Blog

ಆಲೂರು ರಕ್ಷಿತ್ ಹೃದಯಾಘಾತದಿಂದ ನಿಧನ

ಹೊಸ ವರ್ಷದ ಆಚರಣೆಗಾಗಿ ಸ್ನೇಹಿತರೊಂದಿಗೆ ಗೋವಾಗೆ ತೆರಳಿದ್ದ ಆಲೂರು ತಾಲೂ ಕಿನ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ.


ಆಲೂರು ತಾಲ್ಲೂಕಿನ ಕೆ. ಹೊಸಳ್ಳಿ ಗ್ರಾಮದ ನಿವಾಸಿ ರಕ್ಷಿತ್ (26) ಮೃತ ಪಟ್ಟ ದುರ್ದೈವಿ.

ಘಟನೆಯ ವಿವರ:

ರಕ್ಷಿತ್ ತನ್ನ ಸಂಬಂಧಿಕರಾದ ಚಿದಂಬರಂ ಮತ್ತು ಪ್ರವೀಣ್ ಅವರೊಂದಿಗೆ ಡಿಸೆಂಬರ್ 31ರಂದು ಹೊಸ ವರ್ಷದ ಸಂಭ್ರಮಾಚರಣೆಗಾಗಿ ಗೋವಾಗೆ ತೆರಳಿದ್ದರು. ಅಂದು ರಾತ್ರಿ ಮೂವರೂ ಸೇರಿ ಹೊಸ ವರ್ಷವನ್ನು ಸಡಗರದಿಂದ ಸ್ವಾಗತಿಸಿದ್ದರು.

ಮರುದಿನ (ಗುರುವಾರ) ಬೆಳಗ್ಗೆ ತಿಂಡಿ ಮುಗಿಸಿ ಗೋವಾದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಮೂವರು ಹೊರಟಿದ್ದರು. ಈ ವೇಳೆ ರಕ್ಷಿತ್‌ಗೆ ದಿಢೀರ್ ಆಗಿ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಜೊತೆಯಲ್ಲಿದ್ದವರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರಾದರೂ, ಅಷ್ಟರಲ್ಲಾಗಲೇ ರಕ್ಷಿತ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಗ್ರಾಮದಲ್ಲಿ ಶೋಕ ಸಾಗರ:

ಮೃತದೇಹವನ್ನು ಗೋವಾದಿಂದ ಕೆ. ಹೊಸಳ್ಳಿ ಗ್ರಾಮಕ್ಕೆ ತರಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹೊಸ ವರ್ಷದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಇಪ್ಪತ್ತರ ಹರೆಯದ ಯುವಕ ಹೃದಯಾಘಾತಕ್ಕೆ ಬಲಿ ಯಾಗಿರುವುದು ಸ್ಥಳೀಯರಲ್ಲಿ ಆತಂಕ ಮತ್ತು ವಿಷಾದ ಮೂಡಿಸಿದೆ.

Related posts

ಸಕಲೇಶಪುರದಲ್ಲಿ ಗುರುವಾರ ಬೃಹತ್ ರಕ್ತದಾನ ಶಿಬಿರ

Bimba Prakashana

ಸಕಲೇಶಪುರದಲ್ಲಿ ದುರ್ವರ್ತನೆ ತೋರಿದ ಲೈನ್ ಮೆನ್ – ಹಲವರು ಆಕ್ಷೇಪ

Bimba Prakashana

ಆಲೂರುನಲ್ಲಿ ಸಂತ ಸೇವಾ ಲಾಲ್ ಜಯಂತಿ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More