Blog

ನಿವೃತ್ತ ದೈಹಿಕ ಶಿಕ್ಷಕ ರಮೇಶ್ ಹೆತ್ತೂರು ಬೀಳ್ಕೊಡುಗೆ

ವೃತ್ತಿಯಿಂದ ನಿವೃತ್ತರಾದ ದೈಹಿಕ ಶಿಕ್ಷಕ ರಮೇಶ್ ಹೆತ್ತೂರುರವರಿಗೆ ಬೀಳ್ಕೊಡುಗೆ ಸಮಾರಂಭ


ಹೆತ್ತೂರು; ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ದೈಹಿಕ ಶಿಕ್ಷಕರಾದ ಶ್ರೀ ರಮೇಶ್ ಹೆಚ್.ಪಿ. ಇತ್ತೀಚಿಗೆ ಸೇವೆಯಿಂದ ನಿವೃತ್ತರಾದರು.

ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಶ್ರೀಯುತರು ಕಳೆದ 33 ವರ್ಷಗಳಿಂದ ಹೊಂಗಡಹಳ್ಳ, ವನಗೂರು, ಶುಕ್ರವಾರಸಂತೆ ಮತ್ತು ಹೆತ್ತೂರು ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದರು. ವಿದ್ಯಾರ್ಥಿ ದಿಸೆಯಲ್ಲಿ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಪಟು ಆಗಿದ್ದ ಅವರು ಸಕಲೇಶಪುರ ತಾಲೂಕಿನಲ್ಲಿ ನಡೆದ ಹಲವು ಕ್ರೀಡಾಕೂಟಗಳ ಸಂಯೋಜಕರಾಗಿದ್ದು ಹಲವು ವಿದ್ಯಾರ್ಥಿಗಳನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟಕ್ಕೆ ಆಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.


ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ಸುಮರವರು ವಹಿಸಿದ್ದರು. ನಿವೃತ್ತರ ಬಗ್ಗೆ, ಪ್ರಾಂಶುಪಾಲರ ಮಂಜುನಾಥ ಬಿ.ಡಿ., ಉಪ ಪ್ರಾಂಶುಪಾಲ ಭಾಸ್ಕರ ಬಿ. ಮುಖ್ಯೋಪಾಧ್ಯಾಯ ಸತೀಶ್ ಹೆಚ್.ಕೆ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಾಲಾ ಶಿಕ್ಷಕರು, ರಮೇಶ್ ಅವರ ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.  ಶಿಕ್ಷಕಿ ಹೇಮಲತಾ ನಿರೂಪಿಸಿದರು..

Related posts

ಅಗನಿಯಲ್ಲಿ ನೂತನ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

Bimba Prakashana

ಬೈರಾಪುರದ ವಿದ್ಯಾರ್ಥಿ ಜಿಲ್ಲೆಗೆ ಪ್ರಥಮ

Bimba Prakashana

ಒಕ್ಕಲಿಗರ ಕಟ್ಟಡಕ್ಕೆ ಸಹಾಯ ಧನ – ಸನ್ಮಾನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More