Blog

ಬೇಲೂರುನಲ್ಲಿ ಗೋವುಗಳನ್ನ ರಕ್ಷಣೆ ಮಾಡಿದ ವಿ ಹಿಂ ಪ ಭಜರಂಗ ದಳ

ಖಚಿತ ಮಾಹಿತಿ ಮೆರಗೆ ಅಕ್ರಮವಾಗಿ ಕಸಾಯಿ ಕಾನೆಗೆ ಸಾಗಿಸುತ್ತಿದ್ದ ಗೋವುಗಳನ್ನು  ರಕ್ಷಣೆ ಮಾಡಿದ  ವಿಶ್ವ ಹಿಂದೂ ಪರಿಷತ್ ಬಜರಂಗದಳ ಮತ್ತು ಬೇಲೂರು ಪೊಲೀಸರು


ಬೇಲೂರು ತಾಲೂಕಿನ ಹನಿಕೆ ಸಂತೆಯ ಬಳಿ ಅಕ್ರಮವಾಗಿ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ, ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ದಾಳಿ ನಡೆಸಿ 17 ಗೋವುಗಳನ್ನು ರಕ್ಷಿಸಿದ ಘಟನೆ ನಡೆದಿದೆ. ರಕ್ಷಿಸಲಾದ ಗೋವುಗಳನ್ನು ಅರಸೀಕೆರೆಯ ಕಸ್ತೂರಿಬಾ ಗೋಶಾಲೆಗೆ ಕಳುಹಿಸಲಾಗಿದೆ.

ಹನಿಕೆ ಸಂತೆ ಈ ಭಾಗದಲ್ಲಿ ಜಾನುವಾರುಗಳ ಪ್ರಮುಖ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದ್ದು, ಇಲ್ಲಿಂದ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ಅಕ್ರಮವಾಗಿ ಗೋ ಸಾಗಾಣಿಕೆ ನಡೆಯುತ್ತಿರುವ ಬಗ್ಗೆ ಹಿಂದಿನಿಂದಲೂ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳು ಪತ್ತೆಯಾಗಿಲ್ಲ ಎಂಬುದು ತಿಳಿದುಬಂದಿದೆ.




🔹 ಪ್ರಮುಖ ಅಂಶಗಳು

✔️ ಹನಿಕೆ ಸಂತೆಯ ಬಳಿ ಅಕ್ರಮ ಗೋ ಸಾಗಾಣಿಕೆ ಬಗ್ಗೆ ಖಚಿತ ಮಾಹಿತಿ ದೊರಕಿತು

✔️ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರಿಂದ ಕಾರ್ಯಾಚರಣೆ

✔️ ಸ್ಥಳೀಯ ಪೊಲೀಸ್, ಗ್ರಾಮ ಪಂಚಾಯಿತಿ ಮತ್ತು ಪಶುವೈದ್ಯರ ಸಹಕಾರ

✔️ ಒಟ್ಟು 17 ಗೋವುಗಳನ್ನು ರಕ್ಷಣೆ (ಗಂಡು ಕರುಗಳು, ಎಮ್ಮೆ, ಹಾಲು ಹಸುಗಳು)

✔️ ಗೋವುಗಳನ್ನು ಅರಸೀಕೆರೆಯ ಕಸ್ತೂರಿಬಾ ಗೋಶಾಲೆಗೆ ಸಾಗಣೆ

✔️ ಆರೋಪಿಗಳ ಸುಳಿವು ಇನ್ನೂ ಪತ್ತೆಯಾಗಿಲ್ಲ





🗣️ ಪ್ರತಿಕ್ರಿಯೆಗಳು

ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಭರತ್ ಅವರು ಮಾತನಾಡಿ,
ಇತ್ತೀಚಿನ ದಿನಗಳಲ್ಲಿ ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುವ ಘಟನೆಗಳು ಹೆಚ್ಚಾಗುತ್ತಿರುವುದು ವಿಷಾದನೀಯ. ಸ್ಥಳೀಯರ ಬೆಂಬಲದಿಂದಲೇ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು.

ಕಾರ್ಯದರ್ಶಿ ನಾಗೇಶ್ ಅವರು ಮಾತನಾಡಿ,
ಹಿಂದೆ ಇದ ತಹಸೀಲ್ದಾರ್ ನೇತೃತ್ವದಲ್ಲಿ ಕಸಾಯಿಖಾನೆಗಳ ಮೇಲೆ ದಾಳಿ ನಡೆದಿದ್ದರೂ, ಗೋ ಹತ್ಯೆ ಸಂಪೂರ್ಣವಾಗಿ ನಿಲ್ಲಲಿಲ್ಲ. ಕೆಲವು ಅಧಿಕಾರಿಗಳು ಲಂಚ ಪಡೆದು ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.ಮುಂದಿನ ದಿನಗಳಲ್ಲಿ ಗೋ ಹತ್ಯೆ ಗೋ ಸಾಗಾಣಿಕೆ ಸಂಪೂರ್ಣವಾಗಿ ನಿಷೇಧಿಸಬೇಕು  ಈ ಬಗ್ಗೆ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು  ಎಂದು ಅಗ್ರಹ ಮಾಡಿದರು.

ಬೇಲೂರಿನಲ್ಲಿ ಗೋ ಮಾಂಸ ದಂಧೆ ಮಿತಿ ಮೀರಿ ನಡೆಯುತ್ತಿದೆ ಎಂದು ಆರೋಪ


ಹನಿಕೆ ಸಂತೆ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ

ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ





👮 ಹಾಜರಿದ್ದವರು

ಪೋಲಿಸ್ ಅಧಿಕಾರಿಗಳು: ಶೇಖರಪ್ಪ, ದೇವರಾಜ್, ನಾಗೇಶ್

ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು

Related posts

ವನಗೂರು ಎಸ್ಟೇಟ್ ಗೆ ಹೆಚ್ ಕೆ ಕುಮಾರ ಸ್ವಾಮಿ ಭೇಟಿ

Bimba Prakashana

ಯಸಳೂರು : ದೇವರಾಜ್ ಮೇಲೆ ಕೇಸು ದಾಖಲು

Bimba Prakashana

ಸಕಲೇಶಪುರ ಪುರಸಭೆ ವ್ಯಾಪ್ತಿಯ ವಾರ್ಡಲ್ಲಿ ಕಸದ ಸಮಸ್ಯೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More