ನವೆಂಬರ್ 26 ರಂದು ಸಾಮೂಹಿಕ ದತ್ತಮಾಲಧರಣೆ ನವೆಂಬರ್ 28 ರಂದು ದತ್ತಪಾದುಕೆ ದರ್ಶನ – ಕೌಶಿಕ್ ಹೆಚ್.ಎಂ
ಸಕಲೇಶಪುರ – ದತ್ತಜಯಂತಿ ಉತ್ಸವ – 2025 ರೈ ಅಂಗವಾಗಿ ಈ ಬಾರಿ ಸಕಲೇಶಪುರ ತಾಲೂಕಿನಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯ ಆಯೋಜಿಸಿರುವ ಕಾರ್ಯಕ್ರಮದ ಕುರಿತು ಹಿಂದೂ ಮುಖಂಡ ಕೌಶಿಕ್ ಹೆಚ್ ಎಂ ಪ್ರತಿಕ್ರಿಯೆ ನೀಡಿದರು.
ಇಂದು ಸಕಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದತ್ತಜಯಂತಿ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಿ ವಿಶೇಷ ಪೂಜೆ ಸಲ್ಲಿಸಿದ ಕಾರ್ಯಕರ್ತರು ಇದೆ ನವೆಂಬರ್ 26 ರಂದು ಹೊಳೆಮಲ್ಲೆಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ದತ್ತಮಾಲಧರಣೆ ಹಾಗೂ ನವೆಂಬರ್ 28 ರಂದು ಶುಕ್ರವಾರ ಕರ್ನಾಟಕದ ಅಯೋಧ್ಯೆ ಎಂದು ಬಿಂಬಿತವಾಗಿರುವ ಚಿಕ್ಕಮಗಳೂರಿನ ದತ್ತಪೀಠದಲ್ಲಿ ದತ್ತಪೀಠ ದತ್ತಪಾದುಕೆ ದರ್ಶನ ಮಾಡಲಾಗುವುದು ಎಂದು ಹಿಂದೂ ಹಿತರಕ್ಷಣಾ ವೇದಿಕೆ ಮುಖಂಡ ಹೆಚ್.ಎಂ ಕೌಶಿಕ್ ತಿಳಿಸಿದರು.
ಈ ಸಂದರ್ಭದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯ ಮಂಜುನಾಥ್ ಕಬ್ಬಿನಗದ್ದೆ. ಶಿವು ಜಿಪ್ಪಿ. ದೀಪಕ್. ವಿಜಿತ್ ಗೌಡ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.




