Blog

ಆಲೂರುನಲ್ಲಿ 70 ಮಂದಿಗೆ ಉಚಿತ ಕನ್ನಡಕ

ಆಲೂರು.ತಾಲೂಕು ಛಲವಾದಿ ಮಹಾಸಭಾ ಹಾಗೂ ಹಾಸನದ ವಾಸನ್ ಐ ಕೇರ್ ಸಹಯೋಗದಲ್ಲಿ ಡಿ 15 ರಂದು ನಡೆದ ಉಚಿತ ಕಣ್ಣಿನ ತಪಾಸಣೆಯಲ್ಲಿ, ನೇತ್ರ ತಪಾಸಣೆಗೆ ಒಳಪಟ್ಟಿದ್ದ 70 ಮಂದಿಗೆ ಜ 4 ರಂದು ಉಚಿತ ಕನ್ನಡಕ ” ಗಳನ್ನು ವಿತರಿಸಲಾಗುವುದು ಎಂದು ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಲೋಹಿತ್ ಕುಮಾರ್ ಹಸಗನೂರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಛಲವಾದಿ ಮಹಾಸಭಾ ಸಂಸ್ಥಾಪಕ ಅಧ್ಯಕ್ಷ ಕೆ ಶಿವರಾಂ ರವರ ಹುಟ್ಟು ಹಬ್ಬದ ಅಂಗವಾಗಿ ಡಿ 15 ರಂದು ನೇತ್ರ ತಪಾಸಣಾ ಶಿಬಿರವನ್ನು ಹಾಸನದ ವಾಸನ್ ಐ ಕೇರ್ ಸಹಯೋಗದಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆಸಲಾಗಿತ್ತು, ಈ ಸಂದರ್ಭದಲ್ಲಿ ಸುಮಾರು 220 ಮಂದಿ ನೇತ್ರ ತಪಾಸಣೆ ಮಾಡಿಸಿದ್ದು, ಅವರಲ್ಲಿ ಸುಮಾರು 70 ಜನರಿಗೆ ಕಣ್ಣಿನ ದೃಷ್ಟಿ ದೋಷ ಇರುವ ಹಿನ್ನೆಲೆಯಲ್ಲಿ ಕನ್ನಡಕಗಳನ್ನು ಬಳಸುವಂತೆ

ತಿಳಿಸಲಾಗಿದ್ದು, ಈ ನಿಟ್ಟಿನಲ್ಲಿ 70 ಜನರಿಗೆ ಜ 4 ರ ಬಾನುವಾರ ಮದ್ಯಾಹ್ನ 3 ಗಂಟೆಗೆ ಬಸ್ ನಿಲ್ದಾಣದ ಆಟೋ ನಿಲ್ದಾಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು ಎಂದ ಅವರು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮಕ್ಕೆ ಸಂಸದ ಶ್ರೇಯಸ್ ಪಟೇಲ್, ರಾಜ್ಯ ಛಲವಾದಿ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ಹಾಗೂ ವಾಸನ್ ಐ ಕೇರ್ ನ ಮೋಹನ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಚಲವಾದಿ ಮಹಾಸಭಾ ಅಧ್ಯಕ್ಷ ಲೋಕೇಶ್ ಅಚ್ಚೇನಹಳ್ಳಿ, ತಾಲೂಕು ಗೌರವಾಧ್ಯಕ್ಷ ಎ ಟಿ ಮಲ್ಲೇಶ್, ತಾಲೂಕು ಅಧ್ಯಕ್ಷ ಲೋಹಿತ್ ಕುಮಾರ್, ಹಸಗನೂರು, ಕಾರ್ಯದರ್ಶಿ ಬಿ ಎಂ ಹರೀಶ್, ಜಂಟಿ ಕಾರ್ಯದರ್ಶಿ ಕೆ ಎಸ್ ಹ-ರೀಶ್, ನಿರ್ದೇಶಕರಾದ ಸಿ ಈ ಜಗದೀಶ್, ಇದ್ದರು.

Related posts

ಆನೆಗೆ ಮಹಿಳೆ ಬಲಿ

Bimba Prakashana

ಅಕ್ರಮ ಗೋ ಸಾಗಾಟ – ತಡವಾಗಿ ಕೇಸು – ಹಲವಾರು ಅನುಮಾನ – ಹಿಂದೂ ಹಿತ ರಕ್ಷಣಾ ವೇದಿಕೆ ಆರೋಪ

Bimba Prakashana

ಹಾಡ್ಯ ಸರಕಾರಿ ಶಾಲೆ ವಿಲೀನಕ್ಕೆ ಗ್ರಾಮಸ್ಥರ ವಿರೋಧ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More