Blog

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಹುಟ್ಟುಹಬ್ಬ

ಆಲೂರು. ದೇಶ ಕಂಡ ಅಪ್ರತಿಮ ನಾಯಕ ಹಾಗೂ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರು ರೈತರ ಪರ ಸದಾ ಧ್ವನಿಯಾಗಿದ್ದು, ರೈತರ ಹಿತಕ್ಕಾಗಿ ನಿರಂತರ ಹೋರಾಟ ನಡೆಸಿದ ನಾಯಕರು ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್. ಮಂಜೇಗೌಡ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರ 94ನೇ ಹುಟ್ಟುಹಬ್ಬದ ಅಂಗವಾಗಿ ಜೆಡಿಎಸ್ ವತಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಲಾಯಿತು. ಬಳಿಕ ಕಾರ್ಯಕರ್ತರೊಂದಿಗೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್. ಮಂಜೇಗೌಡ, ದೇವೇ ಗೌಡರು ಪ್ರಧಾನ ಮಂತ್ರಿಯಾಗಿದ್ದ ಅಲ್ಪಾವಧಿ ಯಲ್ಲಿಯೇ ದೇಶದ ಅಭಿವೃದ್ಧಿ ಹಾಗೂ ರೈತರ ಶ್ರೇಯೋಭಿ ವೃದ್ಧಿಗಾಗಿ ಶ್ರಮಿಸಿದರು ಎಂದು ಹೇಳಿದರು.

ಇಳಿವಯಸ್ಸಿನಲ್ಲಿಯೂ ದೇಶದ

ಹಾಗೂ ರೈತರ ಸಮಸ್ಯೆಗಳ ಕುರಿತು ಸದನದಲ್ಲಿ ಧ್ವನಿ ಎತ್ತುತ್ತಿರುವ ಅವರು, ವಿಶೇಷವಾಗಿ ನೀರಾವರಿ ವಿಷಯದಲ್ಲಿ ರೈತರ ಪರ ಹೋರಾಟ ಮುಂದುವರಿಸಿದ್ದಾರೆ. ದೇವರು ಅವರಿಗೆ ಇನ್ನಷ್ಟು ಶಕ್ತಿ, ಆಯುರಾರೋಗ್ಯ ನೀಡಿ ಅವರ ಸೇವೆ ದೇಶಕ್ಕೆ ಮುಂದುವರಿಯಲಿ ಎಂದು ಹಾರೈಸಿದರು.

ದೇವೇಗೌಡರ ಮಾರ್ಗ ಅಭಿವೃದ್ಧಿ ಅವರ ದರ್ಶನದಲ್ಲಿ ರಾಜ್ಯ ಸಾಧಿಸಬಹುದು. ರಾಜಕೀಯ ಜೀವನ ಇನ್ನಷ್ಟು ಕಾಲ ಮುಂದುವರಿಯಲು ದೇವರು ಶಕ್ತಿ

ನೀಡಲಿ ಹಾಗೂ ರಾಜ್ಯ ಸುಭಿಕ್ಷದತ್ತ ಸಾಗಲಿ ಎಂದು ಆಶಿಸಿದರು.

ಹಿಂದುಳಿದ ವರ್ಗಗಳ ಹಿರಿಯ ಮುಖಂಡ ಬಿ.ಸಿ. ಶಂಕರಾಚಾರ್ ಮಾತನಾಡಿ, ಹಾಸನ ಜಿಲ್ಲೆಯ ಸಣ್ಣ ಗ್ರಾಮದಲ್ಲಿ ಜನಿಸಿದ ದೇವೇಗೌಡರು ಹಳ್ಳಿಯಿಂದ ದಿಲ್ಲಿವರೆಗೆ ರಾಜಕೀಯ ಪಯಣ ಮಾಡಿ ಹಿಂದುಳಿದ ವರ್ಗ ಗಳಿಗೆ ರಾಜಕೀಯ ಅಧಿಕಾರದ ದಾರಿ ತೆರೆದ ನಾಯಕರು ಎಂದು ಹೇಳಿದರು.

ಸ್ಥಳೀಯ ಸಂಸ್ಥೆಗಳ ಚುನಾ ವಣೆಯಲ್ಲಿ ಮೀಸಲಾತಿ ಜಾರಿಗೆ ತಂದು ಗ್ರಾಮ ಪಂಚಾಯಿತಿಯಿಂದ



ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರೆಗೆ ಹಿಂದುಳಿದ ಹಾಗೂ ಶೋಷಿತ ವರ್ಗದ ಜನರು ಸದಸ್ಯರು, ಅಧ್ಯಕ್ಷರು, ಮೇಯರ್ ಗಳಾಗಲು ಅವಕಾಶ ಕಲ್ಪಿಸಿದ ಶ್ರೇಯಸ್ಸು ದೇವೇಗೌಡರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಪಿ.ಎಲ್. ನಿಂಗರಾಜು, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಸ್.ಎನ್. ಪ್ರಕಾಶ್, ತಾಪಂ ಮಾಜಿ ಸದಸ್ಯ ಸಿ.ವಿ. ಲಿಂಗರಾಜು, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಡಿ.ಎಸ್. ಜಯಣ್ಣ, ಹೆಚ್.ಬಿ. ಧರ್ಮರಾಜು, ಕೆ.ವಿ. ಮಲ್ಲಿಕಾರ್ಜುನ, ಯೋಗೇಶ್, ಸುರೇಶ್, ಪ್ರಕಾಶ್ ಹುಣಸವಳ್ಳಿ, ದಲಿತ ಮುಖಂಡರಾದ ಅರಸಪ್ಪ, ಬಸವರಾಜು, ಜೆಡಿಎಸ್ ಮುಖಂಡರಾದ ಮಂಜೇಗೌಡ ಹೋತನಹಳ್ಳಿಪುರ, ಅಶೋಕ, ಚಿದಾನಂದ್, 2.໖. ರಾಜೇಗೌಡ, ಲಿಂಗರಾಜಗೌಡ, ದೇವೇಗೌಡ, ಜಯಪ್ಪ ಪಾಳ್ಯ, ಅಶ್ವತ್ ಸಿಂಗಾಪುರ, ಜಯಪಾಲು, ಕಾಂತರಾಜು, ಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related posts

ಮದುವೆ ಮುಗಿಸಿ ಬರುತ್ತಿದ್ದವರಿಗೆ ಅಪಘಾತ – 3 ಮೃತ್ಯು

Bimba Prakashana

ಹಿಂದೂ ಹಿತ ರಕ್ಷಣಾ ವೇದಿಕೆಯ ಕ್ಯಾಲೆಂಡರ್ ಬಿಡುಗಡೆ

Bimba Prakashana

ಕೆಂದನ ಮನೆಯಲ್ಲಿ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More