Blog

ಆಲೂರುನಲ್ಲಿ ರೈತ ಆತ್ಮಹತ್ಯೆ

ಆಲೂರು:- ಸಾಲಭಾದೆ ತಾಳಲಾರದೆ ರೈತನೊಬ್ಬ ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಲೂರು ತಾಲ್ಲೂಕಿನ ಮುದಿಗೆರೆ ಗ್ರಾಮದಲ್ಲಿ ಶನಿವಾರ ನಡೆದಿದೆ.

ಆಲೂರು ತಾಲೂಕಿನ ಕಸಬಾ ಹೋಬಳಿ ಮುದಿಗೆರೆ ಗ್ರಾಮದ ನಿವಾಸಿಯಾದ ತಮ್ಮಣ್ಣ ಬಿನ್ ಹನುಮಯ್ಯ (64) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

ಇವರು ಕಂದಲಿ ಯೂನಿಯನ್ ಬ್ಯಾಂಕ್ ನಲ್ಲಿ 2.5 ಲಕ್ಷ, ಭೂಮಿ ಅಭಿವೃದ್ಧಿಗಾಗಿ 2.5 ಲಕ್ಷ ಕೈ ಸಾಲ ಮಾಡಿಕೊಂಡಿರು ಸಾಲ ತೀರಿಸಲಾಗದೆ ಮನನೊಂದು ಶುಕ್ರವಾರ ರಾತ್ರಿ ಗ್ರಾಮದ ಸಮೀಪ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆಲೂರು ಪೊಲೀಸ್ ಠಾಣೆಗೆ ನೀಡಿದ ದೂರಿನಿಂದ ತಿಳಿದು ಬಂದಿದೆ.

ಮೃತರು ಒರ್ವ ಮಗಳು, ಒರ್ವ ಮಗ, ಪತ್ನಿಯನ್ನು ಅಗಲಿದ್ದಾರೆ.

ಘಟನಾ ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣ ಆಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Related posts

ಬಸ್ ಸೌಲಭ್ಯ ಕಲ್ಪಿಸಿ

Bimba Prakashana

ಹಿಂದೂ ಹಿತ ರಕ್ಷಣಾ ವೇದಿಕೆಯಿಂದ ಯೋಧರಿಗೆ ನಮನ

Bimba Prakashana

ಹೊಸೂರು ಕಳಲೆ ರಸ್ತೆ ಅಭಿವೃದ್ಧಿಗೆ ಆಗ್ರಹ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More