ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ರಾಧಮ್ಮ ಜನಸ್ಪಂದನ ಸಂಸ್ಥೆ ವತಿಯಿಂದ ಹಾಸನದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಭವನದಲ್ಲಿ ಪತ್ರಕರ್ತರ ಕುಟುಂಬದ ಮಕ್ಕಳಿಗೆ ಉಚಿತವಾಗಿ ಗರ್ಭ ಕೊರಳ ಕ್ಯಾನ್ಸರ್ ಲಸಿಕೆಯಾದ ಎಚ್ ಪಿ ವಿ ವ್ಯಾಕ್ಸಿನ್ ಅನ್ನು ಹಾಸನದ ಪ್ರಸೂತಿ ಸ್ತ್ರೀ ರೋಗ ಸಂಘ ವೈದ್ಯರೊಂದಿಗೆ ನೀಡಲಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಧಮ್ಮ ಸ್ಪಂದನದ ಆಲೂರು ಹೇಮಂತ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಈ ಗರ್ಭ ಕೊರಳ ಕ್ಯಾನ್ಸರ್ ಬರುವುದಕ್ಕಿಂತ ಮುಂಚಿತವಾಗಿ ಲಸಿಕೆ ಇದೆ. ಅದನ್ನ ಸರಿಯಾದ ಸಮಯಕ್ಕೆ ಹೆಣ್ಣು ಮಕ್ಕಳಿಗೆ ಹಾಕಿಸಿದರೆ ಕ್ಯಾನ್ಸರ್ ರೋಗ ಬರುವುದಿಲ್ಲ ಎಂದು ಪ್ರತಿಯೊಬ್ಬರಿಗೂ ತಿಳಿಯಬೇಕು ಎಂದರೆ ಪತ್ರಕರ್ತರ ಸುದ್ದಿ ಮಾಡುವ ಮುಖಾಂತರವೇ ಮನೆ ಮನೆಗೆ ತಲುಪಿಸಬಹುದು. ಇಂತಹ ಜವಾಬ್ದಾರಿಯ ಕೆಲಸವನ್ನ ಪತ್ರಕರ್ತರು ಮಾಡಿ ದೇಶದ ಆರೋಗ್ಯ ಸಮಾಜಕ್ಕಾಗಿ ನಿರ್ವಹಿಸಬೇಕೆಂದು ನುಡಿದರು.
ರಾಜ್ಯ ಸರ್ಕಾರಕ್ಕೆ ಎಲ್ಲ ಮಾಧ್ಯಮದ ಮಿತ್ರರು ಜಿಲ್ಲೆಗೆ ಬರುವಂತ ಉಸ್ತುವಾರಿ ಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮಕ್ಕಳಿಗೆ ಉಚಿತವಾಗಿ ಹಾಕಿಸಬೇಕೆಂದು ಬೇಡಿಕೆಯನ್ನು ಸಲ್ಲಿಸಿ ಎಂದು ಮನವಿ ಮಾಡಿದರು.
ನಮ್ಮ ಸಂಸ್ಥೆ ವತಿಯಿಂದ ಈಗಾಗಲೇ ಆಲೂರು ತಾಲೂಕಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಕೊಟ್ಟು 400ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಇಲ್ಲಿಯವರೆಗೂ ಉಚಿತವಾಗಿ ಲಸಿಕೆಯನ್ನು ಹಾಕಿಸಿದ್ದು ಬಹಳ ಮಂದಿಗೆ ಹಣದ ಕೊರತೆ ಇಲ್ಲ ಎಂದರು.
ಲಸಿಕೆ ಇದೆ ಎಂಬ ಮಾಹಿತಿಯೇ ಇನ್ನು ತಿಳಿದಿರಲಿಲ್ಲ ಇಂತಹ ಸಂದರ್ಭದಲ್ಲಿ ಹಾಸನದ ವೈದ್ಯರಾದ ಪ್ರೇಮಲತಾ ಪ್ರಸೂತಿ ಸ್ತ್ರೀರೋಗ ಸಂಘದ ಅಧ್ಯಕ್ಷರು ಇವರೊಂದಿಗೆ ಮಲೆನಾಡು ನರ್ಸಿಂಗ್ ಹೋಮ್ ಡಾ. ಸಾವಿತ್ರಿ ಮತ್ತು ಡಾಕ್ಟರ್ ಇಂಪನ ಹಾಗೂ ಡಾ. ಪ್ರತೀಕ್ಷ ಎಲ್ಲರ ಸಹಕಾರದೊಂದಿಗೆ ನಮ್ಮ ಸಮಾಜದಲ್ಲಿ ಇಂತಹ ಮಾರಣಾಂತಿಕ ಕಾಯಿಲೆಯನ್ನು ತಡೆಗಟ್ಟಲು ಶ್ರಮಿಸುತ್ತಿದ್ದೇವೆ.
