*#ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ 2002 ರ ಮತದಾರರ ಪಟ್ಟಿಗೆ 2025 ರ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡುವ ಕಾರ್ಯವು ಪ್ರಗತಿಯಲ್ಲಿರುತ್ತದೆ.
“ಮತದಾರರ ಪಟ್ಟಿಗೆ ಮ್ಯಾಪಿಂಗ್ ಕಾರ್ಯ ಎಂದರೇನು?, ಭಾರತ ಚುನಾವಣಾ ಆಯೋಗವು ಪ್ರಸ್ತುತ ಸಾಲಿನಲ್ಲಿ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆಯನ್ನು ನಡೆಸಲು ಉದ್ದೇಶಿಸಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ 2002 ಸಾಲಿನಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯು ನಡೆದಿರುತ್ತದೆ.
ಈ ಪ್ರಕಾರವಾಗಿ 2002 ಸಾಲಿನ ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರದಂತೆ ಎಲ್ಲಾ ಮತದಾರರ ವಿವರಗಳನ್ನು ಅಗತ್ಯ ದಾಖಲಾತಿಗಳನ್ನು ಪಡೆದು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿರುತ್ತದೆ. ಅದರಂತೆ, ಪ್ರಸ್ತುತ 2025 ರ ಮತದಾರರ ಪಟ್ಟಿಯಲ್ಲಿರುವ ಮತದಾರರ ಪೈಕಿ, 2002 ರ ಮತದಾರರ ಪಟ್ಟಿಯಲ್ಲಿದ್ದ ಮತದಾರರ ವಿವರಗಳನ್ನು ಹೊಂದಾಣ ಕೆ ಮಾಡಿ ಮ್ಯಾಪಿಂಗ್ ಮಾಡುವ ಪ್ರಕ್ರಿಯೆಯಾಗಿದೆ.” “ಮ್ಯಾಪಿಂಗ್ ಕಾರ್ಯವನ್ನು ಯಾರು ಮತ್ತು ಹೇಗೆ ನಡೆಸಲಾಗುತ್ತದೆ?, ಪ್ರತಿಯೊಂದು ಮತಗಟ್ಟೆ ನೇಮಕಾತಿ ಮಾಡಲಾದ ಮತಗಟ್ಟೆ ಅಧಿಕಾರಿಯು ಮ್ಯಾಪಿಂಗ್ ಕಾರ್ಯ ನಿರ್ವಹಿಸುತ್ತಾರೆ. ನೇಮಿಸಲಾದ ಮತಗಟ್ಟೆ ಅಧಿಕಾರಿಯು ಭಾರತ ಚುನಾವಣಾ ಆಯೋಗವು ಅಭಿವೃದ್ಧಿ ಪಡಿಸಿರುವ Progeny Mapping ತಂತ್ರಾಂಶವನ್ನು ಬಳಸಿ, 2025 ರ ಮತದಾರರ ಪಟ್ಟಿಗೆ 2002 ರ ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರಗಳನ್ನು ಹೊಂದಾಣ ಕೆ ಮಾಡಿ ಪರಿಶೀಲಿಸಿ, ಮ್ಯಾಪಿಂಗ್ ಕಾರ್ಯವನ್ನು ನಿರ್ವಹಿಸಲಾಗುತ್ತದೆ.
2025 ರ ಮತದಾರರ ಪಟ್ಟಿಗೆ 2002 ರ ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರಗಳನ್ನು ಹೊಂದಾಣ ಕೆ ಮಾಡಲಾದ ಮತದಾರರ ಕುಟುಂಬದ ಸಂತತಿ (ಅಂದರೆ : ಮಗ, ಮಗಳು, ಮೊಮ್ಮಗ ಅಥವಾ ಮೊಮ್ಮಗಳು) ಅವರನ್ನು ಮ್ಯಾಪಿಂಗ್ ಮಾಡುವ ಪ್ರಕ್ರಿಯೆಯಾಗಿದೆ.” ಮ್ಯಾಪಿಂಗ್ ಮಾಡಲಾದ ಮತದಾರರು ಮತದಾರರ ಸಮಗ್ರ ಪರಿಷ್ಕರಣೆ (Special Intensive Revision) ಸಂದರ್ಭದಲ್ಲಿ ಮನೆ-ಮನೆಗೆ ಭೇಟಿ ನೀಡುವ ಮತಗಟ್ಟೆ ಅಧಿಕಾರಿಗಳಿಗೆ ಅಗತ್ಯ ಮಾಹಿತಿಯನ್ನು ಒದಗಿಸಬೇಕಾಗಿರುತ್ತದೆ.
