Blog

ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ



ಸಕಲೇಶಪುರ ದಿನಾಂಕ 28.12.2025 ರಂದು ಪಟ್ಟಣದ ಡಾ.ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಇಮೇಜಿನ್ ಸ್ಕೂಲ್ ಆಫ್ ಆರ್ಟ್ ಚಿತ್ರಕಲಾ ಶಾಲೆಯ ವತಿಯಿಂದ  ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಎಲ್ ಕೆ ಜಿ ಇಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ  ಸ್ಪರ್ಧೆಯನ್ನು 
ಏರ್ಪಡಿಸಲಾಯಿತು.

ಇಮೇಜಿನ್
ಸ್ಕೂಲ್ ಆಫ್ ಆರ್ಟ್ ನ ಸಂಸ್ಥಾಪಕರು  ಹಾಗೂ ನುರಿತ ಚಿತ್ರಕಲಾ ಶಿಕ್ಷಕರಾದ  ಲೋಕೇಶ್ ಮಳಲಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಬಾಳ್ಳುಪೇಟೆ ಬ್ಲಾಸಮ್ ಶಾಲೆಯ  ಸಂಸ್ಥಾಪಕರಾದ ಷಣ್ಮುಖಯ್ಯ 
ಕಾರ್ಯಕ್ರಮದ ಉದ್ಘಟನೆಯನ್ನು ನೆರೆವೇರಿಸಿ ಕೊಟ್ಟರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಾದ ಡಿ.ಸಿ ಸಣ್ಣಸ್ವಾಮಿ 
ಆಗಮಿಸಿ  ವಿದ್ಯಾರ್ಥಿಗಳಿಗೆ ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿದರು.

ಇಮೇಜಿನ್  ಸ್ಕೂಲ್ ಆಫ್ ಆರ್ಟ್ ನ ಸಂಸ್ಥಾಪಕರಾದ ಲೋಕೇಶ್ ಮಳಲಿ ಅವರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನುರಿತ ಶಿಕ್ಷಕರಿಂದ ತರಬೇತಿ ಪಡೆದು
ಸಕಲೇಶಪುರದ ಹಲವು ಶಾಲೆಗಳಲ್ಲಿ ಚಿತ್ರಕಲೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಸ್ವತಹ ಚಿತ್ರಕಲೆ ಶಾಲೆಯನ್ನು ತೆರೆದು ಮಕ್ಕಳಿಗೆ ಚಿತ್ರಕಲೆ ತರಬೇತಿ ನೀಡುತ್ತಾ ಬಂದಿದ್ದು,
ಪ್ರತಿವರ್ಷ ಕೂಡ Lkg Ukg ಇಂದ 10ನೇ ತರಗತಿ ವಿದ್ಯಾರ್ಥಿಗಳಿಗೆ  ಚಿತ್ರಕಲೆ ಸ್ಪರ್ಧೆ ಕಾರ್ಯಕ್ರಮ ನೀಡಿ
ಚಿತ್ರಕಲೆಯಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡುವಂತೆ ಕಾರ್ಯನಿರ್ವಸುತ್ತಾ ಬಂದಿರುತ್ತಾರೆ,

ಅದರಂತೆ ಭಾನುವಾರ ನಡೆದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮಕ್ಕೆ
ಬೆಂಗಳೂರು, ಮೈಸೂರು, ಸೋಮವಾರಪೇಟೆ, ಕೊಡಲಿಪೇಟೆ, ಹಾಗೂ ಸಕಲೇಶಪುರ ತಾಲೂಕಿನ ಹೋಬಳಿ ವ್ಯಾಪ್ತಿ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸರ್ಕಾರಿ ಹಾಗೂ ಖಾಸಗಿ ಶಾಲೆಯ ಸುಮಾರು 500 ರಿಂದ 600  ವಿದ್ಯಾರ್ಥಿಗಳು ಭಾಗವಹಿಸಿದರು.

ಈ ಕಾರ್ಯಕ್ರಮಕ್ಕೆ  ಪ್ರಸಿದ್ಧಿ ಚಿತ್ರಕಲಾ ಶಿಕ್ಷಕರಾದ
ಕಡೂರು ಪ್ರಸಾದ್ ಹಾಗೂ ಗದಗ್ ಶಿವಪ್ರಸಾದ್ ತೀರ್ಪುಗಾರರಾಗಿ ಆಗಮಿಸಿದದ್ದರು.

ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಮಿಸಿ ಚಿತ್ರಕಲಾ ಸ್ಪರ್ಧೆ ಮತ್ತು ಕಾರ್ಯಕ್ರಮ ಮುಗಿಯುವ ಕೊನೆವರೆಗೂ ಇದ್ದು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿರುತ್ತಾರೆ,  

ಈ ಕಾರ್ಯಕ್ರಮಕ್ಕೆ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರ ಶಾಸಕರಾದ ಸಿಮೆಂಟ್ ಮಂಜುನಾಥ್ ರವರು ಪ್ರೋತ್ಸಾಹಿಸಿ ಸಹಕರಿಸಿರುತ್ತಾರೆ. 

ಆಕ್ಸ್ ಫರ್ಡ್ ಶಾಲೆಯ ಸಂಸ್ಥಾಪಕರಾದ  ಯಾದಗರ್ ಇಬ್ರಾಹಿಂ, ಚಂದ್ರಶೇಖರ್ ಎಸ್ ಕೆ ಅಧ್ಯಕ್ಷರು ಹೆ ಹೆಚ್ ಸಿ ಎಜುಕೇಶನ್ ಟ್ರಸ್ಟ್ ಮಾಲೀಕರು ಅಕ್ಷಯ ಗ್ರೂಪ್, ಕೆ ಎಸ್ ಪವನ್ ಕುಮಾರ್ ಪವನ್ ಫೌಂಡೇಶನ್, ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ವೆಂಕಟೇಶ್ ಹೆನ್ನಲ್ಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಭೈರಪ್ಪ, ಸೇರಿದಂತೆ  ಇತರರು ಹಾಜರಿದ್ದರು.

Related posts

ಬೆಳಗೋಡುನಲ್ಲಿ ಡಕಾಯಿತಿಗೆ ಇಳಿದಿದ್ದ ಕಳ್ಳರ ಬಂಧನ

Bimba Prakashana

ಕಾಡ್ಳೂರು ಕೂಡಿಗೆಯಲ್ಲಿ ಕಾರು ಪಲ್ಟಿ

Bimba Prakashana

ಜೇನು ಪೋಷಕ ಸಂಘಕ್ಕೆ 37 ಲಕ್ಷ ಲಾಭ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More