ಸಕಲೇಶಪುರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಪಶ್ಚಿಮಘಟ್ಟ ಉಳಿಸಿ ಹೋರಾಟ ಸಮಿತಿ ಸಭೆಯಲ್ಲಿ ದಲಿತರಿಗೆ ಮಾತನಾಡಲು ಅವಕಾಶ ನೀಡದೆ ತಾರತಮ್ಯ ಮಾಡಿದ್ದು ಇದು ಬಡವರಿಗಾಗಿ ಮಾಡಿದ ಸಭೆಯೊ ಅಥವಾ ಮೇಲ್ವರ್ಗದ ಹಿತ ಚಿಂತನ ಸಭೆಯೋ ಎಂದು ದಲಿತ ಮುಖಂಡ ವಳಲ ಹಳ್ಳಿ ವೀರೇಶ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕೊಡಗು ಹಾಸನ ಮತ್ತು ಚಿಕ್ಕಮಗಳೂರು ಕಾಫಿ ಬೆಳೆಗಾರರ ಸಭೆಯನ್ನು ಮಾಡಿ ಅರಣ್ಯ ಇಲಾಖೆಯವರು ಒತ್ತುವರಿ ತೆರವು ಮಾಡುವಂತೆ ಸರ್ಕಾರ ಆದಾಯ ಸೇವೆ ಎಂದು ಅದನ್ನು ವಿರೋಧಿಸಿ ಹೋರಾಟ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಆದರೆ ಆ ಸಭೆಯಲ್ಲಿ ಎಲ್ಲಾ ಬೆಳೆಗಾರರ ಕೊಡಗು, ಚಿಕ್ಕಮಂಗಳೂರು ಮತ್ತು ಸಕಲೇಶಪುರ ತಾಲೂಕಿನ ನಲ್ಲಿ ವ್ಯವಸಾಯ ಮಾಡುವ ಬೆಳೆಗಾರರು ಮಾತನಾಡಿದರು.
ಆದರೆ ಹಲವಾರು ವರ್ಷಗಳಿಂದ 50, 53, 94ಸಿ, 94 ಸಿಸಿ ಎಂಬ ನಮ್ಮನೆಯಲ್ಲಿ ಅರ್ಜಿ ಕರೆದು ಸರ್ಕಾರ ಅರ್ಜಿ ಸ್ವೀಕರಿಸಿದ್ದು ಆದರೆ ಅದರ ಪ್ರಮುಖ ಪಾತ್ರ ದಲಿತ ಸಂಘಟನೆಗೆ ಮತ್ತು ರೈತ ಸಂಘಟನೆಗೆ ಸಲ್ಲುತ್ತದೆ,
ದಲಿತ ಸಂಘಟನೆ ಹಲವಾರು ವರ್ಷಗಳಿಂದ ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗವಹಿಸಿ ಎಲ್ಲಾ ಜಾತಿಯ ಬಡವರಿಗೆ ಮತ್ತು ಅನುಭವದಲ್ಲಿದ್ದವರಿಗೆ ಮಂಜೂರು ಮಾಡಬೇಕೆಂದು ಹೋರಾಟ ಮಾಡಿಕೊಂಡು ಬಂದಿರುತ್ತದೆ.
ಆದರೆ ನಿನ್ನೆ ದಲಿತ ಸಂಘಟನೆಯ ಹಿರಿಯ ಹೋರಾಟಗಾರರ ಒಬ್ಬರನ್ನೂ ಸಭೆಯಲ್ಲಿ ಮಾತನಾಡಲಿಕ್ಕೆ ಅವಕಾಶ ಮಾಡಿಕೊಡಲಿಲ್ಲ.
