ಸಕಲೇಶಪುರ : ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಿದ ಆರೋಪದ ಹಿನ್ನೆಲೆಯಲ್ಲಿ ಸಕಲೇಶಪುರದ ನ್ಯಾಯವಾದಿಗಳು ಪುರಸಭೆ ಕಚೇರಿಗೆ ಬೀಗ ಹಾಕಿದ ಘಟನೆ ನಡೆದಿದೆ.
ಪುರಸಭೆಯ ಮುಖ್ಯ ಅಧಿಕಾರಿ ಮಹೇಶ್ವರಪ್ಪ ಅವರನ್ನು ತಕ್ಷಣ ಅಮಾನತ್ತು ಮಾಡಿ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ರಾಜ್ಯದ ವಿವಿಧ ಭಾಗಗಳಿಂದ ವಕೀಲರು ಆಗಮಿಸಿ ಹೋರಾಟ ನಡೆಸಿದರು.
ಸಕಲೇಶಪುರ ವಕೀಲರ ಸಂಘದ ಸದಸ್ಯರಾದ ಅಭಿಜ್ಞಾ ಅವರು ನ್ಯಾಯಾಲಯದ ಆದೇಶದ ಮೇರೆಗೆ ತಮಗೆ ಸಂಬಂದಿಸಿದ ನಿವೇಶನದ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರೂ, ಸುಮಾರು ಎರಡು ವರ್ಷಗಳಿಂದ ಖಾತೆ ಮಂಜೂರಾಗದೆ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.
ಖಾತೆ ಮಾಡಿಕೊಡುವ ಸಲುವಾಗಿ ಸುಮಾರು 30 ಲಕ್ಷ ರೂಪಾಯಿ ಲಂಚ ಕೇಳಲಾಗಿದೆ ಎಂಬ ಗಂಭೀರ ಆರೋಪವೂ ಪುರಸಭೆಯ ಮುಖ್ಯಾಧಿಕಾರಿ ವಿರುದ್ದ
ಕೇಳಿಬಂದಿದೆ.
ನ್ಯಾಯಾಲಯದ ಆದೇಶವಿದ್ದರೂ ಕಾನೂನುಬದ್ಧವಾಗಿ ಕೆಲಸ ಮಾಡಿಕೊಡದೆ ಲಂಚಕ್ಕೆ ಒತ್ತಾಯಿಸಿರುವುದಲ್ಲದೆ, ಪದೇಪದೇ ಕಚೇರಿಗೆ ಬಂದರೆ ಅಟ್ರಾಸಿಟಿ ಕೇಸ್ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಬಳಿಕ ವಕೀಲರ ಮೇಲೆಯೇ ಅಟ್ರಾಸಿಟಿ ಕೇಸ್ ದಾಖಲಾಗಿರುವುದು ವಕೀಲ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಸಂಬಂಧ ಸಕಲೇಶಪುರ ತಾಲೂಕು ವಕೀಲರ ಸಂಘವು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು. ಒಂದು ವಾರ ವಾದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ವಕೀಲರು ಸಾಮೂಹಿಕ ಪ್ರತಿಭಟನೆಗೆ ನಿರ್ಧರಿಸಿದರು.
ಸೋಮವಾರದಂದು ಸಕಲೇಶ್ವರ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಿ ನಗರದ ಪ್ರಮುಖ ರಾಜಭೀದಿಗಳಲ್ಲಿ ಪ್ರತಿಭಟನೆ
ಸಾಗುತ್ತ ಪುರಸಭೆ ಕಚೇರಿ ಎದುರು ತೀವ್ರ ಪ್ರತಿಭಟನೆಯಾಗಿ ಮಾರ್ಪಟ್ಟಿತು. ಈ ಪ್ರತಿಭಟನೆಯಲ್ಲಿ
ಹಾಸನ ಜಿಲ್ಲೆಯ ವಿವಿಧ ತಾಲೂಕುಗಳೊಂದಿಗೆ ಬೆಂಗಳೂರು, ಮಂಡ್ಯ, ಮೈಸೂರು, ರಾಮನಗರ, ಮಳವಳ್ಳಿ ಮುಂತಾದ ಪ್ರದೇಶಗಳಿಂದ ವಕೀಲರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸದಸ್ಯರು ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.
ಪ್ರತಿಭಟನೆ ತೀವ್ರಗೊಂಡು ಪುರಸಭೆ ಕಚೇರಿಗೆ ಬೀಗ ಹಾಕುವ ಮಟ್ಟಿಗೆ ಪೋಲೀಸರು ಹಾಗೂ ವಕೀಲರ ನಡುವೆ ಜಿದ್ದಾಜಿದ್ದಿ ವಾತಾವರಣ ಏರ್ಪಟ್ಟಿತು.
ಸುಳ್ಳು ಅಟ್ರಾಸಿಟಿ ಕೇಸ್ ತಕ್ಷಣ ಹಿಂಪಡೆಯಬೇಕು, ಮುಖ್ಯಾಧಿಕಾರಿಯನ್ನು ಅಮಾನತ್ತು ಮಾಡಿ ವರ್ಗಾವಣೆ ಮಾಡಬೇಕು ಎಂಬ ಘೋಷಣೆಗಳು ಮೊಳಗಿದವು. ಜಿಲ್ಲಾಧಿಕಾರಿ, ಪಿ ಡಿ ಸ್ಥಳಕ್ಕೆ ಆಗಮಿಸಬೇಕು ಎಂಬ ಧ್ವನಿ
ತಾರಕಕ್ಕೆ ಮುಟ್ಟಿತು. ಸ್ಥಳೀಯ ಡಿವೈಎಸ್‌ಪಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು.
