ಕಟ್ಟೆಗದ್ದೆ ನಾಗರಾಜ್ ಅವರ ಅವರ ನೂತನ ‘ಕೆ
ಕೆ 2 N’ ಹೋಟೆಲ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರೀತಂ ಗೌಡ ಭೇಟಿ
ಆಲೂರು.ಬಾಳು ಪೇಟೆ : ಪಟ್ಟಣದ ಬಿಜೆಪಿ ಮುಖಂಡರು ಹಾಗೂ ಸಮಾಜ ಸೇವಕರಾದ ಕಟ್ಟೆಗೆದ್ದೆ ನಾಗರಾಜು ಅವರ ನೂತನ ‘ K 2N. ಹೋಟೆಲ್‌ಗೆ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೀತಂ ಜೆ. ಗೌಡ ಅವರು ಭೇಟಿ ನೀಡಿ ಶುಭ ಹಾರೈಸಿದರು.
ನಂತರ ಮಾತನಾಡಿದ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ನಮ್ಮ ಪಕ್ಷದ ಮುಖಂಡ ಕಟಕದ್ದೆ ನಾಗರಾಜ್ ಅವರು ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹಾಗೂ ಯುವ ಮುಖಂಡ ಕಳೆದ ಒಂದು ತಿಂಗಳ ಹಿಂದೆ ಇವರ ಹೋಟೆಲ್ ಉದ್ಯಮಕ್ಕೆ ನಮ್ಮನ್ನು ಉದ್ಘಾಟನೆಗೆ ಕರೆದಿದ್ದರು ಕಾರಣಾಂತರಗಳಿಂದ ರಾಜಕೀಯ ಒತ್ತಡಗಳಿಂದ ಆಗಮಿಸಲು ಸಾಧ್ಯವಾಗದ ಕಾರಣದಿಂದಾಗಿ ಇಂದು ಹಾಸನದಲ್ಲಿ ಹಲವು ಕಾರ್ಯಕ್ರಮಗಳ ನಿಮಿತ್ತವಾಗಿ ಬಂದು ಇಂದು ಕಟ್ಟದೆ ನಾಗರಾಜ್ ಅವರ ರೆಸ್ಟೋರೆಂಟ್ ಹಾಗೂ ಹೋಟೆಲ್ ಉದ್ಯಮಕ್ಕೆ ಶುಭ ಹಾರೈಸಿದ್ದೇವೆ ಇವರ ಬಗ್ಗೆ ನಾವು ಕೇಳಿದ್ದೇವೆ ಇವರ ಉದ್ಯಮಗಳು ರಾಜಕೀಯ ಬೆಳವಣಿಗೆಗಳು ಸಮಾಜಮುಖಿ ಕೆಲಸಗಳು ಆಲೂರು ತಾಲೂಕಿನಲ್ಲಿ ಕಂಡುಬಂದಿವೆ ಇವರ ಉದ್ಯಮ ಹಾಗೂ ಸಮಾಜಮುಖಿ ಚಟುವಟಿಕೆಗಳು ಇನ್ನೂ ಉತ್ತಮವಾಗಿ ಬರಲಿ ಇವರ ಉದ್ಯಮಗಳು ಯಶಸ್ವಿಯಾಗಿ ನಡೆಯಲಿ ಮುಂದಿನ ದಿನಗಳಲ್ಲಿ ಇವರಿಗೆ ಪಕ್ಷ ಕೂಡ ಉತ್ತಮ ಸ್ಥಾನಮಾನ ನೀಡಲು ನಮ್ಮ ವರಿಷ್ಠರ ಜೊತೆ ಮಾತನಾಡುತ್ತೇವೆ ಎಂದು ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಹಾಗೂ ಬಿಜೆಪಿ ಹಾಸನ ಜಿಲ್ಲಾಧ್ಯಕ್ಷರಾದ ಸಿದ್ದೇಶ್ ನಾಗೇಂದ್ರ ಅವರು ಉಪಸ್ಥಿತರಿದ್ದರು.
ಹೋಟೆಲ್ ಅಂಡ್ ರೆಸ್ಟೋರೆಂಟ್ ಹೋಟೆಲ್‌ಗೆ ಆಗಮಿಸಿದ ಗಣ್ಯರನ್ನು ಕಟ್ಟೆಗದ್ದೆ ನಾಗರಾಜ್ ಆತ್ಮೀಯವಾಗಿ ಸ್ವಾಗತಿಸಿ, ಗೌರವಿಸಿದರು.
ತಮ್ಮ ನೂತನ ಉದ್ಯಮಕ್ಕೆ ಭೇಟಿ ನೀಡಿ ಶುಭ ಹಾರೈಸಿದ ಎಲ್ಲಾ ಗಣ್ಯರಿಗೆ ಕಟ್ಟೆ ಗದ್ದೆ ನಾಗರಾಜ್ ಅವರು ಅವರು ಸನ್ಮಾನಿಸಿದ ಗೌರವಿಸಿ ಕೃತಜ್ಞತೆ ಸಲ್ಲಿಸಿದರು.
