Blog

ಬೇಲೂರು ಸರ್ಕಾರಿ ಜಾಗದಲ್ಲಿ ತಲೆ ಎತ್ತಿದ ಖಾಸಗಿ ಹೋಟೆಲ್

🔴ಸರ್ಕಾರಿ ಜಾಗದಲ್ಲಿ ತಲೆ ಎತ್ತಿದ ಖಾಸಗಿ ಹೋಟೆಲ್

🔴ಹೋಟೆಲ್ ಮಾಲೀಕನಿಗೆ ಗುತ್ತಿಗೆ ನೀಡಿದ ಪಬ್ಲಿಕ್ ಶಾಲೆ

🔴 ಆಡಳಿತ ಮಂಡಳಿಯ ವಿರುದ್ದ ಸ್ಥಳಿಯರಿಂದ ಪ್ರತಿಭಟನೆ ಎಚ್ಚರಿಕೆ.

ವರದಿ :ಅರುಣ್ ಸಿಂಗ್ ರಾಜಪುತ್

ಬೇಲೂರು: ತಾಲ್ಲೂಕಿನ ಹಳೇಬೀಡು – ಬೇಲೂರು ರಸ್ತೆಯಲ್ಲಿರುವ ಬಿಸಿಎಂ ಹಾಸ್ಟೆಲ್ ಪಕ್ಕದಲ್ಲಿರುವ ಹಳೇ ಅಂಗನವಾಡಿ ಕಟ್ಟಡದ ಜಾಗವನ್ನು ಸರ್ಕಾರಿ ಪಬ್ಲಿಕ್ ಶಾಲಾ ಆಡಳಿತ  ಮಂಡಳಿಯವರು ಖಾಸಗಿ ಹೋಟೆಲ್ ಹಾಗೂ ಗ್ರಾನೈಟ್ ಅಂಗಡಿಗೆ ಬಾಡಿಗೆ ನೀಡಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.


  ಬೇಲೂರು ತಾಲ್ಲೂಕಿನ ಹಳೇಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಬೇಲೂರು ಹಳೇಬೀಡು ರಸ್ತೆಯಲ್ಲಿರುವ ಸರ್ಕಾರಿ ಶಾಲಾ ಜಾಗದಲ್ಲಿ ಲೈಸೆನ್ಸ್ ಇಲ್ಲದೆ ಖಾಸಗಿಯವರು ಹೋಟೆಲ್ ಹಾಗೂ ಗ್ರಾನೈಟ್ ಅಂಗಡಿ ಮಾಡಿಕೊಂಡಿದ್ದಾರೆ ಎಂದು ಸ್ಥಳಿಯರು ಶಾಲಾ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.


          ಇತ್ತೀಚೆಗೆ ಸರ್ಕಾರಿ ಶಾಲೆಗಳ ಜಾಗವನ್ನು ಖಾಸಗಿಯವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆ,ಕರ್ನಾಟಕ ಪಬ್ಲಿಕ್ ಶಾಲೆ SDMC ಮಂಡಳಿ ಹೋಟೆಲ್ ಗೆ ಜಾಗ ಬಾಡಿಗೆ ನೀಡಲಾಗಿದ್ದು, ಹೋಟೆಲ್ ಮಾಂಸಹಾರಿ ಯಾಗಿರುವುದರಿಂದ ದಿನನಿತ್ಯ ನೂರಾರು ಜನ ಊಟ ಸವಿಯಲು ಬರುತ್ತಾರೆ.ಅದರೆ ಬೆಳಿಗ್ಗೆ 07 ಗಂಟೆಯಿಂದ ರಾತ್ರಿ 11 ಗಂಟೆಗೂ ಅಧಿಕ ಸಮಯದವರೆಗೂ ಹೋಟೆಲ್ ತೆರದಿರುವ ಕಾರಣದಿಂದ ಹೋಟೆಲ್ ನಲ್ಲಿ ಜನರು ಮದ್ಯಪಾನ ಮಾಡಿ ಕೂಗಾಟದ ಸದ್ದು ಮಕ್ಕಳಿಗೆ ಕೇಳಿ ಬರುತ್ತಿದ್ದು,ಪಕ್ಕದಲ್ಲಿರುವ ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಹಾಸ್ಟೆಲ್ ಮಕ್ಕಳಿಗೆ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.


   ಸರ್ಕಾರದ ಆಸ್ತಿಯನ್ನು ಶಾಲಾ ಮಂಡಳಿಯವರು ಖಾಸಗಿಯವರಿಗೆ ಬಾಡಿಗೆ ನೀಡಲು ಅವಕಾಶ ನೀಡಿದವರು ಯಾರು.ಗ್ರಾಮ ಪಂಚಾಯ್ತಿಯಿಂದ ಲೈಸೆನ್ಸ್ ಪಡೆಯದೆ ಅಕ್ರಮವಾಗಿ ಹೋಟೆಲ್ ನಡೆಸಲು ಅವಕಾಶ ನೀಡಿದವರು ಯಾರು..ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಅನುಮಾನ ಹುಟ್ಟು ಹಾಕಿದೆ.


