Blog

ಆಲೂರುನಲ್ಲಿ ಸಂತ ಸೇವಾ ಲಾಲ್ ಜಯಂತಿ ಕಾರ್ಯಕ್ರಮ



ಆಲೂರು.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ಆಲೂರು ಇವರ ವತಿಯಿಂದ ಶ್ರೀ ಗುರು ಸಂತ ಸೇವಾಲಾಲ್ ಜಯಂತಿ ಯನ್ನು ತಹಸೀಲ್ದಾರ್ ಮತ್ತು ಅಧ್ಯಕ್ಷರ ಸಮ್ಮುಖದಲ್ಲಿ ತಾಲ್ಲೂಕು ಕಚೇರಿ ಆವರಣದಲ್ಲಿ ಇಂದು ಜ್ಯೋತಿ ಬೆಳಗುವುದರ ಮೂಲಕ ಸಂತ ಸೇವಾಲಾಲ್ ಭಾವಚಿತ್ರಕ್ಕೆ ಎಲ್ಲರೂ ಪುಷ್ಪರ್ಚನೆ ಮಾಡಿದರು.

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಅಧ್ಯಕ್ಷರಾದ ಶ್ರೀ ತಹಶೀಲ್ದಾರ್ ಮಲ್ಲಿಕಾರ್ಜುನನವರು ಮಾತನಾಡುತ್ತ
ಸಂತ ಸೇವಾಲಾಲ್ ಮಹಾರಾಜ್ (1739-1773) ಬಂಜಾರ ಸಮುದಾಯದ ಅತ್ಯುನ್ನತ ದಾರ್ಶನಿಕ, ಸಮಾಜ ಸುಧಾರಕ ಮತ್ತು ದೈವೀ ಪುರುಷ. ಫೆಬ್ರವರಿ 15, 1739 ರಂದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸೂರಗೊಂಡನಕೊಪ್ಪದಲ್ಲಿ ಜನಿಸಿದ ಇವರು, ಅಲೆಮಾರಿ ಬಂಜಾರ ಸಮುದಾಯದ ಉದ್ಧಾರಕ್ಕಾಗಿ, ಮೂಢನಂಬಿಕೆಗಳ ನಿರ್ಮೂಲನೆಗೆ ಮತ್ತು ಅರಣ್ಯ ಹಕ್ಕುಗಳಿಗಾಗಿ ಹೋರಾಡಿದರು. ಜಗದಂಬಾ ದೇವಿಯ ಭಕ್ತರಾಗಿದ್ದ ಇವರು 19ನೇ ಶತಮಾನದಲ್ಲಿ ಬ್ರಿಟಿಷ್ ಮತ್ತು ನಿಜಾಮರ ಆಡಳಿತದ ವಿರುದ್ಧ ಧ್ವನಿ ಎತ್ತಿದರು.

ನಂತರ ಮುಖ್ಯ ಭಾಷಣಕಾರರಾದ ಶ್ರೀಯುತ ಸೋಮ ನಾಯಕ ರವರು ಮಾತನಾಡುತ್ತಾ..ಸಂತ
ಸೇವಾಲಾಲರು ರಾಮಾವತ್ (ತಂದೆ) ಮತ್ತು ಧರಾಮಣಿ ಮಾತಾ (ತಾಯಿ) ದಂಪತಿಗೆ ಜನಿಸಿದರು. ಇವರು ಬಾಲ್ಯದಿಂದಲೇ ದೈವೀ ಶಕ್ತಿ ಹೊಂದಿದ್ದರು ಎಂದು ನಂಬಲಾಗಿದೆ.
ಬಂಜಾರ ಸಮುದಾಯದಲ್ಲಿ ವ್ಯಸನ ಮುಕ್ತಿ, ಸತ್ಯ, ಅಹಿಂಸೆ ಮತ್ತು ಸ್ವಚ್ಛತೆಯನ್ನು ಬೋಧಿಸಿದರು. ಮಹಿಳೆಯರ ಗೌರವ ಮತ್ತು ಶಿಕ್ಷಣಕ್ಕೆ ಒತ್ತು ನೀಡಿದರು.

ಬ್ರಿಟಿಷರು ಕಾಡುಗಳ ಮೇಲೆ ಹೇರಿದ್ದ ನಿರ್ಬಂಧಗಳ ವಿರುದ್ಧ ಹೋರಾಡಿ, ಬಂಜಾರರಿಗೆ ಭದ್ರತೆ ನೀಡಿದರು.
ಪವಾಡ ಪುರುಷ ಸೇವಾಲಾಲರು ತಮ್ಮ ದೈವೀ ಲೀಲೆಗಳ ಮೂಲಕ ಜನರ ಮನಗೆದ್ದಿದ್ದರು. ಹೈದರಾಬಾದ್‌ನ ನಿಜಾಮನಿಗೆ ಇವರ ದೈವೀ ಶಕ್ತಿಯ ಅರಿವಾಗಿ ಗೌರವ ನೀಡಿದ್ದ ಎಂಬ ಇತಿಹಾಸವಿದೆ.
ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಪೋಹರಾದೇವಿಯಲ್ಲಿ ಜಗದಂಬಾ ದೇವಿಯ ದೇವಸ್ಥಾನದ ಸಮೀಪ ಸಮಾಧಿ ಮಾಡಲಾಗಿದೆ, ಇದು ಬಂಜಾರರ ಪವಿತ್ರ ಕ್ಷೇತ್ರವಾಗಿದೆ.
ಸೇವಾಲಾಲ್ ಮಹಾರಾಜ್ ಅವರು ಬಂಜಾರ ಸಮುದಾಯದ ಸಂಸ್ಕೃತಿ, ಭಾಷೆ ಮತ್ತು ಹಕ್ಕುಗಳಿಗಾಗಿ ಬದುಕು ಮುಡಿಪಾಗಿಟ್ಟ ಮಹಾನ್ ಚೇತನ ಎಂದರು.

ಸಂದರ್ಭದಲ್ಲಿ ತಾಸಿಲ್ದಾರ್ ಮಲ್ಲಿಕಾರ್ಜುನ, ಸೋಮ ನಾಯಕ್ ಜಿಲ್ಲಾಧ್ಯಕ್ಷರು ಮುಖ್ಯ ಭಾಷಣಕಾರರು, ರವಿ ನಾಯಕ್ ಜೆ ಅಧ್ಯಕ್ಷರು ಎಐಬಿಎಸ್ಎಸ್ ಆಲೂರು, ಸುರೇಶ್ ಕುಮಾರ್ ಅಧ್ಯಕ್ಷರು ಏಐಬಿಎಸ್ಎಸ್ ಹಾಸನ ಮಹಾನಗರ ಪಾಲಿಕೆ, ರವಿಶಂಕರ್ ADLR ಆಲೂರು, ತಾಲೂಕು ಪಂಚಾಯಿತಿ AD ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ ✒️ರಂಜಿತ್ ಕುಮಾರ್ ಅಂಬುಗ

Related posts

ಸಕಲೇಶಪುರದಲ್ಲಿ 1 ರೂಪಾಯಿಗೆ ಟೀ

Bimba Prakashana

ಗೌರಿ ಗಣೇಶ ಹಬ್ಬದ ಶುಭಾಶಯಗಳು

Bimba Prakashana

ಹಾನು ಬಾಳುನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More