ಕಲಬೆರಕೆ ಆಹಾರ ತಡೆಗೆ ಆಹಾರ ಸುರಕ್ಷತಾ ತರಬೇತಿ ಪ್ರಮಾಣ ಪತ್ರ(ಫೋಸ್ಟಾಕ್) ಪಡೆಯುವುದು ಕಡ್ಡಾಯ.
ಹಾಸನ:ಕಲಬೆರಿಕೆ ಆಹಾರ ತಡೆಗೆ ಬೇಕರಿ,ಹೋಟೆಲ್,ಬೀದಿಬದಿ ಆಹಾರ ವ್ಯಾಪರಸ್ಥರು ಹಾಗೂ ದಿನಸಿ ವ್ಯಾಪಾರಿಗಳು ಮತ್ತು ಆಹಾರ ಉತ್ಪಾದಕರು ಮತ್ತು ಮಾರಾಟಗಾರು ಗುಣಮಟ್ಟದ ಆಹಾರ ಲಭ್ಯತೆಯ ಉದ್ದೇಶದಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರ ನೀಡುವ(ಪೋಸ್ಟಾಕ್)ತರಬೇತಿ ಪ್ರಮಾಣ ಪತ್ರ ಪಡೆಯುವುದು ಜೊತೆಗೆ ನೊಂದಣಿ ಮತ್ತು ಪರವಾನಿಗೆ ಕಡ್ಡಾಯವಾಗಿ ಪಡೆದು ವ್ಯವಹಾರ ಮಾಡಬೇಕು ಇಲ್ಲವಾದ್ದಲ್ಲಿ ಕಾನೂನು ಭಾಹಿರ ಅಪರಾದವೆಂದು ಆಹಾರ ಸುರಕ್ಷತಾ ಅಧಿಕಾರಿ ಹಾಗೂ ಜಿಲ್ಲಾ ನೂಡಲ್ ಅಧಿಕಾರಿ ವಿನಯ್.ಕೆ ತಿಳಿಸಿದರು.
ಬೇಲೂರು ನಗರದ ಬಸ್ ನಿಲ್ದಾಣದ ಎದುರು ಅಂಬೇಡ್ಕರ್ ಭವನದಲ್ಲಿ ಬೇಲೂರು,ಆಲೂರು,ಸಕಲೇಶಪುರ ಮೂರು ತಾಲ್ಲೂಕು ಸಂಯುಕ್ತದೊಂದಿಗೆ ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ತರಬೇತಿದಾರರಾದ ಯಶ್ವಂತ್ ಅರುಣ್ ಅವರ ನೇತೃತ್ವದಲ್ಲಿ ಆಹಾರ ಉದ್ದಿಮೆದಾರನ್ನು ಒಳಗೊಂಡಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಸಹಯೋಗದೊಂದಿಗೆ ಗ್ಲೋಬಲ್ ಇನ್ಸ್ಟಿಟ್ಯೂಟ್ ಫಾರ್ ಎಜುಕೇಶನ್ ಅಂಡ್ ರಿಸರ್ಚ್ ಫೌಂಡೇಶನ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ಕಾರ್ಯಕ್ರಮವನ್ನು ವಿನಯ್.ಕೆ ಉದ್ಘಾಟಿಸಿ ಮಾತನಾಡಿದರು.
ಫೋಸ್ಟಾಕ್ ತರಬೇತಿ ಗ್ಲೋಬಲ್ ಇನ್ಸ್ಟಿಟ್ಯೂಟ್ ಸಂಸ್ಥೆಯಿಂದ ಹಾಸನ ಜಿಲ್ಲೆಯಲ್ಲಿ ತರಬೇತಿಯನ್ನು ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ಉದ್ಯಮಿದಾರರುಗಳಾದ ತಾವುಗಳು ಬಳಸಿಕೊಳ್ಳಬೇಕು.ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ಒಳ್ಳೆಯ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡಬೇಕು,ಪ್ರತಿಯೊಬ್ಬ ಕಾರ್ಮಿಕನಿಗೆ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು,ಯಾವುದೇ ನಿಷೇಧಿತ ಪ್ಲಾಸ್ಟಿಕ್,ಕೃತಕ ಬಣ್ಣ ಬಳಸದ ಆಹಾರ,ಶುದ್ಧ ನೀರು ಪೂರೈಕೆ,ಸ್ವಚ್ಛತೆಯೊಂದಿಗೆ ಗ್ರಾಹಕರಿಗೆ ಆಹಾರ ಪೂರೈಕೆ ಮಾಡಬೇಕು,ಬರುವ ಗ್ರಾಹಕರಿಗೆ ಶುಚಿ ಆಹಾರ ಹಾಗೂ ಸ್ವಚ್ಛತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ಈ ತರಬೇತಿ ನೀಡಲಾಗುತ್ತಿದ್ದು,ತರಬೇತಿಯಲ್ಲಿ ಉದ್ಯಮಿಗಳಿಗೆ ಆಹಾರ ಸುರಕ್ಷತಾ ತರಬೇತಿ ಪ್ರಮಾಣ ಪತ್ರ ಕಡ್ಡಾಯವಾಗಿ ಪಡೆದುಕೊಂಡು ಶುಚಿ ರುಚಿ ಆಹಾರವನ್ನು ಗ್ರಾಹಕರಿಗೆ ನೀಡಿದ್ದಲ್ಲಿ ಗ್ರಾಹಕರು ತಮ್ಮಲ್ಲಿ ಹೊಂದಾಣಿಕೆಯಿಂದ ವ್ಯವಹಾರ ಮಾಡುತ್ತಾರೆ ಎಂದು ತಿಳಿಸಿದರು.