ಸ್ಥಳೀಯ ಶಾಸಕ ಸಿಮೆಂಟ್ ಮಂಜು ಕೂಡ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ನ್ಯಾಯ ರಕ್ಷಕರಾದ ವಕೀಲರ ವಿರುದ್ಧ ಸುಳ್ಳು ಕೇಸ್ ದಾಖಲಿಸುವುದು ಸರಿಯಾದ ಕ್ರಮವಲ್ಲ ಎಂದು ಸ್ಪಷ್ಟಪಡಿಸಿದರು.
ಪುರಸಭೆ ಆಡಳಿತ ಬಡವರ ಪರವಾಗಿ ಹಾಗೂ ಕಾನೂನಾತ್ಮಕ ವಾಗಿ ಇರಬೇಕು. ಈ ಘಟನೆ
ಯಿಂದ ನನಗೂ ಬೇಸರ ಇದೆ. ಕಲಕೆದ ಬಾರಿಯೂ ಕೂಡ ಪುರಸಭಾ ಕಛೇರಿಗೆ ಬೆಂಕಿ ಇಟ್ಟ ಪ್ರಸಂಗ ಕೂಡ ನಡೆದಿತು.
ಪ್ರಸ್ತುತ ವಕೀಲರಾದ ಅಭಿಜ್ಞಾನ್ ಎಂಬುವವರ ವಿಚಾರವಾಗಿ
ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕು ಎಂದು ಸೂಚಿಸಿದರು.
ಒತ್ತಡದ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯ ಅಧಿಕಾರಿ ಮಹೇಶ್ವರಪ್ಪ ವಕೀಲರ ಮುಂದೆ ಹಾಜರಾಗಿ, “ತಿಳಿದು-ತಿಳಿಯದೆ ತಪ್ಪಾಗಿದೆ” ಎಂದು ಬಹಿರಂಗವಾಗಿ ಕ್ಷಮೆಯಾಚಿಸಿದರು. ಪ್ರಕರಣವನ್ನು ಹೈಕೋರ್ಟ್‌ನಲ್ಲಿ ಸ್ಕ್ವಾಷ್ ಮಾಡಲು ಅರ್ಜಿ ಸಲ್ಲಿಸುವಾಗ ಎಲ್ಲಾ ಜವಾಬ್ದಾರಿಯನ್ನು ತಾನೇ ವಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ವಕೀಲರ ಸಂಘದ ಅಧ್ಯಕ್ಷರು ಮಾತನಾಡಿ, ಸರ್ಕಾರಿ ಕಚೇರಿಗಳಿಗೆ ಬರುವ ವಕೀಲರು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಅಧಿಕಾರ ದುರುಪಯೋಗವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಪುರಸಭೆ ಸಾರ್ವಜನಿಕರಿಗೆ ಬಿಸಿತುಪ್ಪದ ರೀತಿಯಲ್ಲಿ ಕಾಣುತ್ತಿತು.
ಸಾರ್ವಜನಿಕರು ತಮ್ಮ ಕೆಲಸಗಳು
ಸರಿಯಾದ ಸಮಯಕ್ಕೆ ನಿರ್ವಹಣೆ ಮಾಡುತ್ತಿಲ್ಲ ಎಂಬ ಹಲವು ಉದಾಹರಣೆಗೆ ಸಕಲೇಶಪುರದ ಪುರಸಭೆ ಕಾರಣವಾಗಿದೆ. ಸಾರ್ವಜನಿಕರು ಯಾವುದೇ ಮುಕಾಜು ಇಲ್ಲದೆ ತಮ್ಮ ಕೆಲಸದ ನಿರ್ವಹಣೆ ವಿಳಂಬದ ಪ್ರಶ್ನೆ
ಬಂದಾಗ ಧೈರ್ಯವಾಗಿ ಪ್ರಶ್ನಿಸುವ
ಮನೋಭಾವನೆ ಬೆಳೆಸಿಕೊಳ್ಳಬೇಕು
ಆಗ ಯಾವುದೇ ಅಧಿಕಾರಿ ಭ್ರಷ್ಟಾಚಾರ ಮಾಡಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ನಿರ್ಮಾಣ ವಾಗುತ್ತದೆ. ಈ ಒಂದು ಹೋರಾಟ ಸಕಲೇಶಪುರದ ಈ ಘಟನೆ ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯ ಮಟ್ಟದಲ್ಲಿಯೂ ಚರ್ಚೆಗೆ ಕಾರಣವಾಗಿದೆ. ಇದು ಭ್ರಷ್ಟ ಅಧಿಕಾರಿಗಳಿಗೆ ಒಂದು ಪಾಠವಾಗಲಿದೆ ಎಂಬದು ನಮ್ಮ ಅಭಿಪ್ರಾಯ ಎಂದು ವಕೀಲರು ಸಾರ್ವಜನಿಕರಿಗೆ ಎಚ್ಚರಿಕೆ ಘಂಟೆ
ನೀಡಿದ್ದರು.
ಈ ಹೋರಾಟಕ್ಕೆ ಬೆಂಬಲ ನೀಡಿದ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ವಕೀಲರ ಸಂಘಗಳಿಗೆ ಧನ್ಯವಾದ ಸಲ್ಲಿಸಿದರು.