ಹೊರತುಪಡಿಸಿ, ಮತದಾರರ ಮ್ಯಾಪಿಂಗ್ ಕಾರ್ಯಕ್ಕೆ ಸ್ಪಂದಿಸದೇ ಇದ್ದ ಪಕ್ಷದಲ್ಲಿ ಅಥವಾ ಮಾಹಿತಿ ನೀಡದೇ ಇದ್ದ ಪಕ್ಷದಲ್ಲಿ, ಅಂತಹ ಮತದಾರರು ಮುಂಬರುವ ಮತದಾರರ ಸಮಗ್ರ ಪರಿಷ್ಕರಣೆ ಸಂದರ್ಭದಲ್ಲಿ ಭಾರತ ಪ್ರಜೆ ಎಂದು ಪ್ರಮಾಣ ಕರಿಸಲು ಆಯೋಗವು ನಿಗಧಿಪಡಿಸಿರುವ 11 ಬಗೆಯ ದಾಖಲಾತಿಗಳ ಪೈಕಿ ಒಂದನ್ನೇ ಒದಗಿಸುವುದು ಕಡ್ಡಾಯವಾಗಿರುತ್ತದೆ. ಹಾಸನ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮ್ಯಾಪಿಂಗ್ ಕಾರ್ಯವು ಪ್ರಗತಿಯಲ್ಲಿರುತ್ತದೆ. ಸಾರ್ವಜನಿಕರು/ಮತದಾರರು ತಪ್ಪದೇ ನಿಮ್ಮ ಮತಗಟ್ಟೆ ಹಂತದ ಅಧಿಕಾರಿಗಳನ್ನು ಸಂಪರ್ಕ ಮಾಡಲು ಅಥವಾ ಮತಗಟ್ಟೆ ಅಧಿಕಾರಿಗಳು ನಿಮ್ಮ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಗತ್ಯ ಮಾಹಿತಿಯನ್ನು ಒದಗಿಸುವಂತೆ ತಿಳಿಯಪಡಿಸಿದೆ. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತದಾರರ ನೋಂದಣಾಧಿಕಾರಿಗಳು ಸಹಾಯಕ ಮತದಾರರ ನೋಂದಣಾಧಿಕಾರಿಗಳ ವಿವರಗಳು ಈ ಕೆಳಕಂಡಂತಿರುತ್ತದೆ.
ಕ್ರಮ ಸಂಖ್ಯೆ :
ವಿಧಾನಸಭಾ ಕ್ಷೇತ್ರ ಸಂಖ್ಯೆ ಮತ್ತು ಹೆಸರು
ಮತದಾರರ ನೋಂದಣಾಧಿಕಾರಿ ವಿವರ
ಸಹಾಯಕ ಮತದಾರರ ನೋಂದಣಾಧಿಕಾರಿ ವಿವರ
ಕಛೇರಿ ವಿಳಾಸ
1
193-ಶ್ರವಣಬೆಳಗೊಳ
ಶ್ರೀಮತಿ ರೇಖಾ,
ವಿಶೇಷ ಭೂಸ್ವಾಧೀನಾಧಿಕಾರಿ, ಎನ್.ಹೆಚ್.75, ಹಾಸನ.
9844010883 ಶಂಕರ್, ತಹಶೀಲ್ದಾರ್, ಚನ್ನರಾಯಪಟ್ಟಣ.
6363006938
ತಾಲ್ಲೂಕು ಕಛೇರಿ, ಚನ್ನರಾಯಪಟ್ಟಣ.
