Blog

ಮಲೆನಾಡು ಭೀಮ ಧ್ವನಿ ಸಂಘದಿಂದ ಸನ್ಮಾನ

ಸಕಲೇಶಪುರ : ಸಮಾಜ ಕಲ್ಯಾಣ ಇಲಾಖೆಯಿಂದ 2026-27 ನೇ ಸಾಲಿಗೆ ನೀಡಲಾಗುವ ರಾಜ್ಯಮಟ್ಟದ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಗ್ರಾಮದ, ಹಿರಿಯ ಜನಪರ ಹೋರಾಟಗಾರರಾದ ಹೆಚ್.ಎ.ನ್.ಅಣ್ಣಯ್ಯ ರವರನ್ನು
ಮತ್ತು ನಿವೃತ್ತ ಪಿ ಡಿ ಓ ಕೋಮರಯ್ಯ ರವರನ್ನು
ಮಲೆನಾಡು ಭೀಮ ಧ್ವನಿ ಸಂಘ (ರಿ ) ರವರಿಂದ ಸನ್ಮಾನಿಸಲಾಯಿತು.

ದಿನಾಂಕ 14.04.2026 ರಂದು ವಿಧಾನಸೌಧದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಸರ್ಕಾರದ ವತಿಯಿಂದ *ಮಲೆನಾಡ ಸಿರಿ*, *ದಲಿತ ಕಣ್ಮಣಿ* ಬಿರುದಿನೊಂದಿಗೆ 2026 ನೇ ಸಾಲಿನ ಡಾ|| ಬಿ.ಆರ್ ಅಂಬೇಡ್ಕರ್ ರಾಜ್ಯ ಪ್ರಶಸ್ತಿ ನೀಡಿಪ್ರಶಸ್ತಿ ಪ್ರಧಾನ ಮಾಡಲಾಗಿತ್ತು.
ಹಾಗೂ   2025 ನೇ ಸಾಲಿನಲ್ಲಿ ಜಿಲ್ಲಾ  ಮಟ್ಟದ ಡಾ||ಬಿ.ಆರ್ ಅಂಬೇಡ್ಕರ್ ರವರ ಪ್ರಶಸ್ತಿಯನ್ನು     ನಿವೃತ್ತ ಪಿ.ಡಿ.ಓ‌ ಹಾಗೂ ದಲಿತ ಮುಖಂಡರಾದ ಕೊಮಾರಯ್ಯ ರವರಿಗೆ ನೀಡಲಾಗಿತ್ತು. ಅವರಿಗೂ ಕೂಡ ಸನ್ಮಾನ ಮಾಡುವ ಮೂಲಕ  ಗೌರವಪೂರ್ವ ಅಭಿನಂದನೆಗಳನ್ನು ತಿಳಿಸಲಾಯಿತು.

ಮಲೆನಾಡು ಭೀಮಧ್ವನಿ ಸಂಘ (ರಿ) ದಿಂದ ಅಭಿನಂದನಿಸಲಾಯಿತು.
ಈ ಸಂದರ್ಭದಲ್ಲಿ ಸಂಘ ದ ಅಧ್ಯಕ್ಷರಾದ ನಾಗೇಶ್ ಎಂ ಎಚ್ ಮಾಗೇರಿ, ಕಾರ್ಯದರ್ಶಿ ಸುರೇಶ್ ಬಿ ಡಿ, ವಸಂತ ಕುಮಾರ್ ವಿ ಎಂ
ವನಗೂರು ಯೋಗೇಶ್ ಡಿ ಆರ್ ದೊಡ್ಡ ಕಲ್ಲೂರು,ರಾಮಚಂದ್ರ ರಾವ್ ಬ್ಯಾಗಡಹಳ್ಳಿ, ನಾಗೇಶ್ ವಿ ಕೆ ವನಗೂರು,  ರವರು ಭಾಗವಹಿಸಿದ್ದರು.

Related posts

🔴ಕರ್ನಾಟಕ ಪಬ್ಲಿಕ್ ಶಾಲೆ ಹೆತ್ತೂರಿನಲ್ಲಿ ಮಕ್ಕಳಿಗೆ ಅಕ್ಷರ ಅಭ್ಯಾಸ ಕಾರ್ಯಕ್ರಮ.

🔴ಪೋಷಕರಿಂದ ಉತ್ತಮ ಪ್ರತಿಕ್ರಿಯೆ – ಶಿಕ್ಷಣದ ಮೊದಲ ಹೆಜ್ಜೆಗೆ ಶುಭಾರಂಭ.

ಸಕಲೇಶಪುರ :-  ಕರ್ನಾಟಕ ಪಬ್ಲಿಕ್ ಶಾಲೆ ಹೆತ್ತೂರು ಪೂರ್ವ ಪ್ರಾಥಮಿಕ ವಿಭಾಗದ ಎಲ್‌ಕೆಜಿ ತರಗತಿಗೆ ಹೊಸದಾಗಿ ಸೇರ್ಪಡೆಯಾದ ಮಕ್ಕಳಿಗೆ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶಿಕ್ಷಕ ವೃಂದದವರ ವತಿಯಿಂದ ಅಕ್ಷರ ಅಭ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಿರಿಯ ಅರ್ಚಕರಾದ ಶ್ರೀಯುತ ಮೂರ್ತಿ ಅವರು ಮಕ್ಕಳಿಗೆ ಅಕ್ಷರ ಅಭ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಮಂಜುನಾಥ್ ಅವರು ಮಾತನಾಡಿ, ಅಕ್ಷರ ಅಭ್ಯಾಸ ಕಾರ್ಯಕ್ರಮವು ಮಕ್ಕಳಲ್ಲಿ ಹೊಸ ಚೈತನ್ಯ ಹಾಗೂ ಉತ್ಸಾಹ ತುಂಬಲಿ ಎಂದು ಹಾರೈಸಿದರು. ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ನಡೆಯುವ ಸಂಪ್ರದಾಯದ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿರುವುದು ಸಂತಸದ ವಿಷಯ ಎಂದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕರಡಿಗಾಲ ಹರೀಶ್ ಅವರು ಮಾತನಾಡಿ, ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿದ್ದು, ಓದು ಹಾಗೂ ಸೃಜನಾತ್ಮಕ ಚಟುವಟಿಕೆಗಳತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.

ಶಾಲಾ ಶಿಕ್ಷಕಿ ಶ್ರೀಮತಿ ತೇಜಸ್ವಿನಿ ಅವರು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು ಹಾಗೂ ಶಾಲೆಯಲ್ಲಿನ ಕಲಿಕಾ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಶಿಕ್ಷಕರಾದ ಮಹೇಶ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ,ಶಿಕ್ಷಕಿಯರಾದ ಸುನಂದಾ ,ರೂಪ ,ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.

Bimba Prakashana

ಹೆನ್ನಲಿ ಗ್ರಾಮದ ಯುವಕ ನಾಪತ್ತೆ – ಮಾಹಿತಿ ನೀಡಿ

Bimba Prakashana

ರಾಷ್ಟೀಯ ಹೆದ್ದಾರಿ ಸಮಸ್ಯೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More