Blog

ಜೆಡಿಎಸ್ ಸದಸ್ಯತ್ವ ಸಮಾವೇಶ

ಜೆಡಿಎಸ್ ಪಕ್ಷವನ್ನು ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಸದಾ ಕಾರ್ಯ ತತ್ಪರವಾಗುವುದಾಗಿ ಮಾಜಿ ಸಚಿವರಾದ ಹೆಚ್ ಡಿ ರೇವಣ್ಣ ಘಂಟಾಘೋಷದ ನಿರ್ಣಯ ಮಾಡಿದ್ದಾರೆ.

ಸಕಲೇಶಪುರda ಲಯನ್ಸ್ ಹಾಲ್ ನಲ್ಲಿ ಇಂದು ಜೆಡಿಎಸ್ ಸದಸ್ಯತ್ವ ಅಭಿಯಾನ ನಡೆಯಿತು

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಮಾತನಾಡಿ ವಿರೋಧಿಗಳ ಯಾವುದೇ ತಂತ್ರಕ್ಕೆ ಹೆದರೋಲ್ಲ. ನಮ್ಮ ಜೆಡಿಎಸ್ ನ್ನು ಬಲಪಡಿಸಿ ಇನ್ನಷ್ಟು ಬಲವರ್ಧನೆ ಮಾಡುವುದೇ ನಮ್ಮೆಲ್ಲರ ಗುರಿ ಎಂದು ಹೇಳಿದರು.

ಜೆಡಿಎಸ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನ ಮಾಡುವುದು ನಮ್ಮೆಲ್ಲರ ಮೊದಲ ಆದ್ಯತೆ ಆಗಿರಲಿ ಎಂದು ಅವರು ಹೇಳಿದರು.

ಮಾಜಿ ಸಚಿವರಾದ ಹೆಚ್ ಕೆ ಕುಮಾರ ಸ್ವಾಮಿ ಮಾತನಾಡಿ ಜೆಡಿಎಸ್ ಪಕ್ಷವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹೊಸ ಶಕೆ ಆರಂಭ ಆಗಲಿ ಎಂದು ಕರೆ ನೀಡಿದರು.

ಜೆಡಿಎಸ್ ಎಂಬುದು ರೈತರ ಪಕ್ಷ. ಕಾರ್ಮಿಕರ ಪಕ್ಷ, ಬಡ ವರ್ಗದವರನ್ನು ಮೇಲೇತ್ತುವ ಪಕ್ಷ. ಸಮಾಜ ಮುಖಿ ಚಿಂತನೆ ಮೂಲಕ ನಾವೆಲ್ಲರೂ ಒಗ್ಗೂಡಿ ಪಕ್ಷವನ್ನು ಬೆಳೆಸಬೇಕು. ಈ ವಿಚಾರದಲ್ಲಿ ಯಾರಿಗೂ ಅಂಜಿಕೆ ಬೇಡ. ಪಕ್ಷವನ್ನು ಅಭಿವೃದ್ಧಿ ಪಡಿಸುವುದೇ ನಮ್ಮ ಮೊದಲ ಆದ್ಯತೆ ಆಗಲಿ ಎಂದು ಹೇಳಿದರು.

ವೇದಿಕೆಯಲ್ಲಿ ಮಾಜಿ ಶಾಸಕರಾದ ಲಿಂಗೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂಚಲ ಕುಮಾರ ಸ್ವಾಮಿ, ಸುಪ್ರದೀಪ್, ಉಜ್ಮಾ ರಿಜ್ವಿ, ಹಾನು ಬಾಳು ಕುಮಾರ ಸ್ವಾಮಿ, ಮಸ್ತಾರೆ ಲೋಕೇಶ್ ಉಪಸ್ಥಿತರಿದ್ದರು.

ಭಾಸ್ಕರ್ ಕಾರ್ಯಕ್ರಮ ನಿರೂಪಣೆ ಮಾಡಿದರು

Related posts

ಹಾಡ್ಯ ಸರಕಾರಿ ಶಾಲೆ ವಿಲೀನಕ್ಕೆ ಗ್ರಾಮಸ್ಥರ ವಿರೋಧ

Bimba Prakashana

ಗೌರಿ ಗಣೇಶ ಹಬ್ಬದ ಶುಭಾಶಯಗಳು

Bimba Prakashana

ಪೊಲೀಸ್ ಸಹಕಾರ ಸಂಘದ ಚುನಾವಣೆ – ಪ್ರಥ್ವಿ ಜಯಭೇರಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More