2.194-ಅರಸೀಕೆರೆ
ಡಾ. ಮಂಜುನಾಥ ವಿ,
ವಿಶೇಷ ಭೂಸ್ವಾಧೀನಾಧಿಕಾರಿ, ಎನ್.ಹೆಚ್.375, ಅರಸೀಕೆರೆ. 9449343588 ಎಂ.ಜಿ. ಸಂತೋಷ್ ಕುಮಾರ್, ತಹಶೀಲ್ದಾರ್, ಅರಸೀಕೆರೆ.
9964063630
ತಾಲ್ಲೂಕು ಕಛೇರಿ, ಅರಸೀಕೆರೆ.
3.195-ಬೇಲೂರು
ಶ್ರೀ ಜಗದೀಶ್ ಗಂಗಣ್ಣವರ್,
ವಿಶೇಷ ಭೂಸ್ವಾಧೀನಾಧಿಕಾರಿ, ಎತ್ತಿನಹೊಳೆ ಯೋಜನೆ, ಹಾಸನ.
9742094639 ಶ್ರೀಧರ್ ಕಂಕಣವಾಡಿ, ತಹಶೀಲ್ದಾರ್, ಬೇಲೂರು. 9535799825
ತಾಲ್ಲೂಕು ಕಛೇರಿ, ಬೇಲೂರು.
4-196 : -ಹಾಸನ
ಶ್ರೀ ಜಗದೀಶ್ ಗಂಗಣ್ಣವರ್,
ಉಪವಿಭಾಗಾಧಿಕಾರಿ, ಹಾಸನ ಉಪವಿಭಾಗ, ಹಾಸನ. 9742094639 ಸಿ.ಜಿ. ಗೀತಾ, ತಹಶೀಲ್ದಾರ್, ಹಾಸನ. 7892395211 ತಾಲ್ಲೂಕು ಕಛೇರಿ, ಹಾಸನ.
5.197-ಹೊಳೆನರಸೀಪುರ
ಡಾ. ಮಂಜುನಾಥ ವಿ.
ವಿಶೇಷ ಭೂಸ್ವಾಧೀನಾಧಿಕಾರಿ, ಹೇಮಾವತಿ ಜಲಾಶಯ ಯೋಜನೆ, ಹಾಸನ. 9449343588 ವೈ.ಎಂ. ರೇಣುಕುಮಾರ್, ತಹಶೀಲ್ದಾರ್, ಹೊಳೆನರಸೀಪುರ. 9448158273
ತಾಲ್ಲೂಕು ಕಛೇರಿ, ಹೊಳೆನರಸೀಪುರ.
6-198-ಅರಕಲಗೂಡು ಬಿ.ಕೆ.ರುದ್ರಮುನಿ,
ಯೋಜನಾ ನಿರ್ದೇಶಕರು, ಡಿಯುಡಿಸಿ, ಹಾಸನ. 9741883704 ಕೆ.ಸಿ.ಸೌಮ್ಯ, ತಹಶೀಲ್ದಾರ್, ಅರಕಲಗೂಡು. 8073956295
ತಾಲ್ಲೂಕು ಕಛೇರಿ, ಅರಕಲಗೂಡು.
7-199 -ಸಕಲೇಶಪುರ
ಡಾ.ಮಂಜುನಾಥ ವಿ,
ಉಪವಿಭಾಗಾಧಿಕಾರಿ, ಸಕಲೇಶಪುರ ಉಪವಿಭಾಗ, ಸಕಲೇಶಪುರ. 9449343588 ಸುಪ್ರೀತ, ತಹಶೀಲ್ದಾರ್, ಸಕಲೇಶಪುರ. 6360268432
ತಾಲ್ಲೂಕು ಕಛೇರಿ, ಸಕಲೇಶಪುರ
8.ಮಲ್ಲಿಕಾರ್ಜುನ್, ತಹಶೀಲ್ದಾರ್, ಆಲೂರು. 9535380286
ತಾಲ್ಲೂಕು ಕಛೇರಿ, ಆಲೂರು.(ಕೆ.ಎಸ್. ಲತಾ ಕುಮಾರಿ, ಭಾ.ಆ.ಸೇ.,)
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ,
ಹಾಸನ ಜಿಲ್ಲೆ, ಹಾಸನ.
