ಸಕಲೇಶಪುರ ಇಸ್ಪೀಟ್ ಹಾಗು ದಂದೆ ಕೋರರಿಗೆ ಸ್ವರ್ಗ
ಸಕಲೇಶಪುರ: ಇಸ್ಪೀಟ್ ಹಾಗು ದಂದೆ ಕೊರರಿಗೆ ಸಕಲೇಶಪುರ ಸ್ವರ್ಗವಾಗಿದೆ. ರಾಜ್ಯದ ವಿವಿಧ ಪ್ರದೇಶಗಳಿಂದ ಜೂಜಾಡಲು ಸಕಲೇಶಪುರಕ್ಕೆ ಬರುತ್ತಿದ್ದಾರೆ. ಸಕಲೇಶಪುರ ತನ್ನದೇ ಹೆಸರಿನಿಂದ ರಾಜ್ಯದಲ್ಲಿ ವಿಷಿಷ್ಠ ಖ್ಯಾತಿಯಾಗಿದ್ದ ಊರು ಈಗ ಇಸ್ಪೀಟ್ ದಂಧೆಯಿಂದ ಕುಖ್ಯಾತಿಗೆ ಒಳಗಾಗುತ್ತಿದೆ. ಎಂದು ಸಕಲೇಶಪುರ ನಾಗರೀಕರು ಆತಂಕಕ್ಕೊಳಗಾಗುತ್ತಿದ್ದಾರೆ.
ಸಕಲೇಶಪುರ ತಾಲೂಕು ನಿತ್ಯಹರಿದ್ವರಣ ಪ್ರಕೃತಿ ವೈಭವದ, ಶಾಂತ ಜೀವನಶೈಲಿ ಮತ್ತು ಸಹಬಾಳ್ವೆಯ ಸಂಸ್ಕೃತಿಗಾಗಿ ತನ್ನದೇ ಆದ ಗೌರವಕ್ಕೆ ಪಾತ್ರವಾಗಿದ್ದ ಪ್ರದೇಶ. ಇತ್ತೀಚಿನ ದಿನಗಳಲ್ಲಿ ಈ ಶಾಂತತೆನಾಡಿನಲ್ಲಿ ಮರಳು ಮಾಪಿಯಾ . ಅಕ್ರಮ ಇಸ್ಪೀಟ್ (ಜೂಜು) ಕ್ಲಬ್‌ಗಳ ಹೆಚ್ಚಳವಾಗಿದೆ.
ಹೋಟೆಲ್‌ಗಳ ಒಳಭಾಗ, ಬಾಡಿಗೆ ಮನೆಗಳು, ಗೋದಾಮುಗಳಂತೆ ಕಾಣುವ ಕಟ್ಟಡಗಳು. ರೆಸಾರ್ಟ್ ಹೋಂ ಸ್ಟೇ ಗಳಲ್ಲಿಹಾಗೂ ಕೆಲವೆಡೆ “ಮನರಂಜನಾ ಕ್ಲಬ್” ಎಂಬ ಹೆಸರಿನ ಮುಖವಾಡದ ಅಡಿಯಲ್ಲಿ ಈ ಇಸ್ಪೀಟ್ ಕ್ಲಬ್‌ಗಳು ನಿರಂತರ ಕಾರ್ಯನಿರ್ವಹಿಸುತ್ತಿದ್ದು, ಹೊರಗೆ ಕಾಣಿಸದ ಈ ಜಾಲ ಒಳಗಿನಿಂದ ಸಮಾಜದ ಬೇರುಗಳನ್ನು ನಿಧಾನವಾಗಿ ಸಡಿಲಗೊಳಿಸುತ್ತಿವೆ.