ಇದರೊಂದಿಗೆ ಪತ್ರಕರ್ತರ ಸಹಕಾರ ಕೂಡ ಅವಶ್ಯಕವಾಗಿರುತ್ತದೆ ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು ಎಂದು ನುಡಿದರು..
ಡಾ.ಪ್ರೇಮಲತಾ ಪ್ರಸೂತಿ ಸ್ತ್ರೀ ರೋಗ ತಜ್ಞ ಸಂಘದ ಅಧ್ಯಕ್ಷರು ಕಾರ್ಯಕ್ರಮ ಉದ್ದೇಶಿಸಿ ಹೇಮಂತ್ ಕುಮಾರ್ ಅವರು ಹಾಸನ ಜಿಲ್ಲೆಯ ಪತ್ರಕರ್ತರ ಭವನದಲ್ಲೇ ಇಂತಹ ಕಾರ್ಯಕ್ರಮವನ್ನು ಏರ್ಪಡಿಸಿ ಪತ್ರಕರ್ತರ ಮಕ್ಕಳಿಗೆ ಉಚಿತವಾಗಿ ಲಸಿಕೆ ಸಹ ಅವರ ವೈಯಕ್ತಿಕ ದುಡಿಮೆಯಲ್ಲಿ ಹಾಕಿಸುತ್ತಿರುವುದು ಶ್ಲಾಘನೀಯ..ಅವರ ಸೇವೆಗೆ ವೈದ್ಯರು ಅಭಿನಂದಿಸುತ್ತೇವೆ ಈಗಾಗಲೇ ಭಾರತ ದೇಶವು ಕ್ಯಾನ್ಸರ್ ಎಂಬ ಮಾರಣಾಂತಿಕ ಕಾಯಿಲೆಯಲ್ಲಿ ರೆಡ್ ಜೋನಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ ನಮ್ಮ ದೇಶದಲ್ಲಿ ಗರ್ಭ ಕೊರಳ ಕ್ಯಾನ್ಸರ್ ಗೆ ವ್ಯಾಕ್ಸಿನ್ ಇದ್ದರೂ ಕೂಡ ಇಲ್ಲಿಯವರೆಗೂ ಶೇಕಡ 3% ಮಾತ್ರ ವ್ಯಾಕ್ಸಿನ ತೆಗೆದುಕೊಂಡಿದ್ದಾರೆ.ಇದು ಅತ್ಯಂತ ಅಪಾಯಕಾರಿ ವಿಷಯ. ಮುಂದಿನ ಮಹಿಳೆಯರ ಆರೋಗ್ಯ ವಿಚಾರಕ್ಕೆ ಇದನ್ನು ಅರಿತು ನಮ್ಮ ಜಿಲ್ಲಾ ಪ್ರಸೂತಿ ಸ್ತ್ರೀ ರೋಗ ಸಂಘದಿಂದ ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ 3000 ಮಕ್ಕಳಿಗೆ ಲಸಿಕೆಯನ್ನು ಹಾಕಿಸಲಾಗಿದೆ ಮಾಧ್ಯಮದವರ ಸಹಕಾರವು ಕೂಡ ಈಗ ಲಭಿಸಿದ್ದು ಮುಂದಿನ ದಿನಗಳಲ್ಲಿ ಇನ್ನು ದೊಡ್ಡ ಮಟ್ಟಕ್ಕೆ ಲಸಿಕೆ ಅಭಿಯಾನವನ್ನು ಮತ್ತು ಅರಿವು ಕಾರ್ಯಕ್ರಮವನ್ನು ಮಾಡಲಾಗುವುದು ಎಂದು ಹೇಳಿದರು..
