Blog

ಹಳೆ ಬೀಡು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗರ್ಭ ಕಂಠ ಕ್ಯಾನ್ಸರ್ ಬಗ್ಗೆ ಅರಿವು

ಮಹಿಳೆಯರಿಗೆ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಕಡ್ಡಾಯವಾಗಿ ಹೆಚ್.ಪಿವಿ ಲಸಿಕೆ ಹಾಕಿಸಿಕೊಳ್ಳುವಂತೆ ಆಡಳಿತಾಧಿಕಾರಿ ಡಾ.ಅನಿಲ್ ಸಲಹೆ ನೀಡಿದರು.
   ತಾಲ್ಲೂಕಿನ ಹಳೇಬೀಡು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯರಿಗೆ ಗರ್ಭಕಂಠ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲಾಯಿತು.
      ಈ ಕಾರ್ಯಕ್ರಮದಲ್ಲಿ ಹಳೇಬೀಡು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಅನಿಲ್ ಮಾತನಾಡಿ,ಕ್ಯಾನ್ಸರ್ ಭಯಪಡುವಂತಹ ಕಾಯಿಲೆಯಲ್ಲ.ಮಹಿಳೆಯರು ಹೆಚ್ಚಾಗಿ ಗರ್ಭಕಂಠ ಕ್ಯಾನ್ಸರ್ ನಿಂದ ಬಳಲುತ್ತಿದ್ದು,ಈಗಾಗಲೆ ಸರ್ಕಾರದ ವತಿಯಿಂದ ಉಚಿತವಾಗಿ ವ್ಯಾಕ್ಸಿನ್ ನೀಡಲಾಗುತ್ತಿದೆ. ನಮ್ಮ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ಮಾಡಲಾಗಿದ್ದು ಹೆಚ್ಚಾಗಿ 14 ವರ್ಷದಿಂದ ಮೇಲ್ಪಟ್ಟ ಮತ್ತು 18 ವರ್ಷದ ಒಳಗಿನ ಮಹಿಳೆಯರು ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬೇಕು.ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಮಹಿಳೆಯರು ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು.ಪೌಷ್ಟಿಕಾಂಶ ವಿರುವ ಆಹಾರಗಳನ್ನು ಸೇವಿಸಬೇಕು.ಜೊತೆಗೆ ವ್ಯಾಕ್ಸಿನ್ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಮಕ್ಕಳ ತಜ್ಞರಾದ ಡಾ.ಮೋನಿಕಾ ರವರು ಮಾತನಾಡಿ,ಗರ್ಭಕಂಠ ಕ್ಯಾನ್ಸರ್ ಒಂದು ವೈರಸ್.HPV ವ್ಯಾಕ್ಸಿನ್ ಪಡೆಯುವುದರಿಂದ ಗರ್ಭಕಂಠದ ಕ್ಯಾನ್ಸರ್ ಜೊತೆಗೆ ಸ್ತನ ಕ್ಯಾನ್ಸರ್,ಗರ್ಭಕೊರಳ ಕ್ಯಾನ್ಸರ್ ಕೂಡ ತಡೆಗಟ್ಟಬಹುದು.ಎಲ್ಲಾ 14 ವರ್ಷದಿಂದ 18 ವರ್ಷದ ಒಳಗಿರುವ ಮಹಿಳೆಯರಿಗೆ ಸರ್ಕಾರ 1 ಡೋಸ್ ಉಚಿತವಾಗಿ ನೀಡುತ್ತಿದೆ.ಇತ್ತೀಚಿನ ದಿನಗಳಲ್ಲಿ ಪ್ರತಿ 08 ನಿಮಿಷಕ್ಕೆ ಒಬ್ಬರು ಮೃತಪಡುವ ಸನ್ನಿವೇಶಗಳು ಹೆಚ್ಚಾಗಿ ಕಂಡುಬಂದಿರುವುದರಿಂದ ಕಡ್ಡಾಯವಾಗಿ ಹೆಚ್ ಪಿವಿ ವ್ಯಾಕ್ಸಿನ್  ಬಳಕೆ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
    ಪ್ರಾರ್ಥಮಿಕ ಆರೋಗ್ಯ ಸುರಕ್ಷಾಧಿಕಾರಿ ಲತಾ ಮಾತನಾಡಿ,ವಿದೇಶಿಗಳಿಗಿಂತ ಭಾರತ ದೇಶದಲ್ಲಿ ಗರ್ಭಕಂಠ ಕ್ಯಾನ್ಸರ್ ಹೆಚ್ಚಾಗಿ ಕಂಡುಬಂದಿರುವುದರಿಂದ ಹೆಚ್ಚಾಗಿ 14 ವರ್ಷ ದಿಂದ ಮೇಲ್ಪಟ್ಟ ಮಕ್ಕಳು ಇಂತಹ ರೋಗಕ್ಕೆ ತುತ್ತಾಗುತ್ತಿದ್ದಾರೆ.ಈ ಕ್ಯಾನ್ಸರ್ ತಡೆಗಟ್ಟುವ ಸಲುವಾಗಿ ಸರ್ಕಾರ ಉಚಿತವಾಗಿ ಹೆಚ್.ಪಿವಿ ವ್ಯಾಕ್ಸಿನ್ ಲಸಿಕೆ ಹಾಕಿಸಿಕೊಳ್ಳುವಂತಹ ಸೌಲಭ್ಯ ನೀಡಿದೆ.ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಬೆಲೆ 10 ಸಾವಿರಕ್ಕೂ ಅದಿಕ ಇರುವುದರಿಂದ ಈಗಾಗಲೆ ನಮ್ಮ ವ್ಯಾಪ್ತಿಯಲ್ಲಿ ಜನಸಂಖ್ಯೆ ಆಧಾರದ ಮೇಲೆ 1% ಹೆಣ್ಣುಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ.ಇದರ ಸದುಪಯೋಗವನ್ನು ಪಡೆಯುವ ಜೊತೆಗೆ ನಿಮ್ಮಅಕ್ಕ ಪಕ್ಕದ ಸಂಭಂದಿಕರಿಗೂ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಸಹಕರಿಸಿ ಎಂದು ಸಲಹೆ ನೀಡಿದರು.
  ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಸವಿತಾ ನಾಯಕ್,ಹಿರಿಯ ಪ್ರಾರ್ಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶೈಲಜಾ,ಆಶಾಕಾರ್ಯಕರ್ತೆಯರಾದ ವಸಂತ,ಸುನಿತಾ,ಪುಷ್ಪ ಸೇರಿದಂತೆ ಮತ್ತಿತರರು ಇದ್ದರು.

ವರದಿ
ಅರುಣ್ ರಾಜಪುತ್

Related posts

ಡಾ. ಬಿ ಆರ್ ಅಂಬೇಡ್ಕರ್ ರ ಜನ್ಮ ದಿನಾಚರಣೆ

Bimba Prakashana

ಟ್ಯಾಂಕ್ ಗೆ ಬಿದ್ದು ಬಾಲಕ ಮೃತ್ಯು

Bimba Prakashana

ಸಕಲೇಶಪುರ ಕುಶಾಲನಗರದಲ್ಲಿ ಸರಣಿ ಗೋ ಮಾಂಸ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More