ಬೇಲೂರು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಯೋಗಾನಂದ್ ಅವರು ಮಾತನಾಡಿ,ಆಹಾರ ನೀಡುವ ಸಮಯದಲ್ಲಿ ಕಳಪೆ ಮಟ್ಟದ ಆಹಾರವನ್ನು ನೀಡದೆ ಗುಣಮಟ್ಟದ ಆಹಾರಕ್ಕೆ ಆದ್ಯತೆ ನೀಡಿ,ಇತ್ತೀಚಿನ ದಿನಗಳಲ್ಲಿ ಆಹಾರ ನೀಡುವ ವೇಳೆ ಕಳಪೆ ಗುಣಮಟ್ಟದಲ್ಲಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ತಾವುಗಳು ಗಮನದಲ್ಲಿಟ್ಟುಕೊಂಡು ಶುಚಿ-ರುಚಿ ಆಹಾರವನ್ನು ನೀಡುವುದರ ಜೊತೆಗೆ ತಮ್ಮ ತಮ್ಮ ಆಹಾರ ತಯಾರಿಸುವ ಕೊಠಡಿಗಳನ್ನು ಗಾಳಿ ಬೆಳಕಿನಿಂದ ಸ್ವಚ್ಛತೆಯಾಗಿ ಇಟ್ಟುಕೊಳ್ಳಿ,ತಪಾಸಣೆ ಮಾಡಿರುವಂತಹ ದಾಖಲಾತಿಗಳನ್ನು ಇಟ್ಟುಕೊಂಡು ಅಧಿಕಾರಿ ವರ್ಗದವರು ಬಂದ ವೇಳೆ ತಮ್ಮ ಬಳಿ ಇರುವಂತಹ ದಾಖಲಾತಿಗಳನ್ನು ತೋರಿಸಬೇಕು,ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನ ಮಾರಾಟ ಮಾಡುವುದು ಮತ್ತು ತಯಾರಿಸುವುದು ಎರಡು ಆಧ್ಯ ಕರ್ತವ್ಯ,ಇದರಲ್ಲಿ ವ್ಯತ್ಯಯವಾದಲ್ಲಿ ಕಾನೂನು ರಿತ್ಯಾ ಕ್ರಮಕೈಗೊಳ್ಳಲಾಗುವುದು ಎಂದು ಉದ್ದಿಮೆಗಳಲ್ಲಿ ಮನವರಿಕೆ ಮಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಗ್ಲೋಬಲ್ ಇನ್ಸ್ಟಿಟ್ಯೂಟ್ ಎಜುಕೇಶನ್ ಅಂಡ್ ರಿಸರ್ಚ್ ಸಂಸ್ಥೆಯ ರಾಜ್ಯ ಮುಖ್ಯಸ್ಥರಾದ ರಾಘವೇಂದ್ರ ಶೇಟ್ಟಿ ಅವರು ಮಾತನಾಡಿ
1954 ರಲ್ಲಿ ಕಲಬೆರಿಕೆ ಆಹಾರ ತಡೆಯುವ ಉದ್ದೇಶದಿಂದ ಪ್ರಾಧಿಕಾರ ಕಾನೂನಿನ ಕಾಯ್ದೆ ಅನ್ವಯ ಪ್ರತಿ ಆಹಾರ ಉದ್ಯಮಗಳಿಗೆ 2006 ರಲ್ಲಿ ಆಹಾರ ಸುರಕ್ಷತಾ ಕಾಯ್ದೆ ಜಾರಿಗೊಳಿಸಿದ್ದು 2017 ರಿಂದ ಆಹಾರ ಸುರಕ್ಷತಾ ತರಬೇತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆಯುವುದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಇದರ ಜೊತೆಗೆ ವ್ಯಾಪರ ವಹಿವಾಟಿನ ಅನುಗುಣವಾಗಿ ನೊಂದಣಿ ಅಥವಾ ಪರವಾನಿಗೆ ಕೂಡಾ ಕಡ್ಡಾಯಗೊಳಿಸಿದೆ ಇದರ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಕಾನೂನು ರಿತ್ಯಾಕ್ರಮವಿದ್ದು ಎಲ್ಲಾ ಆಹಾರ ಉದ್ದಿಮೆದಾರರು ಜಾಗೃತರಾಗುವಂತೆ ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಆಹಾರ ಸುರಕ್ಷತೆ ಅಧಿಕಾರಿ ಜಿಲ್ಲಾ ನೋಡಲ್ ಅಧಿಕಾರಿ ವಿನಯ್.ಕೆ.ಬೇಲೂರು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಯೋಗಾನಂದ್.ಸಹಾಯಕ ಆಹಾರ ಸುರಕ್ಷತಾಧಿಕಾರಿ ನವೀನ್.ಆಲೂರು ತಾಲ್ಲೂಕು ಸಹಾಯಕ ಆಹಾರ ಸುರಕ್ಷತಾಧಿಕಾರಿ ಮಂಜು.ಗ್ಲೋಬಲ್ ರಾಜ್ಯ ಸಂಯೋಜಕರಾದ ಸಂತೋಷ್.ಮನೋಜ್.ಜಿಲ್ಲಾ ಸಂಯೋಜಕರಾದ ಮಧು ಕುಮಾರ್.ಪ್ರತಾಪ್ ಕುಮಾರ್ ಹೆಚ್.ಆರ್ ಸೇರಿದಂತೆ ನಗರದ ಉದ್ಯಮಿದಾರರು ಭಾಗವಹಿಸಿದ್ದರು.
previous post
next post