ಮಲೆನಾಡು ನರ್ಸಿಂಗ್ ಹೋಮ್ ಡಾ. ಸಾವಿತ್ರಿ ಅವರು ಕಾರ್ಯಕ್ರಮ ಉದ್ದೇಶಿಸಿ ರೋಗ ಬರುವುದಕ್ಕಿಂತ ಮುಂಚೆ ಜವಾಬ್ದಾರಿಯನ್ನು ಅರಿತುಕೊಂಡು ಲಸಿಕೆ ತೆಗೆದುಕೊಂಡರೆ ಸುರಕ್ಷಿತವಾಗಿ ಕುಟುಂಬದಲ್ಲಿ ಬದುಕಬಹುದು. ಅಂತಿಮ ಘಟ್ಟಕ್ಕೆ ಬಂದಾಗ ಆರೋಗ್ಯಕ್ಕೆ ಎಷ್ಟು ಲಕ್ಷಾಂತರ ರೂಪಾಯಿ ಖರ್ಚು ಮಾಡಿದರು ಏನು ಪ್ರಯೋಜನ ಇಲ್ಲ. ಈ ಸಂದರ್ಭವನ್ನ ಈಗಿನ ಮಹಿಳೆಯರು ಸೃಷ್ಟಿಸಿ ಕೊಳ್ಳುತ್ತಿದ್ದಾರೆ. ಇದನ್ನ ತಡೆಗಟ್ಟಬೇಕೆಂದರೆ ಅವರು ತಮ್ಮ ಆರೋಗ್ಯಕ್ಕೆ ಲಸಿಕೆಯನ್ನು ಹಾಕಿಕೊಳ್ಳುವುದು ಸೂಕ್ತವಾಗಿದೆ. ಈ ಲಸಿಕೆಯಿಂದ ಯಾವುದೇ ದುಷ್ಟ ಪರಿಣಾಮಗಳಿಲ್ಲ ಎಂದು ಈಗಾಗಲೇ ವೈದ್ಯರು ದೃಢೀಕರಿಸಿದ್ದಾರೆ. ಇದರ ಬಗ್ಗೆ ರಾಜ್ಯಸಭೆಯಲ್ಲಿ ಸುಧಾ ಮೂರ್ತಿಯವರು ಲಸಿಕೆ ಹಾಕಿಸಬೇಕು ಎಂಬ ವಿಚಾರವನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ಗಮನವನ್ನು ಸಹ ಸೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರವು ಹೇಮಂತ್ ಕುಮಾರ್ ಅವರು ಮಾಡುತ್ತಿರುವ ಕೆಲಸವನ್ನ ಸರ್ಕಾರವೇ ಮಾಡಿದರೆ ಒಳಿತು ಎಂದು ನುಡಿದರು.
ಪತ್ರಕರ್ತರ ಸಂಘದ ಅಧ್ಯಕ್ಷರಾಗಿರುವ ಕೆಂಚೇಗೌಡ್ರು ಕಾರ್ಯಕ್ರಮ ಉದ್ದೇಶಿಸಿ ಹೇಮಂತ್ ಕುಮಾರ್ ಅವರೊಂದಿಗೆ ಮುಂದಿನ ದಿನಗಳಲ್ಲಿ ನಾವು ಸಹ ಕೈಜೋಡಿಸುತ್ತೇವೆ. ಈಗ ಅವರು ವೈಯಕ್ತಿಕ ದುಡಿಮೆಯಿಂದ ಈ ಲಸಿಕೆಯನ್ನು ಸಂಘದ ಪದಾಧಿಕಾರಿಗಳ ಕುಟುಂಬದವರಿಗೆ ಹಾಕಿಸುತ್ತಿದ್ದಾರೆ ಅವರಿಗೆ ಅಭಿನಂದಿಸುತ್ತಾ ಮುಂದಿನ ವರ್ಷ ಪತ್ರಕರ್ತರ ಸಂಘದಿಂದ ಎಲ್ಲಾ ಮಾಧ್ಯಮದ ಕುಟುಂಬದವರಿಗೆ ಹಾಕಿಸಲಾಗುವುದು. ಈ ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲಾ ವೈದ್ಯರಿಗೂ ಧನ್ಯವಾದಗಳು ಸಹ ತಿಳಿಸುತ್ತೇನೆ. ಎಲ್ಲಾ ವೈದ್ಯರ ಜೊತೆ ಪತ್ರಕರ್ತರ ಸಂಘ ಸದಾಕಾಲ ಬೆಂಬಲಿಸಲಿದೆ.
ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ಪತ್ರಿಕೆಗಳಲ್ಲಿ ಹೆಚ್ಚು ಮಹತ್ವವನ್ನು ಸಹ ನೀಡಲಾಗುವುದು ಎಂದು ಕಾರ್ಯಕ್ರಮದ ಉದ್ದೇಶಿಸಿ ನುಡಿದರು.
ಈ ಕಾರ್ಯಕ್ರಮದಲ್ಲಿ ಚೈತ್ರ ನಾಯಕ್ ರಲ್ಲಿ ವೈದ್ಯರಾದ ಡಾ. ಇಂಪನ ಪತ್ರಕರ್ತರ ಸಂಘದ ಪದಾಧಿಕಾರಿಗಳು ಇನ್ನು ಮುಂತಾದವರು ಹಾಜರಿದ್ದರು


