Blog

ವಿಶ್ವ ಪೌಷ್ಟಿಕ ಆಹಾರ ಸಪ್ತಾಹ



ಸಕಲೇಶಪುರದ ಅಂಬೇಡ್ಕರ್ ಭವನದಲ್ಲಿ  ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,  ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ  ಇಲಾಖೆ  ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು  ಸ್ಥಳಿಯ ಜೆ. ಎಂ .ಎಸ್ .ಸಿ . ನ್ಯಾಯಾಲಯದ ನ್ಯಾಯಾಧೀಶರುಗಳಾದ ಶ್ರೀಮತಿ ಧನಲಕ್ಷ್ಮಿ ಮತ್ತು ಲಕ್ಷ್ಮಿ ನರಸಿಂಹ ರವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

   ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಮಹಿಳಾ ಸಂಘಗಳು ಭಾಗವಹಿಸಿದ್ದರು.  

ಸಭೆಯನ್ನು ಉದ್ದೇಶಿಸಿ ಹಿರಿಯ ಸಿವಿಲ್  ಜಡ್ಜ್ ನ್ಯಾಯಾಧೀಶರಾದ ಶ್ರೀಮತಿ ಧನಲಕ್ಷ್ಮಿ ಮೇಡಂ ರವರು ಮಾತನಾಡುತ್ತಾ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರಗಳನ್ನು ಕೊಡುವುದರಿಂದ ಮಕ್ಕಳಲ್ಲಿ ಉತ್ತಮ ಬೆಳಗವಣಿಗೆಯನ್ನು ಕಾಣಬಹುದು ಹಾಗೂ ಮುಂದೆ ಮಕ್ಕಳು ಸದೃಢರಾಗಿ ಬೆಳೆಯುತ್ತಾರೆ ಇದನ್ನು ಪ್ರತಿ ಮಹಿಳೆಯು ಅನುಸರಿಸಿಕೊಂಡರೆ ಮಕ್ಕಳ ಆರೋಗ್ಯವನ್ನು ಕಾಪಾಡಬಹುದೆಂದು ಹೇಳಿದರು.  ಇಂಥ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ನಡೆಸಬೇಕೆಂದು ಹೇಳಿದರು.   

ನ್ಯಾಯಾಧೀಶರಾದ ಲಕ್ಷ್ಮೀನರಸಿಂಹರವರು ಮಾತನಾಡುತ್ತ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಕೊಡುವುದರಿಂದ ಅವರು ಆರೋಗ್ಯವಂತರಾಗಿ ಸದೃಢರಾಗುತ್ತಾರೆ ಹಾಗೂ ನಮ್ಮ ಪೂರ್ವಜರು ಉತ್ತಮ ಪೌಷ್ಟಿಕಾಂಶ ಇರುವ ಆಹಾರವನ್ನು ತಿಂದಿದ್ದರಿಂದ ಹೆಚ್ಚು ಕಾಲ ಬಾಳಿ   ಬದುಕಿದ್ದರು. ಮತ್ತು ಆಹಾರವನ್ನು  ಮಿತವಾಗಿ ಸೇವಿಸುವುದರಿಂದ ಆರೋಗ್ಯವಂತರಾಗಿರುತ್ತೇವೆ ಮುಂದೆ ಯಾವುದೇ ಔಷಧಿಯನ್ನು ತೆಗೆದುಕೊಳ್ಳುವ ಸಂದರ್ಭ  ಇರುವುದಿಲ್ಲ . ಕೆಲವು ವೇಳೆ ಅತಿಯಾದ ಆಹಾರ ಸೇವನೆಯಿಂದಾಗಿ  ಔಷಧಿಯನ್ನು ಸೇವಿಸುವಂತ ಸಂದರ್ಭ ಆಗಬಾರದು  ಎಂದು  ಹೇಳಿದರು.

ಕಾರ್ಯಕ್ರಮದಲ್ಲಿ ಅನೇಕ ಮಹಿಳೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿದರು ಹಾಗೂ ವಿತರಿಸಿದರು. 

ಕಾರ್ಯಕ್ರಮದಲ್ಲಿ ಹೆಚ್ಚಿನ ಮಹಿಳೆಯರು ಭಾಗವಹಿಸಿದ್ದರಿಂದ ಕಾರ್ಯಕ್ರಮಕ್ಕೆ ಒಂದು ಮೆರುಗು ಬಂದಂತೆ ಕಾಣುತ್ತಿತ್ತು.  ಕಾರ್ಯಕ್ರಮದಲ್ಲಿ ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ದಿನೇಶ್ ಎಂ.ಪಿ. , ತಾಲೂಕ್ ದಂಡಾಧಿಕಾರಿಗಳಾದ ಶ್ರೀಮತಿ ಮೇಘನಾ ರವರು,  ಇಲ್ಲಿನ ಜೆ. ಎಂ .ಎಫ್.ಸಿ .ನ್ಯಾಯಾಲಯದ ಹಿರಿಯ ಮತ್ತು ಕಿರಿಯ ನ್ಯಾಯಾಧೀಶರುಗಳಾದ ಶ್ರೀಮತಿ ಧನಲಕ್ಷ್ಮಿ ಮೇಡಂ ಮತ್ತು ಲಕ್ಷ್ಮೀ ನರಸಿಂಹ ರವರು ಹಾಗೂ ಸರ್ಕಾರಿ ವಕೀಲರುಗಳು ಮತ್ತು ವಕೀಲರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

Related posts

ನಾಡ ಪಟೇಲರ ಮನೆ ಧರಣೇoದ್ರ ಇನ್ನಿಲ್ಲ

Bimba Prakashana

ಆಲೂರು ವಿದ್ಯುತ್ ವಿತರಣ ಉಪ ಕೇಂದ್ರ ಕಾಮಗಾರಿಗೆ ಭೂಮಿ ಪೂಜೆ

Bimba Prakashana

ಬೆಳಗೋಡು ಸರಕಾರಿ ಶಾಲೆಯಲ್ಲಿ ಇಂಗ್ಲಿಷ್ ಫೆಸ್ಟ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More