ಸುಲಭವಾಗಿ ಹಣ ಗಳಿಸುವ ಮಾರ್ಗ, ಕಾನೂನು ಸಡಿಲತೆ ಹಾಗೂ ರಾಜಕೀಯ ನಾಯಕರುಗಳ ಮುಲಾಜಿ ಇಸ್ಪೀಟ್ ಕ್ಲಬ್‌ಗಳ ಅಟ್ಟಹಾಸಕ್ಕೆ ಪ್ರಮುಖ ಕಾರಣಗಳಾಗಿವೆ.
ನಿರುದ್ಯೋಗ ಬಡತನ ಇರುವರು.ಕೂಲಿ ಕಾರ್ಮಿಕರು ಮತ್ತು ಆರ್ಥಿಕ ಒತ್ತಡದಲ್ಲಿರುವ ಜನರನ್ನು ಗುರಿಯಾಗಿಸಿಕೊಂಡು, ಈ ಕ್ಲಬ್‌ಗಳು ವ್ಯವಸ್ಥಿತವಾಗಿ ಜನರನ್ನು ಸೆಳೆದು ಹಣ ಹೀರುವ ತಂತ್ರ ಅನುಸರಿಸುತ್ತಿವೆ. ಇಸ್ಪೀಟ್ ಈಗ ಕೇವಲ ಆಟವಲ್ಲ, ಒಮ್ಮೆ ಒಳಗೆ ಹೋದ ವ್ಯಕ್ತಿ ಮೊದಲು ತನ್ನ ಉಳಿತಾಯವನ್ನು ಕಳೆದುಕೊಳ್ಳುತ್ತಾನೆ, ಬಳಿಕ ಮನೆಯ ಹಣ, ಸಾಲ ಮತ್ತು ಆಸ್ತಿಯ ಮೇಲೂ ಕೈ ಹಾಕುವ ಸ್ಥಿತಿಗೆ ತಲುಪುತ್ತಾನೆ. ಕೊನೆಗೆ ಮನೆಯ ಪಾತ್ರೆಗಳನ್ನು ಮಾರಿಕೊಳ್ಳುತ್ತಾನೆ.
ಇದರಿಂದ ಕುಟುಂಬಗಳಲ್ಲಿ ಕಲಹ ಉಂಟಾಗುತ್ತಿದೆ. ಗಂಡ–ಹೆಂಡತಿಯ ನಡುವೆ ನಂಬಿಕೆಯ ಕುಸಿತ, ಮಕ್ಕಳ ಶಿಕ್ಷಣದ ಮೇಲೆ ದುಷ್ಪರಿಣಾಮ ಹಾಗೂ ಮಹಿಳೆಯರ ಮೇಲೆ ಹೆಚ್ಚುವರಿ ಆರ್ಥಿಕ ಒತ್ತಡಗಳು ಹೆಚ್ಚುತ್ತಿವೆ. ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗವೇ ಇಸ್ಪೀಟ್ ಕ್ಲಬ್‌ಗಳ ಮುಖ್ಯ ಗುರಿಯಾಗಿದ್ದು, ದಿನಗೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಖಾಸಗಿ ನೌಕರರು ಹಾಗೂ ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. ಇತ್ತೀಚೆಗೆ ಕೊರಲು ಗದ್ದೆ ರೇಣುಖ ಎಂಬ ವ್ಯಕ್ತಿ ಆತ್ಮಹತ್ಯೆಗೆ ಬಲಿಯಾದ ಘಟನೆ ಸಹ ಸಕಲೇಶಪುರ ಆಡಳಿತ ವ್ಯವಸ್ಥೆ ವೈಪಲ್ಯ ಹಾಗು ಕ್ಲಬ್ ದಂದೆಯ ಪ್ರಮುಖ ಕರಾಳ ಮುಖ ಅನಾವರಣಗೊಂಡಿದೆ.
ಒಂದು ದಿನದ ಗೆಲುವಿನ ಆಸೆ ನೂರು ದಿನಗಳ ಸೋಲುವ ಪರಿಸ್ಥಿತಿಯಲ್ಲಿ ನಾಗರೀಕರು ಹಣ ಕಳೆದುಕೊಳ್ಳುವುದು ತಾಲ್ಲೂಕಿನಲ್ಲಿ ಸಾಮಾನ್ಯವಾಗುತ್ತಿದೆ.
