ವರದಿ ರಾಣಿ prasanna
ರಾಜ್ಯ ರಸ್ತೆ ಸಾರಿಗೆ ನಿಗಮವು ಸಕಲೇಶಪುರ ಸಾರಿಗೆಯಿಂದ ಗ್ರಾಮೀಣ ಭಾಗದಿಂದ ಹೊರ ಜಿಲ್ಲೆಗಳಿಗೆ ಹೋಗಲು ಅನುವು ಮಾಡಿ ಕೊಟ್ಟಿದ್ದು ನಾಲ್ಕು ನೂತನ ಬಸ್ ಮಾರ್ಗಗಳಿಗೆ ಶಾಸಕ ಸಿಮೆಂಟ್ ಮಂಜುನಾಥ್ ಚಾಲನೆ ನೀಡಿದರು.
ಸೋಮವಾರ ಸಕಲೇಶಪುರದ ಹೊಸ ಬಸ್ ನಿಲ್ದಾಣದಲ್ಲಿ ನಾಲ್ಕು ಹೊಸ ಅಶ್ವಮೇಧ ಬಸ್ ಗಳಿಗೆ ಪೂಜೆ ಸಲ್ಲಿಸಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ
ಮಾತನಾಡಿದ ಅವರು ವಿಜಯಪುರ, ಬೆಂಗಳೂರು, ಹಾಸನ ಹಾಗೂ ಸಾರ್ವಜನಿಕರ ಬಹು ದಿನಗಳ ಬೇಡಿಕೆಯಾಗಿದ್ದ ವಳಲಹಳ್ಳಿ, ಕರಡಿಗಾಲ,ಬೊಮ್ಮನಕೆರೆ, ವಡ್ರಹಳ್ಳಿ, ಹರಗರಹಳ್ಳಿ, ನಡನಹಳ್ಳಿ, ನೂದರಹಳ್ಳಿ, ಗ್ರಾಮದ ಜನರಿಗೆ ಸಕಲೇಶಪುರ ಭಾಗದಿಂದ ಹೋಗುವ ಮಾರ್ಗಕ್ಕೆ ಚಾಲನೆ ನೀಡಲಾಗಿದೆ.
ಮುಂದಿನ ದಿನಗಳಲ್ಲಿ ಸಕಲೇಶಪುರ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.ಕಳೆದ ಕೋವಿಡ್ ಸಂಧರ್ಭದಲ್ಲಿ ತಾಲೂಕಿನಲ್ಲಿ ಕೆಲವು ಗ್ರಾಮೀಣ ಪ್ರದೇಶಕ್ಕೆ ಬಸ್ ಗಳ ಮಾರ್ಗಗಳನ್ನು ಸ್ಥಗಿತಗೊಳಿಸಲಾಗಿತ್ತು ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ಬಸ್ ಸೌಲಭ್ಯಕ್ಕೆ ಬೇಡಿಕೆ ಬಂದ ಹಿನ್ನಲೆಯಲ್ಲಿ 11 ಹೊಸ ಅಶ್ವಮೇಧ ಬಸ್ ಗಳು ಬಂದಿದ್ದು ಅಗತ್ಯಕ್ಕೆ ಅನುಗುಣವಾಗಿ ಮಾರ್ಗಗಳಿಗೆ ಬಸ್ ವ್ಯವಸ್ಥೆ ಮಾಡಲಾಗುವುದು ಎಂದರು.
ಈಗಾಗಲೇ ಕ್ಷೇತ್ರದಿಂದ ವಿವಿದ ಭಾಗಗಳಲ್ಲಿ ಸಂಚರಿಸುವ ಹಳೆ ಬಸ್‌ಗಳನ್ನು ಬದಲಾವಣೆ ಮಾಡಲು ಹಾಗೂ ನನ್ನ ಕ್ಷೇತ್ರಕ್ಕೆ ಹೊಸ ಬಸ್‌ಗಳನ್ನು ಸಂಚಾರಕ್ಕೆ ನೀಡಬೇಕೆಂದು ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.
ಸಾರ್ವಜನಿಕರು ಕರ್ನಾಟಕ ರಾಜ್ಯ ಸಾರಿಗೆ ಬಸ್ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು ,ಈಗಾಗಲೇ ಬಸ್ ನಿಲ್ದಾಣದಲ್ಲಿ ಶುಚಿತ್ವದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು ಶುಚಿತ್ವವನ್ನು ಸರಿಯಾದ ರೀತಿಯಲ್ಲಿ ಕಾಪಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂಧರ್ಭದಲ್ಲಿ ಸಕಲೇಶಪುರ ಡಿಪೋ ವ್ಯವಸ್ಥಾಪಕರಾದ ಬಿಪಿನ್,
ಪುರಸಭಾ ಸದಸ್ಯರಾದ ಪ್ರದೀಪ್ ,ವನಜಾಕ್ಷಿ , ತಾಲೂಕು ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವಥ್ ಮುಖಂಡರಾದ, ರಾಜಕುಮಾರ್, ಪುನೀತ್ ಬನ್ನಹಳ್ಳಿ , ವಿರೇಶ್ ಮಂಜುನಾಥ್ ಸೇರಿದಂತೆ ಬಸ್ ಸ್ಟಾಂಡ್ ಮೇಲ್ವಿಚಾರಕರಾದ ದೇವರಾಜು, ಕೇಶವ ಮೂರ್ತಿ, ಮುಂತಾದವರು ಉಪಸ್ಥಿತರಿದ್ದರು .
