ಪುನೀತ್ ಬನ್ನಳ್ಳಿ ಅವರ ನೂತನ ‘ದಿ ಹಿಲ್ಟ್ ಸೂಟ್’ ಹೋಟೆಲ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರೀತಂ ಗೌಡ ಭೇಟಿ
ಸಕಲೇಶಪುರ: ಪಟ್ಟಣದ ಬಿಜೆಪಿ ಮುಖಂಡರು ಹಾಗೂ ಸಮಾಜ ಸೇವಕರಾದ ಪುನೀತ್ ಬನ್ನಳ್ಳಿ ಅವರ ನೂತನ ‘ದಿ ಹಿಲ್ಟ್ ಸೂಟ್’ (THE HILT SUITE) ಹೋಟೆಲ್‌ಗೆ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೀತಂ ಜೆ. ಗೌಡ ಅವರು ಭೇಟಿ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಹಾಗೂ ಬಿಜೆಪಿ ಹಾಸನ ಜಿಲ್ಲಾಧ್ಯಕ್ಷರಾದ ಸಿದ್ದೇಶ್ ನಾಗೇಂದ್ರ ಅವರು ಉಪಸ್ಥಿತರಿದ್ದರು.
ಹೋಟೆಲ್‌ಗೆ ಆಗಮಿಸಿದ ಗಣ್ಯರನ್ನು ಪುನೀತ್ ಬನ್ನಳ್ಳಿ ಅವರು ಆತ್ಮೀಯವಾಗಿ ಸ್ವಾಗತಿಸಿ, ಗೌರವಿಸಿದರು.
ತಮ್ಮ ನೂತನ ಉದ್ಯಮಕ್ಕೆ ಭೇಟಿ ನೀಡಿ ಶುಭ ಹಾರೈಸಿದ ಎಲ್ಲಾ ಗಣ್ಯರಿಗೆ ಪುನೀತ್ ಬನ್ನಳ್ಳಿ ಅವರು ಕೃತಜ್ಞತೆ ಸಲ್ಲಿಸಿದರು.