ಇಸ್ಪೀಟ್ ಚಟ ನೇರವಾಗಿ ಅಪರಾಧಗಳಿಗೆ ದಾರಿ ಮಾಡಿಕೊಡುತ್ತದೆ ಎಂಬುದು ಅನೇಕ ಅಧ್ಯಯನಗಳಿಂದ ಸಾಬೀತಾಗಿದೆ. ಹಣಕ್ಕಾಗಿ ಕಳ್ಳತನ, ವಂಚನೆ, ಬೆದರಿಕೆ, ಜಗಳ, ಹಲ್ಲೆ ಹಾಗೂ ಕಾನೂನು ಉಲ್ಲಂಘನೆಗಳ ಹಿಂದೆ ಇಸ್ಪೀಟ್‌ನ ಹಿನ್ನೆಲೆ ಇರುವುದನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಹಿಡಿದು ಕಾನೂನು ತಜ್ಞರು . ಮೇದಾವಿಗಳು ಸ್ಪಷ್ಟವಾಗಿ ಹೇಳುತ್ತಿದ್ದರೂ ನಿರಂತರವಾಗಿ ಗಡಿಯತ್ತಿವೆ ಈ ಅಕ್ರಮ ದಂಧೆಗಳು.
ಇದರಿಂದ ಕೇವಲ ವ್ಯಕ್ತಿಯ ಜೀವನವಲ್ಲ, ಸಾರ್ವಜನಿಕ ಶಾಂತಿ ಮತ್ತು ಕಾನೂನು ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತಿದೆ.
ಯುವಜನರ ಭವಿಷ್ಯಕ್ಕೂ ಈ ಅಕ್ರಮ ಇಸ್ಪೀಟ್ ಕ್ಲಬ್‌ಗಳು ಮಾರಕವಾಗಿ ದೊಡ್ಡ ಭೀತಿ ಹುಟ್ಟಿಸಿವೆ. “ಹಣ” ಮಾಡುವ ಕನಸನ್ನು ಬಿತ್ತುವ ಮೂಲಕ ಕೆಲವು ಕ್ಲಬ್‌ಗಳು ಯುವಕರನ್ನು ಸುಲಭವಾಗಿ ಸೆಳೆದು, ಅವರನ್ನು ಶಿಕ್ಷಣದಿಂದ ದೂರಮಾಡುತ್ತಿವೆ. ಇದು ಮುಂದಿನ ಪೀಳಿಗೆಯ ನಾಗರೀಕತೆ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ.
ಇಸ್ಪೀಟ್ ಮತ್ತು ಜೂಜು ಕಾನೂನಾತ್ಮಕವಾಗಿ ಅಪರಾಧವಾಗಿದ್ದರೂ, ಪರಿಣಾಮಕಾರಿ ನಿಯಂತ್ರಣ ಇಲ್ಲ. ಪೋಲೀಸರೇ ಸಹಕಾರ ನೀಡುತ್ತಿದ್ದಾರೆಂಬ ಆರೋಪಗಳು ಪ್ರತಿನಿತ್ಯ ಕೇಳಿಬರುತ್ತಿವೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಅಧಿಕಾರಿಗಳ ಒಳ ಒಪ್ಪಂದದಕಾನೂನು ಜನರಲ್ಲಿ ಭಯ ಹುಟ್ಟಿಸಲು ವಿಫಲವಾಗಿದೆ .
ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಜನಪ್ರತಿನಿಧಿಗಳು ಮತ್ತು ಆಡಳಿತ ಯಂತ್ರ ಕಠಿಣ ನಿರ್ಧಾರ ಕೈಗೊಳ್ಳಬೇಕಾದ ಅಗತ್ಯವಾಗಿದೆ. ತಾತ್ಕಾಲಿಕ ದಾಳಿ . ಮೂರು ದಿನ ನಿಲ್ಲಿಸುವುದು. ಕ್ರಮ ಕೈಗೊಳ್ಳದೆ ರಾಜಿ ಸಂಧಾನಗಳಿಂದ ಯಾವುದೇ ಪ್ರಯೋಜನ ಇಲ್ಲ. ಪೋಲೀಸರ ನಿರಂತರ ನಿಗಾ ಮತ್ತು ಕಾರ್ಯಾಚರಣೆ, ನಿರಂತರವಾಗಿರಬೇಕು. ಕ್ಲಬ್ ನಡೆಸುವವರ ಮೇಲೆ ಗಂಭೀರ ಪ್ರಕರಣಗಳ ದಾಖಲಿಸಬೇಕು ಹಾಗೂ ಭಾರೀ ಆರ್ಥಿಕ ದಂಡ ವಿಧಿಸುವ ಕ್ರಮಗಳನ್ನು ಕೈಗೊಳ್ಳಬೇಕೆಂಬುದು ಸಕಲೇಶಪುರ ನಾಗರಿಕರ ಅಭಿಪ್ರಾಯವಾಗಿದೆ
ಪುರಸಭೆ ಮತ್ತು ಗ್ರಾಮ ಪಂಚಾಯಿತಿಗಳು ಪರವಾನಗಿ ಇಲ್ಲದ ಹಾಗೂ ಅನುಮಾನಾಸ್ಪದ ಕಟ್ಟಡಗಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂಬ ಆಚಂಗಿಯ ಹೊಂ ಸ್ಟೇ ಮತ್ತಿತರ ಹೋಂ ಸ್ಟೇ – ರೆಸಾರ್ಟ್ ಗಳಲ್ಲಿ ಅಕ್ರಮ ದಂದೆಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸಕಲೇಶಪುರ ನಾಗರೀಕರು ಪತ್ರಿಕೆ ಮೂಲಕ ಒತ್ತಾಯ ಮಾಡಿದ್ದಾರೆ
ಹಾಗೆಯೇ ಸಾರ್ವಜನಿಕರ ಸಹಭಾಗಿತ್ವವೂ ಅತ್ಯಂತ ಮುಖ್ಯವಾಗಿದೆ. ಮಾಹಿತಿ ನೀಡುವ ನಾಗರಿಕರಿಗೆ ರಕ್ಷಣೆ ನೀಡುವುದು, ನಾಗರಿಕ ಸಮಿತಿಗಳ ರಚನೆ ಮತ್ತು ಯುವಕರಿಗಾಗಿ ವಿವಿಧ ಕ್ರೀಡೆಗಳು, ಉದ್ಯೋಗ ತರಬೇತಿಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುವುದು . ಯುವ ಜನರಿಗೆ ಉದ್ಯೋಗ ಹೆಚ್ಚಿದರೆ ಇಸ್ಪೀಟ್ ಜಾಲ ತನ್ನಿಂದ ತಾನೇ ದುರ್ಬಲ ಆಗುತ್ತದೆ.
ಕಳೆದ ಮೂರು ತಿಂಗಳಿಂದ ಪ್ರತಿ ದಿನ ಸಕಲೇಶಪುರ ತಾಲೋಕು ಒಂದರಲ್ಲೇ 40 ರಿಂದ 50 ಲಕ್ಷ ಟರ್ನ್ ಅವರ್ ಇಸ್ಟೆಟ್ ದಂದೆ ನಡೆಯುತ್ತಿದೆ. ಇದರ ಬಗ್ಗೆ ಪೋಲೀಸರಿಗೆ ನಾಗರೀಕರೇ ಮಾಹಿತಿ ನೀಡಿದರು ಯಾವುದೇ ಕ್ರಮ ಕೈಗೊಳ್ಳದಷ್ಟು ಸಕಲೇಶಪುರ ಹದಗೆಟ್ಟು ಹೋಗಿದೆ ಕೂಡಲೇ ಕ್ರಮ ಕೈಗೊಳ್ಳಲು ನಾಗರೀಕರು ಒತ್ತಾಯಿಸಿದ್ದಾರೆ.