  ಕಳೆದ ಕೆಲ ವರ್ಷಗಳಿಂದಲೂ ಹೋಟೆಲ್ ನಿರ್ಮಾಣ ಮಾಡಿರುವ ಜಾಗದಲ್ಲಿ ಸರ್ಕಾರಿ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿತ್ತು.ಅದೇ ಜಾಗದಲ್ಲಿ ಒಂದು ಕೊಳವೆ ಬಾವಿಯೂ ಇದೆ.ಆದರೆ ದಿನ ಕಳೆದಂತೆಲ್ಲ ಕಟ್ಟಡದ ಜಾಗ  ರಾಜಕಾರಣಿಗಳ ಕುಮ್ಮಕ್ಕಿನಿಂದ ಖಾಸಗಿಯವರ ಪಾಲಾಗಿದೆ.ಎಂದು ಆರೋಪ ಮಾಡಿದ್ದಾರೆ.


         ಗ್ರಾಮ ಪಂಚಾಯ್ತಿ ಪಿಡಿಓ ವಿರುಪಾಕ್ಷ  ಮಾತನಾಡಿ,ಗ್ರಾಮ ಪಂಚಾಯ್ತಿ ಯಿಂದ ಪರವಾನಗಿ ಪಡೆಯದೆ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಪರವಾನಗಿ ನೀಡುವಂತೆ ನಮಗೆ ಅರ್ಜಿ ಹಾಕಿದ್ದಾರೆ.ನಾವು ಸರ್ಕಾರಿ ಜಾಗವಾಗಿರುವುದರಿಂದ ನಾವು ಲೈಸೆನ್ಸ್ ನೀಡಿಲ್ಲ ಆದರೂ ಹೋಟೆಲ್ ನಡೆಸುತ್ತಿದ್ದಾರೆ ಜಾಗದ ಜೊತೆಗೆ ಕೊಳವೆ ಬಾವಿಯನ್ನೂ ಉಪಯೋಗಿಸಿಕೊಂಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.


      ಸರ್ಕಾರಿ ಸ್ವತ್ತಿಗೆ ಸೇರಿದ ಕಳೆದ 16.07.2025 ರಂದು ಕರ್ನಾಟಕ ಪಬ್ಲಿಕ್ ಶಾಲೆಯವರು ಹರಾಜು ಮಾಡಿದ್ದು, ತಿಮ್ಮನಹಳ್ಳಿ ಕಟ್ಟೆ ಹಿಂಬಾಗದ ಸರ್ವೆ ನಂ 462 ರಲ್ಲಿ 1 ಎಕರೆ ಖುಷ್ಕಿ ಜಮೀನು ಮಹೇಶ್ ಎಂಬುವರಿಗೆ 4500 ರೂ,ಹರಾಜು ಮಾಡಿದ್ದು,ಬಿದರಕೆರೆ ಹಿಂಬಾಗದ ಸರ್ವೆ ನಂ 30 ರಲ್ಲಿ 20 ಗುಂಟೆ ತರಿ ಜಮೀನು 4000ರೂ ಗೆ ನಿಂಗಪ್ಪ ಎಂಬುವರಿಗೆ,ಹೂವಿನಹಳ್ಳಿ ಕಾವಲು ಸರ್ವೆ ನಂ 05 ರಲ್ಲಿ 20 ಗುಂಟೆ, 1400 ರೂ ಮೋಹನ್ ಎಂಬುವರಿಗೆ, ಸರ್ವೆ ನಂ 477ರಲ್ಲಿ 40*120 ಅಳತೆಯ ಹಳೆಯ ಅಂಗನವಾಡಿ ಜಾಗವನ್ನು 11 ತಿಂಗಳ ಅವದಿಗೆ ಸುಮಾರು 1.22,000 ರೂ ಸೇರಿದಂತೆ ಸುಮಾರು 1.31.900.ರೂ ಪಡೆದು ಹರಾಜಿನಲ್ಲಿ ನೀಡಲಾಗಿದೆ.ಆದರೆ ಸರ್ಕಾರಿ ಜಾಗವನ್ನು ಶಾಲಾ ಮಂಡಳಿಯವರು ಯಾವ ಆಧಾರದ ಮೇಲೆ ಹರಾಜು ಮಾಡಿದ್ದಾರೆ.ಹರಾಜು ಮಾಡಲು ಅವಕಾಶ ಕೊಟ್ಟವರು ಯಾರು.ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಬಿಟ್ಟಿದ್ದೇಕೆ..ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಅನುಮಾನ ಹುಟ್ಟುಹಾಕಿದೆ.ಕೂಡಲೆ ತಹಸೀಲ್ದಾರ್ ಹಾಗೂ ಸಂಭಂದಪಟ್ಟ ಇಲಾಖೆ ಸ್ಥಳ ಪರಿಶೀಲಿಸಿ ಶಾಲಾ ಆಡಳಿತ ಮಂಡಳಿ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು.ಲೈಸೆನ್ಸ್ ಇಲ್ಲದೆ ಅಕ್ರಮವಾಗಿ ನಿರ್ಮಾಣ ಮಾಡಿರುವ ಹೋಟೆಲ್ ತೆರವುಗೊಳಿಸದಿದ್ದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಸ್ಥಳಿಯರು ಒತ್ತಾಯ ಮಾಡಿದ್ದಾರೆ.

Related posts

ಡಾ. ಸಾಗರ್ ಜಾನೇ ಕೆರೆಯವರಿಗೆ ಸಾಲು ಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್

Bimba Prakashana

ಸಕಲೇಶಪುರದಲ್ಲಿ ಸುಸಜ್ಜಿತ ಮನೆ

Bimba Prakashana

ಅಂಗನವಾಡಿ ಶಿಕ್ಷಕಿ ತುಳಸಿ ನಿವೃತ್ತಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More