Blog

ಆಲೂರು ಕಲಿವೀರ್ ಗೆ ಶೇ 98 ಫಲಿತಾಂಶ

ಆಲೂರು ತಾಲೂಕಿನ ಪಟ್ಟಣದಲ್ಲಿರುವ  ಕಲಿವೀರ್ ವಸತಿ ಪ್ರೌಢಶಾಲೆ. ಆಲೂರು ಈ ಶಾಲೆಯು ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ 98% ರಷ್ಟು ಫಲಿತಾಂಶ ಪಡೆದಿದ್ದು ಸರ್ಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಯಲ್ಲಿಯೇ  ಅತಿ ಹೆಚ್ಚು ಅಂಕ ಅಂದರೆ 595 ( ಟಿ0ಚನ. ಟಿ. ಸಿ) ಅಂಕ ಪಡೆದ ಶಾಲೆಯಾಗಿ ಹೊರಹೊಮ್ಮಿದೆ.

ಈ ಶಾಲೆಗೆ ಬರುವ ಗರಿಷ್ಟ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿದ್ದು  ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಆ ನಿಟ್ಟಿನಲ್ಲಿ 2025-26 ನೇ ಸಾಲಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದ 48 ವಿದ್ಯಾರ್ಥಿಗಳಲ್ಲಿ (25 ಬಾಲಕರು ಮತ್ತು 22 ಬಾಲಕಿಯರು ) ಒಟ್ಟು 47 ವಿದ್ಯಾರ್ಥಿಗಳು  ಉತ್ತೀರ್ಣರಾಗಿರುತ್ತಾರೆ. ಶಾಲೆಯು ಪ್ರತಿ ವರ್ಷ ಉತ್ತಮ ಫಲಿತಾಂಶ ನೀಡುತ್ತಾ ಬಂದಿದ್ದು ಶೈಕ್ಷಣಿಕವಾಗಿ,ಸಾಂಸ್ಕೃತಿಕವಾಗಿ, ವಿಜ್ಞಾನ,ಕ್ರೀಡೆ, ಕಲಾ ವಿಭಾಗಗಳಲ್ಲಿ  ತಾಲೂಕು,ಜಿಲ್ಲೆ, ಹಾಗೂ ರಾಜ್ಯಮಟ್ಟದಲ್ಲಿ  ಉತ್ತಮ ಸಾಧನೆ ಮಾಡುತ್ತಾ ಬಂದಿರುತ್ತದೆ.

ಈ ಅತ್ಯುತ್ತಮ ಸಾಧನೆಗೆ ಕಾರಣರಾದ ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಶ್ರೀ ಕಲಿವೀರ್ ವಿದ್ಯಾಸಂಸ್ಥೆ(ರಿ)ಯ ಕಾರ್ಯದರ್ಶಿಗಳಾದ ಶ್ರೀಮತಿ ಭಾಗ್ಯ ಕಲಿವೀರ್ ರವರು ಹಾಗೂ ಶ್ರೀ ಕಲಿವೀರ್ ವಸತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ. ಡಿ. ವಾಸುದೇವ್ ರವರು,,, ಶಾಲೆಯ ಹಿರಿಯ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು, ಹಾಗೂ ಸುತ್ತಮತ್ತಲಿನ ಗ್ರಾಮಸ್ಥರುಗಳು ಅಭಿನಂದನೆ ಸಲ್ಲಿಸಿರುತ್ತಾರೆ.

Related posts

ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ

Bimba Prakashana

ಯುವ ಮೋರ್ಚಾ ಅಧ್ಯಕ್ಷರಾಗಿ ನಿಖಿಲ್ ಹಲಸುಲಿಗೆ

Bimba Prakashana

ಶಿರಸ್ತೆದಾರ್ ಉಮೇಶ್ ರಿಗೆ ಬೀಳ್ಕೊಡುಗೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More