Blog

ಸಕಲೇಶಪುರದಲ್ಲಿ ಅನಿಮಿಯ ತಡೆ ಕಾರ್ಯಕ್ರಮ

ದಿನಾಂಕ 14/02/2026 ರಂದು ಶ್ರೀ ಮಾದ ರಾಮಚಂದ್ರ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ, ಹಾಸನ ಜಿಲ್ಲಾ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟ ಹಾಗೂ ಹರ್ಷಿತ ಸಂಸ್ಥೆ ಆಲೂರು ಇವರ ಸಂಯುಕ್ತ ಆಶ್ರಯದಲ್ಲಿ ಅನೀಮಿಯಾ ತಡೆಗಟ್ಟುವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಸಕಲೇಶಪುರದಲ್ಲಿ ನೆರವೇರಿತು.

ಈ ಕಾರ್ಯಕ್ರಮವನ್ನು ಸಕಲೇಶಪುರ–ಆಲೂರು–ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲಾ ಜೀವಿಗಳಿಗೆ ಆರೋಗ್ಯ ಅತ್ಯಂತ ಮಹತ್ವದ್ದಾಗಿದೆ. ಉತ್ತಮ ಆಹಾರ, ನಿಯಮಿತ ವ್ಯಾಯಾಮ ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಮೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಕಲಾವತಿ ಅವರು ಪ್ರಾಸ್ತಾವಿಕ ನುಡಿ ನುಡಿದರು. ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಅರುಣ್ ಕುಮಾರ್, ರಾಣಿ, ಸುಮಿತ್ರಾ ಹಾಗೂ ಭೀಮಶಂಕರ್ ಉಪಸ್ಥಿತರಿದ್ದರು.

ಹರ್ಷಿತ ಸಂಸ್ಥೆಯ ಸಂಸ್ಥಾಪಕರಾದ ನಂಜಪ್ಪ ಶೆಟ್ಟಿ ಹಾಗೂ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿಗಳಾದ ಪೌಲೌಸ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಹರ್ಷಿತ ಸಂಸ್ಥೆ ಆಲೂರಿನ ಹಾಗೂ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳಾದ ನವೀನ್, ಪೂರ್ಣಿಮಾ ಹಾಗೂ ಹೇಮ (ತಾಲೂಕು ಸಂಯೋಜಕರು) ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related posts

ಉದ್ಯೋಗ ಮಾಹಿತಿ

Bimba Prakashana

ರಘುರಿಗೆ ಡಾಕ್ಟರೇಟ್ ಪದವಿ

Bimba Prakashana

ಸಕಲೇಶಪುರದ 3 ಮಂದಿಗೆ ತಾಲೂಕು ಶಿಕ್ಷಕ ರತ್ನ ಪ್ರಶಸ್ತಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More