ಸಕಲೇಶಪುರ ಟಾನ್ ಫೋಲೀಸ್ ಠಾಣೆ ಪಕ್ಕದಲ್ಲೇ ಎಸ್ ಎಂ ಟವರ್ ನಲ್ಲಿ ರಾಜಾರೋಷವಾಗಿ ಕ್ಲಬ್ ನಡೆಯುತ್ತಿದೆ.
ಡಿವೈಎಸ್ಪಿ ಕಛೇರಿ ಬಳಿ ಶಿವಾನಿ ವೈನ್ಸ್ ಹತ್ತಿರ ಕ್ಲಬ್ ನಡೆಯುತ್ತಿದೆ. ಪೋಲೀಸರ ಆಶ್ರಯದಲ್ಲೇ ಕ್ಲಬ್ ನಿರಾತಂಕವಾಗಿ ನಡೆಯುತ್ತಿದೆ. KA 01 MA 3010 ಮಾರುತಿ ಸುಜುಕಿ ಆಲ್ಟೋ ಗಾಡಿಯಲ್ಲಿ ಅಥವಾ ಮತ್ತೊಂದು ಗಾಡಿಯಲ್ಲಿಪೋಲೀಸರು ಹಣ ವಸೂಲಿಗೆ ಶ್ರೀಗಂದ ಹೋಟೆಲ್ ಹತ್ತಿರ ನಿಂತಿರುತ್ತಾರೆ. ಮರಳು ಮಾಪಿಯಾ .ಇಸ್ಟೀಟ್ ದಂದೆ. ಮರಗಳ್ಳರು ಎಲ್ಲಾ ನಿಗದಿಯಾದಂತಹ ಹಣ ನೀಡಿ ಹೋಗುತ್ತೇವೆ ಎಂದು ದಂದೆಕೋರರೇ ಹೇಳುತ್ತಾರೆ. ಈಗ ಹೆಚ್ಚು ಹಣಕ್ಕೆ ಒತ್ತಾಯ ಮಾಡುತ್ತಿರುವುದರಿಂದ ಪತ್ರಕರ್ತರ ಎದುರು ತಮ್ಮ ಅಳಲನ್ನು ಹೇಳಿಕೊಳ್ಳುತ್ತಿದ್ದಾರೆ. ಆದರೆ ನಾವು ಹೇಳಿದ್ದು ಎಂದು ಹೇಳಬೇಡಿ ನಮ್ಮ ವ್ಯವಹಾರ ಕಟ್ ಆಗುತ್ತದೆ. ನಮ್ಮ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದು ಹೇಳುತ್ತಿದ್ದಾರೆ.
ನಿರುದ್ಯೋಗ ಬಡತನಕ್ಕೆ ಹಣದಾಹವೇ ಇಸ್ಪೀಟ್ ಕ್ಲಬ್‌ಗಳ ಶಕ್ತಿಯಾಗಿದ್ದು, ಆ ಖಾಲಿತನವನ್ನು ಸಕಾರಾತ್ಮಕ ಚಟುವಟಿಕೆಗಳಿಂದ ತುಂಬುವ ಅಗತ್ಯವಿದೆ.
ಒಟ್ಟಾರೆ, ಇಸ್ಪೀಟ್ ಕ್ಲಬ್‌ಗಳು ಸಕಲೇಶಪುರಕ್ಕೆ ಕೇವಲ ಕಾನೂನು ಸಮಸ್ಯೆಯಲ್ಲ, ಒಂದು ಸಾಮಾಜಿಕ ಬದ್ದತೆಯಾಗಿದೆ ಮತ್ತು ಯುದ್ಧವಾಗಿದೆ.
ಇಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ, ನಾಳೆ ಸಮಾಜವೇಇದರ ಪರಿಣಾಮ ಎದುರಿಸ ಬೇಕಾಗುತ್ತದೆ ಎಂಬ ಎಚ್ಚರಿಕೆ ನಾಗರಿಕ ವಲಯದಲ್ಲಿ ಪ್ರತಿನಿತ್ಯ ಕೇಳಿಬರುತ್ತಿದೆ.
ನಾಗರಿಕರ ಹೇಳಿಕೆ (ಬಾಕ್ಸ್ )
ಇಸ್ಪೀಟ್ ಕ್ಲಬ್‌ಗಳ ಬಗ್ಗೆ ಮಾತನಾಡಿದ ಒಬ್ಬ ದಿನಗೂಲಿ ಕಾರ್ಮಿಕ, “ಇಲ್ಲಿ ಇಸ್ಪೀಟ್‌ಗೆ ಹೋದವರು ಸಾಲದ ಚಕ್ರದಿಂದ ಹೊರಬರಲಾಗುತ್ತಿಲ್ಲ. ಅನೇಕ ಮನೆಗಳು ಹಾಳಾಗಿವೆ” ನೆಮ್ಮದಿಯೇ ಇಲ್ಲಎಂದು ಆತಂಕ ವ್ಯಕ್ತಪಡಿಸಿದರು.
ಮತ್ತೊಬ್ಬ ಮಹಿಳೆ, “ಗಂಡ ಇಸ್ಪೀಟ್‌ಗೆ ಹೋಗಿ ಹಣ ಕಳೆದುಕೊಂಡು ಬಂದ ಮೇಲೆ ಮನೆಯಲ್ಲೇ ಜಗಳ ಶುರುವಾಗುತ್ತದೆ. ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ” ಮುಂದೆ ಮಕ್ಕಳೂ ಸಹ ಸಮಾಜದ ಕಂಠಕರಾಗಿ ಬೆಳೆಯುತ್ತಾರೆ.ಎಂದು ನೋವು ಹಂಚಿಕೊಂಡರು.
ಯುವಕನೊಬ್ಬ, “ ಹಣದ ಆಸೆ ತೋರಿಸಿ ನಮ್ಮಂತಹ ಯುವಕರನ್ನು ತಪ್ಪು ದಾರಿಗೆ ತಳ್ಳುತ್ತಿದ್ದಾರೆ. ಇದನ್ನು ತಡೆಯಲೇಬೇಕು” ಎಂದರೆ, ಹಿರಿಯ ನಾಗರಿಕರೊಬ್ಬರು “ದಾಳಿ ನಡೆದರೂ ಮತ್ತೆ ಕ್ಲಬ್ ತೆರೆಯುತ್ತದೆ. ಶಾಶ್ವತ ಪರಿಹಾರ ಬೇಕು” ಎಂದು ಆಡಳಿತದ ವ್ಯವಸ್ಥೆ ವಿರುದ್ಧ ತೀವ್ರಅಸಮಾಧಾನ ವ್ಯಕ್ತಪಡಿಸಿದರು. ಐದರಿಂದ ಹತ್ತು ಇಪ್ಪತ್ತು ವರ್ಷ ಠಿಕಾಣಿ ಹೂಡಿರುವ ಪೋಲೀಸರಿಂದ ಲೇ ಅಕ್ರಮ ದಂದೆಗಳು ನಿರ್ಭಿತಿಯಿಂದಸಾಗುತ್ತಿವೆ.
ಅಕ್ರಮ ದಂಧೆಗೆ ಕಡಿವಾಣ ಎಂದು ಎಂದು ಜನ ಪ್ರಶ್ನಿಸಿದ್ದಾರೆ.
ವರದಿ :
ನಾಗೇಶ್ ಎಂ ಎಚ್ ಮಾಗೇರಿ.
previous post
