಾಡಿದ ವಿ ಹಿಂ ಪ ಭಜರಂಗ ದಳ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More