Blog

ಹಣ, ಹೆಂಡಕ್ಕೆ ಪತ್ರಿಕಾ ಧರ್ಮ ಮಾರಾಟ ಆಗಬಾರದು

ಪತ್ರಿಕೆಗಳು ಮಾತ್ರ ಬೇರೆ ಬೇರೆ

ಸಿದ್ಧಾಂತ ಮಾತ್ರ ಒಂದೇ
ಇದು ಪತ್ರಿಕೋದ್ಯಮ

ಒಮ್ಮೊಮ್ಮೆ ಅನಿಸುತ್ತದೆ. ಈ ಪತ್ರಿಕೆಯವರು ಹಿಂಗ್ಯಾಕೆ

ಅವರ್ನ ಕಂಡ್ರೆ ಇವರ್ಗೆ ರೋಷ
ಇವರ್ನ ಕಂಡ್ರೆ ಅವರ್ಗೆ ರೋಷ

ಕಾರಣ ಕೇಳಿದ್ರೆ ಅದು ಮಾತ್ರ ಶೂನ್ಯ

ಹಿಂದೆಲ್ಲ ಕಾಲ ಇತ್ತು. ಮುದ್ರಣ ಮಾಧ್ಯಮವೇ ಶ್ರೇಷ್ಠ ಎಂಬ ಕಾಲ. ಬೆಂಗಳೂರುನಿಂದ ಬರುವ ಲಂಕೇಶ್, ಅಗ್ನಿ ಹೀಗೆ ನೂರಾರು ಪತ್ರಿಕೆಗಳು ಗ್ರಾಮೀಣ ಊರಿಗೆ ಬರೋದು ಯಾವ ದಿನ ಎಂದು ಕಾಯೋ ಕಾಲ.

ಈ ವಾರ ಯಾವ ರಾಜಕೀಯದವನಿಗೆ ಜಾಡಿಸಿದ್ದಾರೆ ಎಂದು ಕಾಯೋ ತವಕ. ಸಂವಿಧಾನ ಬದ್ದ ಪತ್ರಿಕಾ ರಂಗದ ಎಫೆಕ್ಟಿವ್ ಕಾಲ ಆಗಿತ್ತದು.

ಆದ್ರೆ ಇಂದು ಕಾಲ ಬದಲಾಗಿದೆ. ರಾಜಕೀಯ ನಾಯಕರಿಗೆ ಪತ್ರಿಕಾ ರಂಗದಲ್ಲಿ ಅತಿಯಾಗಿ lಹಳಸಿದ್ದು ಯಾರು. ಆ ಹಳಸಿದ ಮನಸಿನ ವ್ಯಕ್ತಿ ಯನ್ನು ನಮ್ಮದಾಗಿಸಿ ಕೊಳ್ಳಬೇಕು ಎನ್ನುವ ತವಕ.

ಇದು ರಾಜಕಾರಣಿ ಯ ತಪ್ಪಲ್ಲ. ಆ ರಂಗವೆ ಹಾಗೆ ಅದೊಂದು ರೀತಿಯಲ್ಲಿ ಸೇವಾ ಮನೋಭಾವನೆ ಯ ಗಾಂಭ್ಲಿಂಗ್ ರಂಗ. ಪಕ್ಷ ಗೆಲ್ಲಬೇಕಾದರೆ ಚಾಣಕ್ಯ ನ ಜಾಣ್ಮೆಗಿಂತ ಶಕುನಿಯ ಕುತಂತ್ರ ವೇ ಬೇಕು. ಅವರನ್ನು ಬೈಯೋದು ವೇಸ್ಟ್.

ಆದ್ರೆ ಈ ಪತ್ರಕರ್ತರ ಸೋಗಿನಲ್ಲಿ ಬರುವ ರಾಜಕೀಯ ಪ್ರೇರಿತ ವ್ಯಕ್ತಿಗಳು ಹೆಂಡ, ಮಾಂಸದ ತುಂಡು ಹಾಗೂ ಚಿಲ್ರೆ ಕಾಸಿಗೆ ಬದುಕನ್ನೇ ಮಾರುತ್ತ ನೈಜ ಪತ್ರಕರ್ತರಿಗೆ ಇರಿಸು ಮುರುಸು ಮಾಡುತ್ತಾರೆ.

ತಮ್ಮ ಬೇಳೆ ಬೇಯಲು ತಮ್ಮ ಸಹೋದ್ಯೋಗಿ,  ಸಹೋದರರೆoಬಂತೆ ಇರುವ ಪತ್ರಕರ್ತರನ್ನೇ ಸೌದೆಯಂತೆ ಬೆಂಕಿಗೆ ಇಡುತ್ತಾರೆ.

ಹಾಸನದ ಎಲ್ಲಾ ಪತ್ರಿಕೆಗಳ ಸಂಪಾದಕರೇ,

ಇನ್ನೊಮ್ಮೆ ವಿಮರ್ಶೆ ಮಾಡಿಕೊಳ್ಳಿ. ನೀವು ಮುನ್ನಡೆಸೋ ಪತ್ರಿಕೆಯ ಹೆಸರಲ್ಲಿ ನಿಮ್ಮ ಗಮನಕ್ಕೆ ಬಾರದೆ ಹಣ, ಹೆಂಡವನ್ನು ನಿಮ್ಮ ವರದಿಗಾರರು, ಬಿಡಿ ಸುದ್ಧಿಗಾರರು ಎಂಬ ಹಣೆ ಪಟ್ಟಿ ಕಟ್ಟಿ ಕೊಂಡವರು ಪಡೆದು ನೈಜ ಪತ್ರಿಕಾ ರಂಗವನ್ನು ಹಾಳು ಮಾಡುತ್ತಿದ್ದಾರೆ. ಇದು ನಾ ಕಂಡ ಜ್ವಲಂತ ಸತ್ಯ. ಸತ್ಯ ಕೇಳೋದು ಮಾತ್ರ ಯಾವತ್ತೂ ಕಹಿಯೇ. ಆದರೂ ಹೇಳುತ್ತಿದ್ದೇನೆ.

ಯಾವುದಕ್ಕೂ ಒಮ್ಮೆ ವಿಮರ್ಶೆ ಮಾಡಿ ಎಚ್ಚೆತ್ತು ಕೊಳ್ಳಿ……..  ಪತ್ರಿಕಾ ಧರ್ಮ ರಾಜಕೀಯ ನಾಯಕರ ಹಣ ಹೆಂಡಕ್ಕೆ ಮಾರಾಟ ಆಗಲು ಅವಕಾಶ ನೀಡಬೇಡಿ….

Related posts

ಗೌರಿ ಗಣೇಶ ಹಬ್ಬದ ಶುಭಾಶಯಗಳು

Bimba Prakashana

ಸಕಲೇಶಪುರದಲ್ಲಿ ಪ್ರತಿಭಾ ಕಾರಂಜಿ

Bimba Prakashana

ಟಿ ಎ ಪಿ ಸಿ ಎಂ ಮಹಾಸಭೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More