Blog

ವಿಧಾನ ಸೌಧಕ್ಕೆ ಮಾಧ್ಯಮ ನಿಷೇಧ – ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ಖಂಡನೆ

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ( ರಿ.,) ಬೆಂಗಳೂರು

KARNATAKA MEDIA JOURNLIST UNION

   ವಿಧಾನಸೌಧ ಮಾಧ್ಯಮದವರಿಗೆ ಪ್ರವೇಶ ನಿಬಂಧ-  ರಾಜ್ಯ ಸಂಘ ಖಂಡನೆ

     ಆಡಳಿತ ಮತ್ತು ಸುಧಾರಣೆ ಇಲಾಖೆಯು ಭದ್ರತಾ ನೆಪವಡ್ಡಿ ಮಾಧ್ಯಮದವರ ಮೇಲೆ ವಿಧಾನಸೌಧ ಪ್ರವೇಶಿಸಲು ನಿಷೇಧ ಹೇರುತ್ತಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಬ್ಬಾಳಿಕೆ ಮಾಡಿದಂತಾಗಿದೆ. ಈ ಆದೇಶದ ನಿರ್ಧಾರವನ್ನು ಕರ್ನಾಟಕ ಮಾಧ್ಯಮ ಪತ್ರಕರ್ತ ಸಂಘವು ತೀವ್ರವಾಗಿ ಖಂಡಿಸುತ್ತಾ ,ಈ    ಅದೇಶವನ್ನು ಹಿಂಪಡೇಬೇಕೆಂದು ಸರ್ಕಾರಕ್ಕೆ ಸಂಘ ಒತ್ತಾಯಿಸುತ್ತದೆ ಎಂದು ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಜಿ ಎಂ ರಾಜಶೇಖರ್ ತಿಳಿಸಿದ್ದಾರೆ.

.
    ಮಾಧ್ಯಮಗಳು ಇಲ್ಲದ ಜಗತ್ತು ಊಹಿಗೂ ನಿಲುಕದ್ದು , ಆರಂಭ ದಿನದಿಂದ  ಅವು ನಡೆದು ಬಂದ ದಾರಿ ಒಂದು ರೋಚಕ ಇತಿಹಾಸ, ಬಗೆ ಬಗೆಯ  ಸಂಕಷ್ಟಗಳು ಮತ್ತು ಅಡೆತಡೆಗಳ ನಡುವೆ ಜಗತ್ತಿನಲ್ಲಿ ಪತ್ರಿಕೋದ್ಯಮ ಉಳಿದಿರುವುದು  ಕಾರಣ ಮಾನವನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಬಗ್ಗೆ ಇರುವ ಅಪಾರ ಆಸಕ್ತಿಯಾಗಿದೆ.


    ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ನಡವಳಿಕೆಗಳನ್ನು, ಚಟುವಟಿಕೆಗಳನ್ನು ಜನತೆಗೆ ಶೀಘ್ರವಾಗಿ ಮುಟ್ಟಿಸುವುದು, ಜನತೆಯ ಕುಂದು- ಕೊರತೆ  ಆಶೋತ್ತರಗಳನ್ನು, ಅಧಿಕೃತವಾಗಿ ಆಡಳಿತ ವ್ಯವಸ್ಥೆಯ ಗಮನಕ್ಕೆ ತರುವುದು, ಜನತೆ ಹಾಗೂ ಪ್ರಜಾಪ್ರಭುತ್ವದ ಪ್ರಧಾನ ಅಂಗಗಳಿಗೆ ಎರಡು ಕಡೆ ಸಂಚಾರವಿರುವ ಸೇತುವೆಯಾಗಿ ಮಾಧ್ಯಮ ಕರ್ತವ್ಯ ನಿರ್ವಹಿಸುತ್ತಿದೆ.