ಕಾರಣ ಏನೆಂದು ಗೊತ್ತಾಗಲಿಲ್ಲ ದಲಿತರಲ್ಲೂ ಕಾಪಿ ಬೆಳೆಗಾರರು ಇದ್ದಾರೆ. ಹಾಗೇನೆ ಇದರ ಪರವಾಗಿ ಹೋರಾಟ ಮಾಡಬೇಕೆಂದು ಹಲವಾರು ಬಾರಿ ಚರ್ಚಿಸಿದೆ. ಆದರೆ ನಿನ್ನೆ ನಡೆದ ಸಭೆಯಲ್ಲಿ ದಲಿತ ಮುಖಂಡರಿಗೆ ಮಾತನಾಡಕ್ಕೆ ಅವಕಾಶ ಮಾಡಿಕೊಡಲಿಲ್ಲ ಇದು ನಮಗೆ ಅವಮಾನ ಎಂದು ನನ್ನ ಜೊತೆ ಇದ್ದವರು ಚರ್ಚಿಸಿದರು.
ಹೋರಾಟ ಎಂಬುದು ಪಕ್ಷಾತೀತವಾಗಿ ಸಂಘಟನಾತ್ಮಕವಾಗಿ ಮತ್ತು ಜಾತ್ಯಾತೀತವಾಗಿ ಮಾಡಬೇಕಾಗಿರುವುದು. ಹೀಗಾದರೆ ಮಾತ್ರ ಹೋರಾಟ.
ಆದ್ರೆ ನಿನ್ನೆ ನಡೆದ ಸಭೆ ಮೇಲ್ನೋಟಕ್ಕೆ ಬೇರೆ ತರ ಕಾಣುತ್ತ ಇದೆ. ಈ ರೀತಿಯ ತಾರತಮ್ಯ ಮಾಡುವ ಉದ್ದೇಶ ಏನು ಎಂಬುದು ಬಹಿರಂಗ ಆಗಬೇಕು ಎಂದು ಅವರು ತಿಳಿಸಿದ್ದಾರೆ.
ವಾರಗಟ್ಟಲೆ, 15 ದಿವಸಗಳ ಕಾಲ ನಿರಂತರ ಧರಣಿ ಮಾಡಿ ಹಗಲು ರಾತ್ರಿ ಎನ್ನದೆ ಚಳಿ ಮಳೆಯಲ್ಲಿ ಹೋರಾಟ ಮಾಡಿದ ದಲಿತ ಸಂಘಟನೆಯ ಹೋರಾಟದ ಪ್ರತಿಫಲದಿಂದ ಎಲ್ಲಾ ಜಾತಿಯ ಎಲ್ಲಾ ಧರ್ಮದ ಬಡವರು, ನಿರ್ಗತಿಕರು,ಕೂಲಿ ಕಾರ್ಮಿಕರು ರೈತಾಪಿ ವರ್ಗದವರು ನಾಲ್ಕು ಎಕರೆ 38 ಕುಂಟೆ ಜಾಗದವರೆಗೆ ಮಂಜೂರು ಆಗಲು ಮೂಲ ಕಾರಣವಾಗಿದೆ.
ದಲಿತ ಸಂಘರ್ಷ ಸಮಿತಿ ಮರಮಾಲಿಕೆ ರದ್ದು ಮಾಡಿ ಬಡ ರೈತರಿಗೆ ಮಾಡಿ ಹೋರಾಟ ಮಾಡಿದೆ ದಲಿತ ತಿಳುವಳಿ ಹಾಸನ ಜಿಲ್ಲಾ ಕಚೇರಿ ಮುಂದೆ ಹಲವಾರು ದಿನ ಪ್ರತಿಭಟನೆ ಮಾಡಿ ಅದರಲ್ಲಿ ಜಯ ಸಿಕ್ಕಿದ್ದು ದಲಿತ ಸಂಘಟನೆಗೆ ಎಂಬುದನ್ನು ತಿಳಿದು ಕೊಳ್ಳಲಿ ಎಂದು ಅವರು ಹೇಳಿದ್ದಾರೆ
