ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಯನ್ನು ಲೋಕಾರ್ಪಣೆ ಮಾಡಲು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ರವರು ಹಾಗೂ ಸಚಿವರುಗಳು ಸಕಲೇಶಪುರಕ್ಕೆ ಆಗಮಿಸಲಿದ್ದು , ಇದರ ಸಂಬಂಧ ಸಕಲೇಶಪುರ ತಾಲೂಕಿನ ಕೆಲವು ಕಡೆ ರಸ್ತೆ ಮಾರ್ಗಗಳನ್ನು ಸಾರ್ವಜನಿಕ ಸಂಚಾರಕ್ಕೆ ನಿಷೇಧಿಸಲಾಗಿದೆ ಹಾಗೂ ಬದಲಿ ಮಾರ್ಗಗಳನ್ನು ಕಲ್ಪಿಸಲಾಗಿರುತ್ತದೆ , ಸಾರ್ವಜನಿಕರು ಈ ಕೆಳಗಿನ ಬದಲಿ ಮಾರ್ಗಗಳಲ್ಲಿ ಸಂಚರಿಸಬೇಕಾಗಿ ಸೂಚಿಸಲಾಗಿದೆ.
1. ಹಾಸನ ಮತ್ತು ಸಕಲೇಶಪುರ ಮಾರ್ಗವಾಗಿ ಬರುವ ಸಾರ್ವಜನಿಕರು ಈಶ್ವರಹಳ್ಳಿ ಕೂಡುಗೆಯಿಂದ ಬೆಳಗೋಡು ರಸ್ತೆ ಮುಖಾಂತರ ಹೆಬ್ಬನಹಳ್ಳಿಯ ಸಮಾರಂಭ ಸ್ಥಳಕ್ಕೆ ತೆರಳುವುದು.
2. ಹಾಸನ ಮತ್ತು ಸಕಲೇಶಪುರ ಮಾರ್ಗವಾಗಿ ಬರುವ ಸಾರ್ವಜನಿಕರು ಬಾಗೆ- ಬೆಳಗೋಡು ರಸ್ತೆ ಮುಖಾಂತರ ಹೆಬ್ಬನಹಳ್ಳಿಯ ಸಮಾರಂಭ ಸ್ಥಳಕ್ಕೆ ತೆರಳುವುದು.
3. ಬೇಲೂರು ಅರೇಹಳ್ಳಿ ಮಾರ್ಗವಾಗಿ ಬರುವ ಸಾರ್ವಜನಿಕರು ಸುಂಡೇಕೆರೆ ಸರ್ಕಲ್ ಮೂಲಕ ಹೆಬ್ಬೆನಹಳ್ಳಿಯ ಸಮಾರಂಭ ಸ್ಥಳಕ್ಕೆ ತೆರಳುವುದು.
4. ಗುಲಗಳಲೆ ಚಿಕ್ಕಿ ಫ್ಯಾಕ್ಟರಿ ಮುಖಾಂತರ ಹೆಬ್ಬನಹಳ್ಳಿ ಸಮಾರಂಭ ಸ್ಥಳಕ್ಕೆ ತೆರಳುವ ರಸ್ತೆಯಲ್ಲಿ ಸಾರ್ವಜನಿಕ ಸಂಚಾರ ನಿಷೇಧಿಸಲಾಗಿದೆ.
