Blog

ಬಸ್ ನಲ್ಲೆ ಉಳಿದು ಹೋಗಿದ್ದ ಮಗು ಮರಳಿ ತಾಯಿಗೆ

ಧರ್ಮಸ್ಥಳ ಕ್ಷೇತ್ರಕ್ಕೆ ತನ್ನ ತಾಯಿ ಹಾಗೂ ಮನೆಯವರೊಂದಿಗೆ ತೆರಳಿದ್ದ ಬಾಲಕಿಯೊಬ್ಬಳು ಪುನಃ ಮನೆಗೆ ತೆರಳುವಾಗ ಸಕಲೇಶಪುರದ ಬಾಗೆ  ಬಳಿ ತಾಯಿಯಿಂದ ಬೇರ್ಪಟ್ಟು ನಂತರ ಜನರ ಸಹಕಾರದಿಂದ ಪುನಃ ತಾಯಿಯ ಮಡಿಲು ಸೇರಿದ ಘಟನೆ ವರದಿ ಆಗಿದೆ.

ಕೋಲಾರದಿಂದ ಧರ್ಮಸ್ಥಳ ಕ್ಷೇತ್ರಕ್ಕೆ ತಾಯಿ ಮಗು ಹಾಗೂ ಮನೆಯವರು ಬಂದಿದ್ದರು. ಕ್ಷೇತ್ರ ದರ್ಶನ ಮಾಡಿ ಹಿಂದಕ್ಕೆ ತೆರಳುವ ವೇಳೆ ಬಾಗೆ ಗ್ರಾಮದ ಬಳಿ ಅವರ ಬಸ್ ಕೆಟ್ಟು ನಿಂತಿತ್ತು.

ಈ ಸಂದರ್ಭದಲ್ಲಿ ಬಸ್ ನ ನಿರ್ವಾಹಕ ಇನ್ನೊಂದು ಬಸ್ ಗೆ  ಪ್ರಯಾಣಿಕರನ್ನು ಬಸ್ಸಿಗೆ ಹತ್ತಿಸಿ ಕಳುಹಿಸಿದ್ದ.

ಈ ಸಂದರ್ಭದಲ್ಲಿ ಬಾಲಕಿ ಮಾತ್ರ ಕೆಟ್ಟು ನಿಂತಿದ್ದ ಬಸ್ಸಲ್ಲೇ ಉಳಿದಿದ್ದಳು. ಇದನ್ನು ಗಮನಿಸಬೇಕಾದ ತಾಯಿ ಅತ್ತ ಗಮನ ಕೊಡದೆ ತನ್ನ ಜೊತೆಗೆ ಬಂದ ಗುಂಪಿನಲ್ಲಿ ತೆರಳಿದ್ದಳು.

ಕೆಟ್ಟು ನಿಂತ ಬಸ್ ದುರಸ್ಥಿ ಆದ ಬಳಿಕ ಬಸ್ ನಲ್ಲಿ 3 ನೇ ತರಗತಿಯ ಸಣ್ಣ ಮಗು ಇರುವುದು ಗಮನಕ್ಕೆ ಬಂತು. ಬಳಿಕ ಸಕಲೇಶಪುರ ಪೊಲೀಸ್ ಠಾಣೆ ಯನ್ನು ಸಂಪರ್ಕ ಮಾಡಿ ಮಾಹಿತಿ ನೀಡಲಾಯಿತು.

ಸ್ವಲ್ಪ ದೂರ ಹೋದ ಬಳಿಕ ಮಗು ಇಲ್ಲದುದನ್ನೂ ಕಂಡು ಭಯ ಪಟ್ಟ ಅವರು ಕೆ ಎಸ್ ಆರ್ ಟಿ ಸಿ ಯನ್ನು ಸಂಪರ್ಕ ಮಾಡಿ ಮಗುವಿನ ಮಾಹಿತಿ ತಿಳಿದ ನಂತರ ಪುನಃ ಮಗು ತಾಯಿಯ ಜೊತೆಗೆ ಸಾಗುವಂತ ಗಿದೆ

Related posts

ಆಲೂರು ಕುಪ್ಪೆ ಗ್ರಾಮದ ಬಳಿ ಬಸ್ ತಂಗುದಾಣ ಲೋಕಾರ್ಪಣೆ

Bimba Prakashana

ಕವನ – ಜೈ ಭೀಮಾ

Bimba Prakashana

ಪುನೀತ್ ಬನ್ನ ಹಳ್ಳಿಗೆ ಧನ ದಾಸೋಹಿ ದಂಪತಿಗಳು ಪ್ರಶಸ್ತಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More