    ಸಮಾಜದ ಆಗು – ಹೋಗು, ಅಂಕು-ಡೊಂಕುಗಳನ್ನು ಮಾಧ್ಯಮ ಮೂಲಕ ತಿಳಿಸುವುದು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯ ತೊಡಗಿದಾಗ ಅವುಗಳನ್ನು ರಕ್ಷಿಸುವ ಹಾಗೂ ಆಡಳಿತ ಚುಕ್ಕಾಣಿ ಹಿಡಿದವರು ಎಡವಿದಾಗ ನಿರ್ಭಯದಿಂದ, ನಿರ್ಧಾಕ್ಷಿಣ್ಯವಾಗಿ ಎಚ್ಚರಿಸುವುದು ಮಾಧ್ಯಮದ ಜವಾಬ್ದಾರಿ ಅತ್ಯಂತ ಗುರುತರವಾದದ್ದು ಇಂತಹ ಜವಾಬ್ದಾರಿಯ  ಹೊಣೆಗಾರಿಕೆಯನ್ನು ಹಲವು ದಶಕಗಳಿಂದಲೂ ನಡೆಸಿಕೊಂಡು ಬರುತ್ತಿದೆ.  

    ಮಾಧ್ಯಮದ ಮೇಲೆ ನಮ್ಮ ನಮ್ಮನಾಳುವಂತಹ ಸರ್ಕಾರಗಳು ಹಲವಾರು ನಿರ್ಬಂಧಗಳನ್ನು ವಿಧಿಸುತ್ತಿರುವುದು ಸರಿಯಾದ ಕ್ರಮವಲ್ಲ.
     ಹಿಂದೆ ವಿಧಾನಸಭಾ ಕಲಾಪಗಳನ್ನು ನೇರ ಪ್ರಸಾರ ಮಾಡುತ್ತಿದ್ದ ಸಂದರ್ಭದಲ್ಲಿ ಚಿತ್ರೀಕರಣ ಮಾಡುವುದನ್ನು ಅಂದಿನ ಬಿಜೆಪಿ ಸರ್ಕಾರ ಚಿತ್ರೀಕರಣಕ್ಕೆ ತಡೆ ಮಾಡಿ ಮಾಧ್ಯಮದವರನ್ನು ಹೊರಗಿಡಲಾಯಿತು. ಇಂದು ಕೂಡ ಅದು ಮುಂದುವರಿಯುತ್ತಿದೆ.


   ಇಂದು ಕಾಂಗ್ರೆಸ್ ಸರ್ಕಾರ ಮಾಧ್ಯಮದವರಿಗೆ ವಿಧಾನಸೌಧದಲ್ಲಿ ನಿಗದಿತ ಸ್ಥಳೀಯದಲ್ಲಿ ನಿಂತು ಸುದ್ದಿ ಮಾಡಬೇಕೆಂಬ ಆದೇಶ ಮಾಡಲು ಮುಂದಾಗಿ ಸಂಬಂಧ ಪಟ್ಟ ಇಲಾಖೆಗೆ ನಿಯಮವನ್ನು ಜಾರಿಗೆ ತರಲು  ಮುಂದಾಗಿದ್ದು ಸರ್ಕಾರ ಕೂಡಲೇ ಆದೇಶವನ್ನು ಹಿಂಪಡೆಯಬೇಕು ಪತ್ರಕರ್ತರಿಗಿರುವ ಸ್ವಾತಂತ್ರ್ಯವನ್ನು  ಹತ್ತಿಕ್ಕುವ ಕೆಲಸವನ್ನು ಯಾವುದೇ ಸರ್ಕಾರ ಮಾಡೋದು ಸರಿಯಲ್ಲ.


     ಕರ್ನಾಟಕ ಮಾಧ್ಯಮ ಪತ್ರಕರ್ತ ಸಂಘವು ಆದೇಶವನ್ನು ಖಂಡಿಸಿ, ಕೂಡಲೇ ವಾಪಸ್ ಪಡೆದು ಪತ್ರಕರ್ತರಿಗೆ ಮುಕ್ತವಾಗಿ ಕೆಲಸ ಮಾಡಲು ಅನುವು ಮಾಡಿಕೊಡಬೇಕೆಂದು ರಾಜ್ಯಾಧ್ಯಕ್ಷ ಜಿ.ಎಂ ರಾಜಶೇಖರ್ ಹಾಗೂ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

Related posts

ಶಿಕ್ಷಕರಿಗೆ ಸನ್ಮಾನ

Bimba Prakashana

ಸಕಲೇಶಪುರದಲ್ಲಿ ಈದ್ ಮಿಲಾದ್ ಆಚರಣೆ

Bimba Prakashana

ಬಿಳಿತಾಳು ಉದಯ ಕಾಂಗ್ರೆಸ್ ಪಕ್ಷಕ್ಕೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More